ನಾಪೋಕ್ಲು : ಇಲ್ಲಿನ ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ (SSF) ಚೆರಿಯಪರಂಬು ಘಟಕದ ನೂತನ ಅಧ್ಯಕ್ಷರಾಗಿ ಸಮೀರ್ ಸಖಾಫಿ ಚೆರಿಯಪರಂಬು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ದಿನಾಂಕ: 08.12.2020 ರ ಮಂಗಳವಾರದಂದು ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್ (SSF) ಚೆರಿಯಪರಂಬು ಯೂನಿಟ್ ವಾರ್ಷಿಕ ಮಹಾ ಸಭೆಯು ಮರ್ಹೂಂ ರಫೀಕ್ ಸಖಾಫಿ ಉಸ್ತಾದ್ ರವರ ಮನೆಯಲ್ಲಿ ನಡೆಯಿತು
ಕಾರ್ಯಕ್ರಮದ ನೇತ್ರತ್ವವನ್ನು ಯೂನಿಟ್ ಅಧ್ಯಕ್ಷರಾದ ರಫೀಖ್ ಸಖಾಫಿ ವಹಿಸಿದರು.ಸಭೆಯಲ್ಲಿ ನೂತನ ಆಡಳಿತ ಮಂಡಳಿಯ ಆಯ್ಕೆ ಪ್ರಕ್ರಿಯೆ ಹಾಗೂ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಡೆಯಿತು
ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರಫೀಖ್ ಸಖಾಫಿ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಆಡಳಿತ ಮಂಡಳಿಯ ಸಲಹೆಗಾರರಾಗಿ ಶಾಹಿದ್ ಹಿಮಮಿ, ರಫೀಖ್ ಸಖಾಫಿ, ಬಶೀರ್ ಪಿ. ಹೆಚ್,ಆಯ್ಕೆಯಾದರು. ಅಧ್ಯಕ್ಷರಾಗಿ ಸಮೀರ್ ಸಖಾಫಿ, ಉಪಾಧ್ಯಕ್ಷರಾಗಿ ಉವೈಸ್ ಸಖಾಫಿ, ಉನೈಸ್ ಕೆ. ಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಮೀರ್ ಎಂ. ಎ,ಸಹ ಕಾರ್ಯದರ್ಶಿಗಳಾಗಿ ಜಾಬಿರ್ ಪಿ. ಎ, ಸಾದಿಕ್ ಮುಸ್ಲಿಯಾರ್,
ಖಜಾಂಜಿ ಯಾಗಿ ಆಬಿದ್ ಖಾದಿರಿ,ಸದಸ್ಯರುಗಳಾಗಿ: ಮೆಹರೂಫ್,ಮುಸ್ತಾಖ್, ಮುಬಶೀರ್,ಹಾಫಿಝ್ ಇಂತಿಯಾಝ್,ಇಲ್ಯಾಸ್, ಸಮದ್ ಸಿರಾಜ್,ಆಸಿಫ್, ಮುನೀರ್,ಸಾದಿಕ್, ಸವಾದ್, ಇವರುಗಳು ಆಯ್ಕೆ ಯಾದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಸೆಕ್ಟರ್ ವರ್ಕಿಂಗ್ ಕಾರ್ಯದರ್ಶಿ ಗಳಾದ ಮುರ್ಷಿದ್ ಅದನಿ, ಬಶೀರ್ ಅಝಾದ್ ನಗರ್ ಮಾತನಾಡಿ ನೂತನ ಪದಾದಿಕಾರಿಗಳಿಗೆ SSF ಬಗ್ಗೆ ಸಲಹೆ ಸೂಚನೆಗಳನ್ನು ನೀಡಿ ಅವರ ಕಾರ್ಯವೈಖರಿ ಗಳ ಬಗ್ಗೆ ಮಾಹಿತಿಯನ್ನು ನೀಡಿದರು
ಈ ಸಂದರ್ಭದಲ್ಲಿ SSF ಕೊಡಗು ಜಿಲ್ಲಾ ನಾಯಕರಾದ ರಫೀಖ್ ಲತೀಫಿ,ದೀನಿ ನೇತಾರರು, SSF SYS ಕಾರ್ಯಕರ್ತರು ಹಾಜರಿದ್ದರು.


No comments
Post a Comment