ಕೊಡ್ಲಿಪೇಟೆ : ದಿನಾಂಕ 5/12/2020 ಶನಿವಾರ ಮಗ್ರಿಬ್ ನಮಾಝ್ ನಂತರ ಸುನ್ನಿ ಸೆಂಟರ್ ನಲ್ಲಿ SSF ಕೊಡಗು ಜಿಲ್ಲಾಧ್ಯಕ್ಷ ರಾದ ಅಝೀಝ್ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಲೀಲ್ ಮುಸ್ಲಿಯಾರ್ ರವರ ದುಆದೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ SYS ಕೊಡ್ಲಿ ಪೇಟೆ ಬ್ರಾಂಚ್ ಅಧ್ಯಕ್ಷರಾದ ಇಸ್ಮಾಯಿಲ್ ಎಂ ಎಂ ಉದ್ಘಾಟಿಸಿದರು. ಹಾಫಿಳ್ ಮಿಖ್ದಾದ್ ಮುಸ್ಲಿಯಾರ್ ದಿಕ್ಸೂಚಿ ಭಾಷಣ ಮಾಡಿದರು.ಹೊಸ ಸಾರಥಿಗಳ ಆಯ್ಕೆ ಗೆ ಜಲೀಲ್ ಹೊಸತೋಟ ನೇತೃತ್ವ ನೀಡಿದರು.
ಅಧ್ಯಕ್ಷರಾಗಿ ಹಾರೂನ್ ರಶೀದ್, ಪ್ರಧಾನ ಕಾರ್ಯದರ್ಶಿಯಾಗಿ ಸ್ವಾಲಿಹ್ ರಹ್ಮಾನಿ, ಕೋಶಾಧಿಕಾರಿಯಾಗಿ ಮುಹಮ್ಮದ್ ಫಾಳಿಲಿ, ಉಪಾಧ್ಯಕ್ಷರುಗಳಾಗಿ ಅಝೀಝ್ ಕೆ.ಎಸ್, ಇಸ್ಮಾಯಿಲ್ ದೊಡ್ಡಕುಂದ, ಕಾರ್ಯದರ್ಶಿಗಳಾಗಿ ಸುಲ್ತಾನ್ ರಝೀಮ್ ಬಿ.ಹೆಚ್, ಹಮೀದ್ ಎಂ.ಎಂ, ಲತೀಫ್ ಕಲ್ಲುಕೋರೆ, ಶಿಹಾಬ್ ಕಲ್ಲುಕೋರೆ, ನಿಯಾಝ್ ದೊಡ್ಡಕುಂದ, ಶರಫುದ್ದೀನ್ ಬಿ.ಐ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ಜಲಿಲ್ ಮುಸ್ಲಿಯಾರ್, ನಿಸಾರ್, ಆಶಿಕ್ ಕೆ.ಎಂ, ಹಾರಿಸ್ ಕೆ.ಕೆ, ಶಂಸುದ್ದೀನ್ ಬ್ಯಾಡಗೋಟ್ಟ, ಅಹಮದ್ ಅಶ್ಫಾಕ್ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮ ದಲ್ಲಿ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.ಹಮೀದ್ ಎಂ ಎಂ ಸ್ವಾಗತಿಸಿ, ನೂತನ ಕಾರ್ಯದರ್ಶಿ ಸ್ವಾಲಿಹ್ ರಹ್ಮಾನಿ ವಂದಿಸಿದರು.

No comments
Post a Comment