*ಸೋಮವಾರಪೇಟೆ :* ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ (SSF) ಹೊಸೂರು ಶಾಖೆ ವತಿಯಿಂದ ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಬ್ಲಡ್ ಸೈಬೋ ಹಾಗೂ ಜೀವರಕ್ಷ ರಕ್ತನಿಧಿ ಹಾಸನ ಇದರ ಸಹಭಾಗಿತ್ವದಲ್ಲಿ ನವೆಂಬರ್ 28ರಂದು ರಕ್ತದಾನ ಶಿಬಿರ ನಡೆಯಲಿದೆ. ಕೊಡಗು ಜಿಲ್ಲೆಯ ಗಡಿನಾಡು ಸಕಲೇಶಪುರ ತಾಲ್ಲೂಕಿಗೊಳಪಟ್ಟ ಶನಿವಾರಸಂತೆ ಸಮೀಪದ ಹೊಸೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಿಬಿರ ನಡೆಯಲಿದೆ. ರಕ್ತದಾನ ಮಾಡಲಿಚ್ಛಿಸುವವರು 7760584880 7760336259 9019746110 ಈ ಸಂಖ್ಯೆಗೆ ಕರೆಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಹೆಲ್ಪ್ ಡೆಸ್ಕ್ ಸಂಚಾಲಕರಾದ ಶಾಫಿ ಸಅದಿ ಸೋಮವಾರಪೇಟೆ ತಿಳಿಸಿದ್ದಾರೆ.

No comments
Post a Comment