ಸೋಮವಾರಪೇಟೆ - ಶನಿವಾರಸಂತೆ ರಸ್ತೆ ಬದಿಯಲ್ಲಿ ಅಸ್ವಸ್ಥನಾಗಿ ಬಿದ್ದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ಕರವೇ ಕಾರ್ಯಕರ್ತರು ಮತ್ತು ಗ್ರಾಮಸ್ಥರು

No comments

 ಶನಿವಾರಸಂತೆ (Times Of Coorg.In) : ಸೋಮವಾರಪೇಟೆ ಮತ್ತು ಶನಿವಾರಸಂತೆ ರಾಜ್ಯ ಹೆದ್ದಾರಿ ಹಾದು ಹೋಗುವ ಹೆಗೆಳ್ಳ ಮತ್ತು ಶಾಂತ್ವೇರಿ ಮಧ್ಯೆ ದಲ್ಲಿ ಮರಿಯನಗರದ ಹತ್ತಿರ ಇರುವ ಬೆಟ್ಟದಳ್ಳಿ ಎಂಬ ಊರಿನ ವ್ಯಕ್ತಿ ನಡೆದುಕೊಂಡು ಹೋಗುತ್ತಿರುವಾಗ ನಿಶಕ್ತಿಗೊಂಡು ರಸ್ತೆ ಬದಿಯಲ್ಲಿ ಬಿದ್ದು ಹೋಗಿರುತ್ತಾರೆ ಇದೇ ದಾರಿಯಲ್ಲಿ ತುಂಬಾ ಜನರು ತಿರುಗಾಡಿದರು ಯಾರೂ ಗಮನ ಹರಿಸಲಿಲ್ಲ .ಆದರೆ ತೋಟಕ್ಕೆಂದು ಹೆಗ್ಗಳ ಗ್ರಾಮದ ಸಜ್ಜು  ಅವರು ತೋಟಕ್ಕೆಂದು ಹೋಗುತ್ತಿರುವಾಗ ಯಾರೋ ಬಿದ್ದಿರುವುದು ನೋಡಿ . ಕರವೇ ತಾಲ್ಲೂಕು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ರವರಿಗೆ ಫೋನ್ ಮಾಡಿ ಇಲ್ಲಿ ಯಾರೋ ನಮ್ಮ ರಸ್ತೆಯಲ್ಲಿ ಬಿದ್ದಿರುತ್ತಾರೆ ಎಂದು ತಿಳಿಸುತ್ತಾರೆ .ತಿಳಿಸಿದ ಮೇರೆಗೆ         ಕರವೇ ತಾಲ್ಲೂಕು ಅಧ್ಯಕ್ಷರು ವ್ಯಕ್ತಿ ಬಿದ್ದಿರುವ ಜಾಗಕ್ಕೆ ಹೋಗಿ ಪರಿಶೀಲನೆ ಮಾಡಿ ನೋಡಿದಾಗ ತುಂಬಾ ನಿಶಕ್ತರಾಗಿ ಮಾತನಾಡಲೂ ಆಗದ ಸ್ಥಿತಿಯಲ್ಲಿ  ಬಿದ್ದಿದ್ದರು .ಇದನ್ನು ಗಮನಿಸಿದ ಕರವೇ ಕಾರ್ಯಕರ್ತರು 108 ಆಂಬುಲೆನ್ಸ್ ಗೆ ಫೋನ್ ಮಾಡಿ ಬಿದ್ದಿರುವ ವ್ಯಕ್ತಿಯನ್ನು ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ..ಈ ಸಂದರ್ಭದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷರು ಫ್ರಾನ್ಸಿಸ್ ಡಿಸೋಜಾ ಮತ್ತು ಹೆಗ್ಗಳ ಗ್ರಾಮದ ಸಜ್ಜು ಮತ್ತು ಕೂಗೂರು ಗ್ರಾಮದ  ನಾಗರಾಜ್ ಮತ್ತು ಹೆಗ್ಗಳ ಗ್ರಾಮದ  ಲೋಕೇಶ್ ಮತ್ತು ಇತರರು ಸೇರಿ ರಸ್ತೆ ಬದಿಯಲ್ಲಿ ಬಿದ್ದಿರುವ ವ್ಯಕ್ತಿಯನ್ನು  ಆಸ್ಪತ್ರೆಗೆ ದಾಖಲಿಸಲಾಯ್ತು

No comments

Post a Comment