ಕುಂಜಿಲ ಮಸ್ಜಿದುಲ್ ರಹ್ಮಾನ್ ಮತ್ತು ರೌಳತುಲ್ ಉಲೂಂ ಆಶ್ರಯದಲ್ಲಿ ಮೀಲಾದುನ್ನಬಿ ಆಚರಣೆ

No comments

ನಾಪೋಕ್ಲು (Times Of Coorg.In) :ಲೋಕಾನುಗ್ರಹಿತ ಪ್ರವಾದಿ ಮಹಮ್ಮದ್ (ಸ ಅ) ಜನ್ಮದಿನದ ಪ್ರಯುಕ್ತ ಕುಂಜಿಲ ಸಮೀಪದ ವಯಕೂಲಿನಲ್ಲಿ ಸರಳವಾಗಿ ಮೀಲಾದುನ್ನಬಿ ಕಾರ್ಯಕ್ರಮ ಆಚರಿಸಲಾಯಿತು.

ಕೊರೋನಾ ಮಹಾಮಾರಿ ಪ್ರಯುಕ್ತ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಕುಂಜಿಲ ಪೈನರಿ ಮುಸ್ಲಿಂ ಜಮಾಅತ್ತಿನ ಅಧ್ಯಕ್ಷರಾದ ಶೌಕತ್ ಮಕ್ಕಿ, ಮಾಜಿ ಅಧ್ಯಕ್ಷರಾದ ಮಹಮ್ಮದ್ ಹಾಜಿ ವಯಕೋಲ್ ಸಮಿತಿ ಅಧ್ಯಕ್ಷರಾದ ಉಸ್ಮಾನ್ ಉಪಾಧ್ಯಕ್ಷ ಉಸ್ಮಾನ್ ವಿ ಎಂ ಮತ್ತು ಕುಂಜಿಲ ಮುದರ್ರಿಸ್ ಮುಭಶ್ಶಿರ್ ಅಹ್ಸನಿ ಮತ್ತು ಊರಿನ ಸದಸ್ಯರು ಭಾಗವಹಿಸಿದ್ದರು

ಕಾರ್ಯಕ್ರಮದ ಕೊನೆಯಲ್ಲಿ ಬುರ್ದಾ ಮಜ್ಲಿಸ್ ಆಯೋಜಿಸಲಾಯಿತು. ಮೀಲಾದ್ ಕಾರ್ಯಕ್ರಮವನ್ನು ಇಸ್ಮಾಹೀಲ್ ಲತೀಫಿ ನಿರೂಪಿಸಿ ಸಿರಾಜ್ ವಯಕೋಲ್ ಸ್ವಾಗತಿಸಿ ನಿಝಾರ್ ವಂದಿಸಿದರು

No comments

Post a Comment