ಅಮೂಲ್ಯ ಜೀವಗಳನ್ನು ರಕ್ಷಿಸಲು ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಕೈಜೋಡಿಸಬೇಕೆಂದರು.ಕರ್ನಾಟಕ ರಕ್ಷಣಾ ವೇದಿಕೆಯ ಸಿದ್ದಾಪುರ ಘಟಕದ ಅಧ್ಯಕ್ಷ ಟಿ. ಸಂತೋಷ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ಹಲವು ವರ್ಷಗಳಿಂದಲೂ ಕರ್ನಾಟಕ ರಕ್ಷಣೆ ವೇದಿಕೆ ಸಿದ್ದಾಪುರ ,ನೆಲ್ಯಹುದಿಕೇರಿ ಭಾಗದಲ್ಲಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದು ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಲ್ಕನೇ ಬಾರಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.ರಕ್ತದಾನ ಶಿಬಿರಕ್ಕೆ ಆಟೋ ಚಾಲಕರು, ಸ್ಥಳೀಯರು, ಯುವಕರು ನಮ್ಮೊಂದಿಗೆ ಕೈ ಜೋಡಿಸುತ್ತಿದ್ದು ತುರ್ತು ಸಂದರ್ಭದಲ್ಲಿ ಅಗತ್ಯಕ್ಕೆ ಬೇಕಾದ ರಕ್ತದಾನವನ್ನು ಮಾಡಲಾಗುವುದು ಎಂದರು. ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ವಿನೋದಿನಿ, ಉಪಾಧ್ಯಕ್ಷ ಪ್ರಕಾಶ್,ಪ್ರಧಾನ ಕಾರ್ಯದರ್ಶಿ ಬಾವಾ ಮಾಲ್ದಾರೆ ,ಕೊಡಗು ಬ್ಲಡ್ ಡೋನರ್ಸ್ ಸಂಘಟನೆಯ ಪ್ರಮುಖ ವಿನು, ಉಪಾಧ್ಯಕ್ಷ ಉನೈಸ್ , ಕರವೇ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಅನಿಲ್,ಸಮಾಜ ಸೇವಕರಾದ ಸೆಬಾಸ್ಟಿನ್, ಅಬ್ದುಲ್ಲಾ, ಭರತ್ ಕ್ರಿಯೇಟಿವ್ ಖಲೀಲ್,ಸಿದ್ದಾಪುರ ಆಟೊ ಚಾಲಕರ ಸಂಘದ ಅಧ್ಯಕ್ಷ ಎಂ ಎ ಸಲೀಂ ಸೇರಿದಂತೆ ಮತ್ತಿತರರು ಹಾಜರಿದ್ದರು.
ನೆಲ್ಲಿಹುದಿಕೇರಿಯಲ್ಲಿ ಸಾರ್ವಜನಿಕ ಸ್ವಯಂಪ್ರೇರಿತ ರಕ್ತದಾನ ಶಿಬಿರ

No comments
Post a Comment