SSF SYS ಚೆರಿಯ ಪರಂಬು ಶಾಖೆ ವತಿಯಿಂದ ಮರ್ಹೂಂ ರಫೀಕ್ ಸಖಾಫಿ ಅನುಸ್ಮರಣೆ ಮತ್ತು ಮಹ್ಲರತುಲ್ ಬದ್ರಿಯಾ ವಾರ್ಷಿಕ

No comments


ವರದಿ :ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಸಮೀಪದ ಚೆರಿಯಪರಂಬು SSF SYS ಶಾಖೆ  ವತಿಯಿಂದ ಚೆರಿಯಪರಂಬು ಶಾದಿ ಮಹಲ್ ನಲ್ಲಿ  ಮರ್ಹೂಂ ರಫೀಕ್ ಸಖಾಫಿ ಅನುಸ್ಮರಣೆ ಮತ್ತು ಮಹ್ಲರತುಲ್ ಬದ್ರಿಯ ವಾರ್ಷಿಕ ಕಾರ್ಯಕ್ರಮ ಶಾಖಾ ಅಧ್ಯಕ್ಷರಾದ ರಫೀಕ್ ಸಖಾಫಿ ಅದ್ಯಕ್ಷತೆಯಲ್ಲಿ ನಡೆಯಿತು. ಮುನೀರ್  ಮಹ್ಲರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಹಮೀದ್ ಮುಸ್ಲಿಯಾರ್ ಅನುಸ್ಮರಣಾ ಭಾಷಣವನ್ನು ಮಾಡಿದರು. ದಿಕ್ರ್ ಪ್ರಾರ್ಥನೆಗೆ   ಇಲ್ಯಾಸಿ ಸಖಾಫೀ ಅಲ್ ಹೈದ್ರೊಸಿ ಏರುಮಾಡ್ ನೇತ್ರತ್ವ ನೀಡಿದರು. 
ಕಾರ್ಯಕ್ರಮಕ್ಕೂ ಮೊದಲು ಮರ್ಹೂಂ ರಫೀಕ್ ಸಖಾಫಿರವರ  ಕಬರ್ ಝಿಯಾರತ್  ಕಾತಿಮ್ ಸಖಾಫಿ ಅಲ್ ಹೈದ್ರೋಸಿ ನೇತೃತ್ವದಲ್ಲಿ ನಡೆಯಿತು 

ವೇದಿಕೆಯಲ್ಲಿ ಹಮೀದ್  ಮುಸ್ಲಿಯಾರ್, ಅಸ್ಕರ್ ಸಕಾಫಿ, ನಜೀರ್ ಸಕಾಫಿ, ಅರಾಫತ್ ಪಿ ಎಂ, ಅಬ್ದುಲ್ಲಾ ಹಾಜಿ, ಇಬ್ರಾಹಿಂ ಮುಸ್ಲಿಯಾರ್, ಇನ್ನಿತರ ಮುಖಂಡರು ಕಾರ್ಯಕರ್ತರು ಇದ್ದರು. 
ಆಬಿದ್ ಕಾದಿರಿ ಸ್ವಾಗತಿಸಿ ಶಾಹಿದ್ ಹಿಮಮಿ ವಂದಿಸಿದರು.

No comments

Post a Comment