ವರದಿ :ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಗ್ರಾಮ ಪಂಚಾಯಿತಿ ವತಿಯಿಂದ 1.25ಲಕ್ಷ ವೆಚ್ಚದಲ್ಲಿ ಸ್ಥಳೀಯ ಮೇರಿ ಮಾತೆ ಚರ್ಚ್ ನಲ್ಲಿ ನಿರ್ಮಿಸಿದ ಕುಡಿಯುವ ನೀರಿನ ಸಂಪರ್ಕವನ್ನು ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಕೆ ಎ ಇಸ್ಮಾಯಿಲ್, ಉದ್ಘಾಟಿಸಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿಯ 5ವರ್ಷ ಅಧಿಕಾರವಧಿಯನ್ನು ಪೂರ್ಣಗೊಳಿಸಿದ ಮಾಜಿ ಅಧ್ಯಕ್ಷ ಇಸ್ಮಾಯಿಲ್, ಉಪಾಧ್ಯಕ್ಷರಾದ ಸಾಬಾ ತಿಮ್ಮಯ್ಯ, ಸದಸ್ಯರಾದ ಕುರೈಸಿ, ಇವರುಗಳನ್ನು ಚರ್ಚ್ ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಧರ್ಮಗುರುಗಳಾದ ಜ್ಞಾನಪ್ರಕಾಶ್, ಸಮಿತಿಯ ಸದಸ್ಯರುಗಳು ಕ್ರೈಸ್ತ ಭಕ್ತಾದಿಗಳು ಇದ್ದರು , ಜಾರ್ಜ್ ಮಸ್ಕರೇನಸ್ ಸ್ವಾಗತಿಸಿ ವಂದಿಸಿದರು.

No comments
Post a Comment