ವರದಿ: ಪಪ್ಪು ತಿಮ್ಮಯ್ಯ ಚೆಟ್ಟಳ್ಳಿ
ಮಡಿಕೇರಿ (Times Of Coorg) :ಭಾಗಮಂಡಲ ತ್ರಿವೇಣಿ ಸಂಗಮದ ಪಿಂಡ ಪ್ರದಾನ ಮಾಡಲು ತೆರಳುವ ರಸ್ತೆಯನ್ನು ಅಲ್ಲಿನ ನ ವ್ಯಕ್ತಿಯೊಬ್ಬರು ಹಲವು ವರ್ಷಗಳಿಂದ ಬಳಸಿಕೊಂಡಿದ್ದರು. ಅದನ್ನು ಕಳೆದ ಎರಡು ವರ್ಷದ ಹಿಂದೆ ದೇವಸ್ಥಾನದ ಸಂಗಮ ಬಳಿ ಕಾಮಗಾರಿಯನ್ನು ಮಾಡುವಾಗ ಬೇಲಿಯನ್ನು ತೆರವು ಗುಳಿಸಿ ರಸ್ತೆಯನ್ನು ದುರುಸ್ತಿಪಡಿಸಲಾಗಿತ್ತು. ಆದರೂ ಛಲ ಬಿಡದ ಆ ವ್ಯಕ್ತಿಯು ಅದಕ್ಕೆ ಬೇಲಿಯನ್ನು ಹಾಕಿದ್ದ. ಈ ವಿಚಾರವನ್ನು ಇತೀಚೆಗೆ ಜಿಲ್ಲಾಪಂಚಾಯತ್ ಸಭಾಂಗಣದಲ್ಲಿ ನಡೆದ ದೇವಸ್ಥಾನದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಬಿದ್ದಾಟಂಡ ತಮ್ಮಯ್ಯನವರು ದೇವಸ್ಥಾನದ ಭಕ್ತಾದಿಗಳು ಪಿಂಡ ಪ್ರದಾನ ಸ್ಥಳಕ್ಕೆ ತೆರಳಲು ಕಿರಿಕಿರಿ ಉಂಟಾಗುತ್ತದೆ ಎಂದು ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿದ್ದರು. ಸಚಿವರು ಕೂಡಲೇ ಅದಕ್ಕೆ ಸ್ಪಂದಿಸಿ ಮಡಿಕೇರಿಯ ತಹಶೀಲ್ದಾರರಿಗೆ ಅದನ್ನು ತೆರವುಗೊಳಿಸಲು ಆದೇಶ ನೀಡಿದ್ದರು.
ಇಂದು ಮಡಿಕೇರಿ ತಹಶೀಲ್ದಾರರಾದ ಮಹೇಶ್ ಅವರ ಉಪಸ್ಥಿತಿಯಲ್ಲಿ ಬೇಲಿಯನ್ನು ಕಿತ್ತು ರಸ್ತೆಯನ್ನು ತೆರವುಗುಳಿಸಿ ಭಕ್ತಾದಿಗಳಿಗೆ ನಡೆಯಲು ಅನುವುಮಾಡಿಕೊಟ್ಟರು. ಈಗಾಗಲೇ ದೇವಸ್ಥಾನಕ್ಕೆ ಸಂಬಂದಿಸಿದ ಆಸ್ತಿಯಲ್ಲಿ ಹಲವು ಮಂದಿ ಸೇರಿಕೊಂಡು ಬರೋಬ್ಬರಿ 19 ಎಕರೆ ಅಷ್ಟು ಒತ್ತುವರಿಮಾಡಿಕೊಂಡಿದ್ದರೆಂದು ಎಂದು ಅಧ್ಯಕ್ಷರು ಹೇಳಿದರು.

No comments
Post a Comment