SYS SSF ಎಮ್ಮೆಮ್ಮಾಡು ಶಾಖೆ ವತಿಯಿಂದ ಲೀಡರ್ಸ್ ಕ್ಯಾಂಪ್ ಮತ್ತು ಬೇಕಲ್ ಉಸ್ತಾದ್ ಅನುಸ್ಮರಣೆ
ಎಮ್ಮೆಮ್ಮಾಡು : ಎಸ್.ವೈ.ಎಸ್ ಹಾಗೂ ಎಸ್.ಎಸ್.ಎಫ್ ಎಮ್ಮೆಮಾಡು ಶಾಖೆಯ ವತಿಯಿಂದ ಲೀಡರ್ಸ್ ಕ್ಯಾಂಪ್ ಹಾಗೂ ತಾಜುಲ್ ಫುಖಹಾಅ ಬೇಕಲ್ ಉಸ್ತಾದ್ ಅನುಸ್ಮರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಎಮ್ಮೆಮಾಡು ಬ್ರಾಂಚ್ ಅಧ್ಯಕ್ಷರಾದ ಸಯ್ಯಿದ್ ಇಲ್ಯಾಸ್ ಅಲ್ ಹೈದ್ರೂಸಿ ಎರುಮಾಡ್ ತಂಙಳ್ ವಹಿಸಿದ್ದರು, ಎಸ್ ವೈ ಎಸ್ ಕೊಡಗು ಜಿಲ್ಲಾಧ್ಯಕ್ಷರಾದ ಅಬ್ದುಲ್ಲಾ ಸಖಾಫಿ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ ವೈ ಎಸ್ ಕೊಡಗು ಜಿಲ್ಲಾ ಕಾರ್ಯದರ್ಶಿಗಳಾದ ಮೊಯಿದೀನ್ ವಿಷಯ ಮಂಡಿಸಿದರು, ಕೊಡಗು ಜಿಲ್ಲಾ ಮುಸ್ಲಿಂ ಜಮಾ ಅತ್ ಅಧ್ಯಕ್ಷರಾದ ಸಯ್ಯಿದ್ ಕಿಲ್ಲೂರ್
ತಂಙಳ್ ಹಾಗೂ ಹಾಫಿಲ್ ಉಮರುಲ್ ಫಾರೂಕ್ ಸಖಾಫಿ ಅನುಸ್ಮರಣ ಭಾಷಣವನ್ನು ನಡೆಸಿದರು.
ಕಾರ್ಯಕ್ರಮದಲ್ಲಿ ಸಯ್ಯಿದ್ ಸೈಫುದ್ದೀನ್ ತಂಙಳ್ , ಎಸ್ ವೈ ಎಸ್ ಎಮ್ಮೆಮಾಡು ಬ್ರಾಂಚ್ ಕಾರ್ಯದರ್ಶಿ ಮುಜೀಬ್, ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ಸದಸ್ಯರಾದ ಶೌಕತ್ ಎಮ್ಮೆಮಾಡು ಎಸ್ ವೈ ಎಸ್ ಎಮ್ಮೆಮಾಡು ಬ್ರಾಂಚ್ ಸಮಿತಿ ಸದಸ್ಯರುಗಳಾದ ಖಾದರ್ ಸಹದಿ.ಅಶ್ರಫ್ ಬಿ ಯು ಹಂಝ ಸಹದಿ . ಉಮರ್ ಹಾಜಿ . ಮುಹಮ್ಮದ್.ಸಯ್ಯಿದ್ ಪೂಕೋಯ .ಖಾದರ್ ಎಸ್ಸೆಸ್ಸೆಫ್ ಎಮ್ಮೆಮಾಡು ಶಾಖೆ ಕಾರ್ಯದರ್ಶಿ ನವ್ವಾರ್ ಕೋಶಾಧಿಕಾರಿ ಹಾರಿಸ್ ಮುಸ್ಲಿಯಾರ್ ಸಮಿತಿ ಸದಸ್ಯರುಗಳಾದ ಝಕರಿಯಾ ಜೌಹರಿ . ರಶೀದ್.ಜಮಾಲುದ್ದೀನ್ . ಜಲಾಲುದ್ದೀನ್.ಹನೀಫ್ . ಶರೀಫ್ ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು

No comments
Post a Comment