ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬಯಲಿಗೆಳೆದ ಡಿಕೆ ಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ದಾಳಿ ರಾಜಕೀಯ ಷಡ್ಯಂತ್ರ : ಆಸ್ಕರ್ ಸಿಬಿಐ ದಾಳಿ ರಾಜಕೀಯ ಷಡ್ಯಂತ್ರ :ಆಸ್ಕರ್

No comments

ಸಿದ್ದಾಪುರ (Times Of Coorg) :ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆದಿರುವ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಮನೆ ಮೇಲೆ ದಾಳಿ ನಡೆದಿರುವುದು ರಾಜಕೀಯ ಷಡ್ಯಂತ್ರವಾಗಿದೆ ಎಂದು ಸಿದ್ದಾಪುರ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಆಸ್ಕರ್ ಆರೋಪಿಸಿದ್ದಾರೆ.

   ಡಿ.ಕೆ ಸುರೇಶ್ ಮತ್ತು ಸಿದ್ದರಾಮಯ್ಯನವರ ರಾಜಕೀಯ ಪ್ರಗತಿ ನೋಡಿ, ಉಪಚುನಾವಣೆಯಲ್ಲಿ ಸಂಪೂರ್ಣ ಸೋಲಗಬಹುದು ಎಂಬ ಭ್ರಮೆಯಿಂದ,ದಾಳಿ ನಡೆಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಹೇಳಿದ ಅವರು ಮುಖ್ಯಮಂತ್ರಿಗಳ  ಮಗ ಮೊಮ್ಮಗ ಇಬ್ಬರ ಹಣಲೂಟಿಯ ಬಗ್ಗೆ ಹಾಗೂ ಕೊರೊನಾ ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ‌ಭ್ರಷ್ಟಾಚಾರ ಸೇರಿದಂತೆ ಹಲವು ಹಗರಣಗಳನ್ನು ಬಯಲಿಗೆಳೆದು  ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಿದ್ದಕ್ಕೆ ಯಡಿಯೂರಪ್ಪ  ಮತ್ತು ಶಾ'ರವರ ಒಳಸಂಚಿನಿಂದ ಸಿಬಿಐ ದಾಳಿಮಾಡಿದೆ.ನಿರಂತರವಾಗಿ ಬಿಜೆಪಿ. ಕಾಂಗ್ರೆಸ್ ನಾಯಕರುಗಳ ಮೇಲೆ ತೇಜೋವಧೆ ಮಾಡುತ್ತಿರುವುದು ಸರಿಯಲ್ಲ ಬಿಜೆಪಿಯ ದುರಾಡಳಿತದ ವಿರುದ್ಧ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ತೀವ್ರ ರೀತಿಯಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು

No comments

Post a Comment