ಕೊಡಗಿನ ರೈತರು ಸಂಕಷ್ಟದಲ್ಲಿದ್ದಾರೆ. ಕೇಂದ್ರ ರಾಜ್ಯ ಸರ್ಕಾರ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಲಿ: ಮನುಸೋಮಯ್ಯ.

No comments


ಸಿದ್ದಾಪುರದಲ್ಲಿ ರೈತ ಸಂವಾದ  ಕಾರ್ಯಕ್ರಮ 
ಸಿದ್ದಾಪುರ: ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿರುವ ಕೊಡಗು ಜಿಲ್ಲೆಯ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಕೇಂದ್ರ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದುರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ  ಸಿದ್ದಾಪುರ  ಸ್ವರ್ಣ ಮಾಲ ಕಲ್ಯಾಣ ಮಂಟಪದಲ್ಲಿ ನಡೆದ ರೈತ ಸಂವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ರೈತರು ಕಳೆದ ಮೂರು ವರ್ಷಗಳಿಂದಲೂ ಪ್ರಕೃತಿ ವಿಕೋಪ ಪ್ರವಾಹ ಸಂದರ್ಭದಲ್ಲಿ  ಸಾಲ  ಮಾಡಿ ಬೆಳೆದ ಕೃಷಿ ಫಸಲುಗಳು ಸಂಪೂರ್ಣ ನಾಶವಾಗಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಬೆಳೆದ ಫಸಲುಗಳಿಗೆ ಬೆಲೆ ಸರಿಯಾಗಿ ಸಿಗದೆ ಕಂಗಾಲಾಗಿದ್ದಾರೆ. ನಿರಂತರವಾಗಿ ಕಾಡಾನೆ. ಹುಲಿ ಹಾವಳಿಯಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂಥ ಪರಿಸ್ಥಿತಿ ನಿರ್ಮಾಣವಾಗಿದೆ.ಕೇಂದ್ರ ರಾಜ್ಯ ಸರಕಾರ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸದೆ ಕಡೆಗಣಿಸುತ್ತಿರುವುದರಿಂದ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ರೈತರ ಬೇಡಿಕೆಯ ಹಿತ ಕಾಪಾಡುವ ನಿಟ್ಟಿನಲ್ಲಿ ರೈತರ ಸಮಸ್ಯೆಗಳಿಗೆ ಸ್ವಂದಿಸಿ ಕೂಡಲೇ ಕೇಂದ್ರ ರಾಜ್ಯ ಸರ್ಕಾರ ಕೊಡಗಿನ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿದರು. ಇತ್ತೀಚೆಗೆ ಸುಂಟಿಕೊಪ್ಪ ಕಾಫಿ ತೋಟವೊಂದರಲ್ಲಿ ಮರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಟಾಚಾರದ ತನಿಖೆ ಕೈಬಿಟ್ಟು ಉನ್ನತಮಟ್ಟದ ತನಿಖೆ ನಡೆಸುವ ಮೂಲಕ ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಂಡು ಕೂಡಲೇ ಬಂಧಿಸುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಮರದ ಹಕ್ಕನ್ನು ಮಾಲೀಕರಿಗೆ ನೀಡಬೇಕೆಂದು ಒತ್ತಾಯಿಸಿದರು.ಕಾಫಿ ತೋಟದೊಳಗಿಂದ ಮರ ಕಳುವು ಮಾಡುತ್ತಿದ್ದ ಕಳ್ಳರನ್ನು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹಿಮ್ಮೆಟ್ಟಿಸುವ ರೊಂದಿಗೆ ಸಾಹಸ ಮೆರೆದ ಬೆಳಗಾರರ ಕಾರ್ಯವನ್ನು ಶ್ಲಾಘಿಸಿದ ಅವರು ರೈತರಿಗೆ ಕೋವಿ ಹಕ್ಕು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.ಸಂಘಟನೆಯ ಕಾನೂನು ಸಲಹೆಗಾರ ವಕೀಲ ಹೇಮಚಂದ್ರ ಮಾತನಾಡಿ ಸುಂಟಿಕೊಪ್ಪ ಸಮೀಪದ ಮರ ಕಳವು ಪ್ರಕರಣ ಹಲವು ದಿನಗಳು ಕಳೆದರು ಸರಿಯಾಗಿ ತನಿಖೆ ಮಾಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ.ಜಿಲ್ಲೆಯ ಹಲವಡೆ  ಮರ ಕಳ್ಳತನ ಪ್ರಕರಣಗಳು ಅಧಿಕವಾಗುತ್ತಿದ್ದು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ  ಪೊಲೀಸ್ ಇಲಾಖೆ ಸೂಕ್ತ ಕ್ರಮ ವಹಿಸಬೇಕು.ಮರ ಕಳ್ಳತನಕ್ಕೆ ಬಂದ ಆರೋಪಿಗಳ ಚಪ್ಪಲಿ ಬಟ್ಟೆಗಳು ಘಟನಾಸ್ಥಳದಲ್ಲಿ ಇದ್ದರೂ ಅದನ್ನು ವಶಪಡಿಸಿಕೊಳ್ಳಲು ಮುಂದಾಗಿಲ್ಲಮರ ಕಳ್ಳತನ ಪ್ರಕರಣ ಗಂಭೀರವಾಗಿದ್ದರೂಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ  ಭೇಟಿ ನೀಡದೆ ಅಸಾಯಕತೆ ತೋರಿದ್ದಾರೆಎಂದು ಹೇಳಿದ ಅವರು ಕಳ್ಳರನ್ನ ಹಿಮ್ಮೆಟ್ಟಿಸುವ ಮೂಲಕ  ಸಾಹಸ ಮೆರೆದ ಬೆಳಗಾರರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿದೆ ಎಂದರು.ಸಂಘದ ಪ್ರಧಾನ ಕಾರ್ಯದರ್ಶಿ ಸುಜಯ್ ಬೋಪಯ್ಯ ಮಾತನಾಡಿ ಇಂದು ಭಾರತದ ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಇಳಿಕೆ ಕಂಡಿದೆ. ಅದರೆ ಬಂಡವಾಳ ಶಾಹಿಗಳು ತಮ್ಮ ಜೇಬು ತುಂಬಿಸಿಕೊಳ್ಳುತಿದ್ದಾರೆ. ದೇಶದ ಅರ್ಥಿಕ ವ್ಯೆವಸ್ಥೆಯಲ್ಲಿ ರೈತರ ಪಾಲು ಬಹುದೊಡ್ಡ ಪ್ರಮಾಣದಲ್ಲಿದೆ. ಅದರೆ ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ದೊರಕದಿರುವುದು ವಿಷಾದನೀಯ. ರೈತರನ್ನು ಎಲ್ಲಾ ರೀತಿಯಲ್ಲೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಡೆಗಣಿಸುತ್ತಿದ್ದಾರೆ.ಹಲವು ದಾಖಲಾತಿಗಳನ್ನು ಸರಿಪಡಿಸಿಕೊಳ್ಳಲು ಕಚೇರಿಗಳಿಗೆ ದಿನನಿತ್ಯ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ರೈತರ ತಾಳ್ಮೆಯನ್ನು ಪರೀಕ್ಷಿಸದೆ ಸಮಸ್ಯೆಗಳಿಗೆ ಸ್ವಂಧಿಸುವಂತೆ ಒತ್ತಾಯಿಸಿದ್ದಾರೆ. ಅಮ್ಮತ್ತಿ ಹೊಬಳಿಯ ರೈತ ಸಂಘದ ಅಧ್ಯಕ್ಷ ಪ್ರವೀಣ್ ಬೋಪಯ್ಯ ಮಾತನಾಡಿ ಕಳೆದೆರಡು ವರ್ಷಗಳಿಂದ ಸಂಘವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು ರೈತರ ಸಮಸ್ಯೆಗಳಿಗೆ ಸ್ವಂಧಿಸುತ್ತಿದೆ. ಸಿದ್ದಾಪುರ ಸುತ್ತಮುತ್ತಲ ಭಾಗದಲ್ಲಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು ತಡೆಗಟ್ಟಬೇಕೆಂದು  ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.ಕಾಡಾನೆಗಳ ಹಾವಳಿಯಿಂದ ಬೆಳಗಾರರು ಕಾರ್ಮಿಕರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಕಾಡಾನೆ ಸೆರೆ ಹಿಡಿಯಲು  ಒತ್ತಾಯಿಸಿದ ಹಿನ್ನೆಲೆಯಲ್ಲಿ  ಸೆರೆಹಿಡಿಯಲಾಗಿದೆ.ಕಾಡಾನೆ ಹಾವಳಿ ಯಿಂದ ಕೃಷಿ ಫಸಲು ನಾಶವಾಗುತ್ತಿದ್ದು ಅರಣ್ಯ ಇಲಾಖೆಯಿಂದ ಸಣ್ಣಮಟ್ಟದ ಪರಿಹಾರ ಮಾತ್ರ ನೀಡಲಾಗುತ್ತಿದೆ.ಪರಿಹಾರ ಹೆಚ್ಚಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಲಾಗುವುದು ಎಂದರು.ರೈತ ಸಂಘದ ಜಿಲ್ಲಾ ಖಜಾಂಚಿ ಸಬೀತಾ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.ಇತ್ತೀಚೆಗೆ ಕಾಫಿ ತೋಟದಲ್ಲಿ ನಡೆದ ಮರ ಕಳ್ಳತನ ಪ್ರಕರಣಕ್ಕೆ ಸಂಭಂದಿಸಿದಂತೆ ಮರಗಳ್ಳರನ್ನು ಧೈರ್ಯವಾಗಿಹಿಮ್ಮೆಟ್ಟಿಸುವ ಮೂಲಕ ಸಹಸ ತೋರಿದ ದೀಪಕ್ ಬಸವರಾಜ್ ಮತ್ತು ಕಿರಣ್ ಬಸವರಾಜ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು,ಜಿಲ್ಲಾ ಸಂಚಾಲಕ ಸುಬಾಶ್ ಸುಬ್ಬಯ್ಯ,ಅಮ್ಮತ್ತಿ ಹೋಬಳಿ ಉಪಾಧ್ಯಕ್ಷ ಹರೀಶ್ ಸೇರಿದಂತೆ ವಿವಿಧ ಭಾಗದ ರೈತ ಮುಖಂಡರುಗಳು ಭಾಗವಹಿಸಿದ್ದರು.ಚಿತ್ರ  ಇದೆ.

No comments

Post a Comment