ವರದಿ: ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) :ಪಟ್ಟಣದ ಆಟೋ ನಿಲ್ದಾಣದ ಮದ್ಯದಲ್ಲಿ ಈ ವಿದ್ಯುತ್ ಕಂಬವಿದ್ದು ಇದರಿಂದ ತುಂಬಾ ಸಮಸ್ಯೆ ಆಗುತ್ತಿದ್ದು, ಅಲ್ಲದೆ ಕಂಬದಲ್ಲಿ ಬಿರುಕು ಕೂಡ ಇದ್ದು ಮುರಿದು ಬಿದ್ದರೆ ಅಪಾಯ ಕೂಡ ಸಂಭವಿಸಬಹುದು.
ಕಳೆದ ಎರಡು ಮೂರು ವರ್ಷದ ಹಿಂದೆ ಬೇತು ರಸ್ತೆ ಡಾಂಬರೀಕರಣ ಮಾಡುವಸಂದರ್ಭದಲ್ಲಿ ಕಂಬ ನಡುರಸ್ತೆಯಲ್ಲಿ ಬರುತ್ತಿದ್ದು, ಸೆಸ್ಕ್ ಅಧಿಕಾರಿಗಳ ಹತ್ತಿರ ಕಂಬ ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಯಾವುದೇ ಪ್ರಯೋಜನೆ ವಾಗಲಿಲ್ಲ, ಆದರೆ ಈಗ ಈ ವಿದ್ಯುತ್ ಕಂಬವು ಅಪಾಯದ ಅಂಚಿನಲ್ಲಿದೆ ಮಳೆಗಾಲದಲ್ಲಿ ಕಂಬದ ಕೆಳಗಡೆ ವಿದ್ಯುತ್ ಸ್ಪರ್ಶವಾಗುತ್ತಿದ್ದು, ಆಟೋಚಾಲಕರು ದಿನವಿಡೀ ಇದೇ ಜಾಗದಲ್ಲಿಇರುದರಿಂದ ಪ್ರಾಣಹಾನಿ ಸಂಭವಿಸಿದರೂ ಸಂಶಯವಿಲ್ಲ.
ಆದ್ದರಿದ ಕೂಡಲೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಕೂಡಲೇ ಅಪಾಯ ಸಂಭವಿಸುದಕ್ಕಿಂತ ಮುಂಚಿತವಾಗಿ ಕಂಬವನ್ನು ತೆರವುಗೊಳಿಸಿ ಕೊಡಬೇಕೆಂದು ನಾಪೋಕ್ಲು ವಾಹನಚಾಲಕರು ಹಾಗೂ ಮಾಲೀಕರ ಸಂಘ ಮತ್ತು ನಾಪೋಕ್ಲುವಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.

No comments
Post a Comment