ಮಡಿಕೇರಿ (Times Of Coorg):-ಕುಶಾಲನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಹಾಗೂ ದುರಸ್ತಿ ಕಾರ್ಯ ನಿರ್ವಹಿಸಬೇಕಿರುವುದರಿಂದ ಕ.ವಿ.ಪ್ರ.ನಿ.ನಿ. ಅವರ ಕೋರಿಕೆಯಂತೆ ಅಕ್ಟೋಬರ್, 10 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕುಶಾಲನಗರ, ಸೋಮವಾರಪೇಟೆ, ಆಲೂರು ಸಿದ್ದಾಪುರ, ಸುಂಟಿಕೊಪ್ಪ ಹಾಗೂ ಮಡಿಕೇರಿ, ವಿದ್ಯುತ್ ಉಪ ಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಕುಶಾಲನಗರ, ಕೂಡಿಗೆ, ನಂಜರಾಯಪಟ್ಟಣ, ಸುಂಟಿಕೊಪ್ಪ, ಚೆಟ್ಟಳ್ಳಿ, ಸೋಮವಾರಪೇಟೆ, ಶಾಂತಳ್ಳಿ, ಕುಮಾರಹಳ್ಳಿ, ಗೌಡಳ್ಳಿ, ಹೆಗ್ಗಡಮನೆ ಅಬ್ಬೂರುಕಟ್ಟೆ, ಐಗೂರು, ಆಲೂರು ಸಿದ್ದಾಪುರ, ಗೋಣಿಮರೂರು, ಮಾಲಂಬಿ, ಹೊಸಗುತ್ತಿ, ಗಣಗೂರು ಮಡಿಕೇರಿ ಪಟ್ಟಣ, ಬೋಯಿಕೇರಿ ಗಾಳಿಬೀಡು, ಕುಂಡಮೇಸ್ತ್ರಿ, ಮೇಕೇರಿ, ಕಡಗದಾಳು, ಸಂಪಾಜೆ, ಭಾಗಮಂಡಲ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರ್ ಅವರು ಕೋರಿದ್ದಾರೆ.
No comments
Post a Comment