ಕೊಡಗು ಜಿಲ್ಲಾ ಛಾಯಾಚಿತ್ರಕಾರರ ಸಂಘದ ಅಧ್ಯಕ್ಷರಾಗಿ ಸುರೇಶ್ ಮಾವಟ್ಕರ್ ಆಯ್ಕೆ .

No comments



ಸಿದ್ದಾಪುರ (Times Of Coorg) :ಕೊಡಗು ಜಿಲ್ಲಾ ಛಾಯಾಚಿತ್ರಕಾರರ ಸಂಘದ ಆಡಳಿತ ಮಂಡಳಿಯ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು ಜಿಲ್ಲಾ ಅಧ್ಯಕ್ಷರಾಗಿ ಸುರೇಶ್ ಮಾವಟ್ಕರ್,  ಜಿಲ್ಲಾ ಉಪಾಧ್ಯಕ್ಷ ರಾಗಿ ವಿರಾಜಪೇಟೆ ತಾಲ್ಲೂಕಿನ   ಎಂ ಕೆ ರವಿಕುಮಾರ್ ,ಹಾಗೂ ಸೋಮವಾರಪೇಟೆ ತಾಲ್ಲೂಕಿನ ಜನಾರ್ದನ, ಜಿಲ್ಲಾ ಪ್ರದಾನ ಕಾರ್ಯದರ್ಶಿ ಯಾಗಿ ವಿರಾಜಪೇಟೆ ತಾಲ್ಲೂಕಿನ ದೀಪಕ್ ಕುಮಾರ್.  ಸಂಘಟನ ಕಾರ್ಯದರ್ಶಿಯಾಗಿ ಸೋಮವಾರಪೇಟೆ ತಾಲ್ಲೂಕಿನ ಪ್ರಮೋದ್, ಸಹ ಕಾರ್ಯದರ್ಶಿಯಾಗಿ ವಿರಾಜಪೇಟೆ ತಾಲ್ಲೂಕಿನ ರಂಜಿತ್, ಜಿಲ್ಲಾ  ಖಜಾಂಚಿಯಾಗಿ ಮಡಿಕೇರಿ ತಾಲೂಕಿನ ಮೋಹನ್ ಹಾಗೂ ನೂತನ ಆಡಳಿತ ಮಂಡಳಿಯ ನಿರ್ದೇಶಕರಾಗಿ ವಿರಾಜಪೇಟೆ ತಾಲ್ಲೂಕಿನ ಜುಬೇರ್ ಗೋಣಿಕೊಪ್ಪ , ಪಾಲಿಬೆಟ್ಟ ಮೈಕಲ್, ಮಡಿಕೇರಿ ತಾಲೂಕಿನ ರೋಶನ್,ಮುನೀರ್,ಪ್ರಕಾಶ್, ಸೋಮವಾರಪೇಟೆ ತಾಲ್ಲೂಕಿನ ಲವಕುಮಾರ್,ವಸಂತ್, ಯತಿರಾಜ್  ಅವರನ್ನು  ಮುಂದಿನ ಮೂರು ವರ್ಷ ಗಳಿಗೆ ಆಯ್ಕೆ ಮಾಡಲಾಯಿತು.ಕೊಡಗು ಜಿಲ್ಲೆಯ ಛಾಯಾಚಿತ್ರ ಗಾರರ ಸಂಘದ ಮಹಾಸಭೆಯು ಕುಶಾಲನಗರ ಸಮೀಪದ ಗುಡ್ಡೆಹೊಸೂರು ಸಹಕಾರ ಸಂಘದ ಕಟ್ಟಡದಲ್ಲಿ ನಿಕಟ ಪೂರ್ವ ಅಧ್ಯಕ್ಷ  ಗುಡ್ಡೆಮನೆ ವಿಶುಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ  ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ  ಡಿ. ಸಿ ರವೀಂದ್ರ, ಮಡಿಕೇರಿ ತಾಲೂಕು  ಅಧ್ಯಕ್ಷ  ಪ್ರದೀಪ್, ಸೋಮವಾರಪೇಟೆ ತಾಲ್ಲೂಕು  ಅಧ್ಯಕ್ಷ  ಶಾಂತಪ್ಪ, ಮಾಜಿ ಅಧ್ಯಕ್ಷರಾದ ನಾಗೇಶ್, ಡಾಡುಜೋಸೆಪ್,ಹಾಗೂ ಸುಬ್ರಮಣ್ಯ ಸೇರಿದಂತೆ ಜಿಲ್ಲೆ ಹಾಗೂ ತಾಲೂಕು ಸಂಘಗಳ ಪ್ರಮುಖರು ಹಾಜರಿದ್ದರು 

No comments

Post a Comment