ವರದಿ :ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಪಟ್ಟಣದ ಆಟೋ ನಿಲ್ದಾಣದ ಸಮಸ್ಯೆ ಬಗ್ಗೆಆಟೋ ಚಾಲಕರ ಸಂಘ 4 ದಿನಗಳ ಹಿಂದೆ ನಾಪೋಕ್ಲು ಗ್ರಾಮ ಪಂಚಾಯಿತಿ ಮತ್ತು ನಾಪೋಕ್ಲು ಪೊಲೀಸ್ ಠಾಣೆಗೆ ಮನವಿ ನೀಡಿದ್ದು.
ಇದಕ್ಕೆ ಸ್ಪಂದಿಸಿದ ಅಧಿಕಾರಿಗಳುಈ ದಿನ ನಾಪೋಕ್ಲು ಪಟ್ಟಣದ ಆಟೋ ನಿಲ್ದಾಣಕ್ಕೆ ಭೇಟಿ ನೀಡಿ ಆಟೋ ಚಾಲಕರೊಂದಿಗೆ ನಿಲ್ದಾಣದ ಸಮಸ್ಯೆ ಬಗ್ಗೆ ಚರ್ಚಿಸಿ ಬೇತು ರಸ್ತೆಯಲ್ಲಿ 120 ಮೀಟರ್ ಗಳವರೆಗೆ ಆಟೋ ನಿಲ್ದಾಣಕ್ಕೆ ಅವಕಾಶ ಮಾಡಿಕೊಟ್ಟು, ತಿಂಗಳ 15 ದಿನಗಳು ರಸ್ತೆಯ ಬಲಭಾಗ ಮತ್ತು 15ದಿನಗಳು ಎಡಭಾಗದಲ್ಲಿ ನಿಲ್ಲಿಸುವಂತೆ ಯು ಹಾಗೂ ಯಾವುದೇ ಕಾರಣಕ್ಕೂ ಆಟೋ ನಿಲ್ದಾಣದ ಮತ್ತೊಂದು ಕಡೆ ಯಾವುದೇ ವಾಹನಗಳು ನಿಲ್ಲಿಸಲು ಅವಕಾಶವಿಲ್ಲ ಎಂದು ತೀರ್ಮಾನಿಸಲಾಯಿತು.
ನಾಪೋಕ್ಲು ಪಟ್ಟಣದಲ್ಲಿ ಖಾಸಗಿ ವಾಹನಗಳ ನಿಲ್ದಾಣದ ಸಮಸ್ಯೆ ಬಗ್ಗೆಯೂ ದೂರು ಕೇಳಿಬಂದ ಹಿನ್ನೆಲೆಯಲ್ಲಿ ಅದರ ಬಗ್ಗೆಯೂ ಚರ್ಚಿಸಿ ಪಟ್ಟಣದಲ್ಲಿ ವರ್ತಕರು ಅವರವರ ವಾಹನವನ್ನು ಯಾವುದೇ ಕಾರಣಕ್ಕೂ ಪಟ್ಟಣದಲ್ಲಿ ನಿಲ್ಲಿಸದಂತೆ, ಈಗಾಗಲೇ ಪೊಲೀಸ್ ಇಲಾಖೆಯಿಂದ ತಿಳುವಳಿಕೆ ನೀಡಿದ್ದು,ಇನ್ನು ಮುಂದೆ ವರ್ತಕರು ಪಟ್ಟಣದಲ್ಲಿ ವಾಹನ ನಿಲ್ಲಿಸಿದರೆ ದಂಡ ವಿಧಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತೀರ್ಮಾನಿಸಲಾಯಿತು.
ಈ ಸಂದರ್ಭ ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಬಿಂದುಶ್ರೀ, ಅಭಿವೃದ್ಧಿ ಅಧಿಕಾರಿ ಚೋನ್ದಕ್ಕಿ, ಜಿಲ್ಲಾ ಪಂಚಾಯತ್ ಸದಸ್ಯ ಮುರಳಿ ಕಾರುಂಬಮಯ್ಯ , ಪೊಲೀಸ್ ಠಾಣಾಧಿಕಾರಿ ಕಿರಣ್ ಆರ್,
ಮಂಜೂರ್ ಅಲಿ, ಆಟೋ ಚಾಲಕ ಸಂಘದ ಅಧ್ಯಕ್ಷ ರಝಾಕ್, ಕಾರ್ಯದರ್ಶಿ ಝಕರಿಯ, ಆಟೋ ಚಾಲಕರು ಹಾಜರಿದ್ದರು.


No comments
Post a Comment