ನಾಪೋಕ್ಲು ವ್ಯಾಪ್ತಿಯ ಕಾಮಗಾರಿಗಳಲ್ಲಿ ಕಳಪೆ ಮತ್ತು ದುರುಪಯೋಗ ಆರೋಪ
ವರದಿ: ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg): ನಾಪೋಕ್ಲು ವ್ಯಾಪ್ತಿಯಲ್ಲಿ ವಿವಿಧ ಯೋಜನೆಗಳ ಮೂಲಕ ನಡೆಸಲಾಗಿರುವ ಕಾಮಗಾರಿಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದೆ ಹಾಗೂ ಅನುದಾನವನ್ನು ದುರುಪಯೋಗಪಡಿಸಿ ಆರೋಪ ವ್ಯಕ್ತಪಡಿಸಿರುವ ಸಾರ್ವಜನಿಕರು ಈ ಬಗ್ಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಅದಲ್ಲದೆ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯನ ಆಪ್ತ ನಾಗಿರುವ ಗುತ್ತಿಗೆದಾರನ ವಿರುದ್ಧ ಗಂಭೀರ ಆರೋಪ ಮಾಡಿದ್ದು ಈ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿದ್ದಾರೆ .
ಮಾತ್ರವಲ್ಲದೆ ಈ ವಿಚಾರದಲ್ಲಿ ಕ್ಷೇತ್ರ ಜಿಲ್ಲಾ ಪಂಚಾಯತ್ ಸದಸ್ಯ ಮೌನದ ಬಗ್ಗೆಯೂ ಸಂಶಯ ಮೂಡಿದೆ.
ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದಿರಾನಗರದಲ್ಲಿ ಕಳೆದ ಮೂರು ತಿಂಗಳ ಹಿಂದೆ ಸ್ಥಳೀಯ ಜಿಲ್ಲಾ ಪಂಚಾಯತ್ ಸದಸ್ಯನ ಆಪ್ತ ನಾಗಿರುವ ಸ್ಥಳೀಯಗುತ್ತಿಗೆದಾರನೊಬ್ಬ 11 ಲಕ್ಷ ರೂಗಳಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಮಾಡಿದ್ದಾರೆ.
ಇದರಲ್ಲಿ ಚರಂಡಿ ಕಾಮಗಾರಿ ಅತ್ಯಂತ ಕಳಪೆ ಮಟ್ಟದ್ದಾಗಿದ್ದು ಮಣ್ಣಿನ ಮೇಲೆ ಕಾಂಗ್ರೆಟ್ ಹಾಕಿದ್ದು ಇದು ಅವೈಜ್ಞಾನಿಕವಾಗಿದ್ದು ಆಕ್ಷೇಪಿಸಲಾಗಿದೆ.
ಬೇತು ಗ್ರಾಮದ ಚೋಕಿರ ಸಜಿತ್ ಚಿನ್ನಪ್ಪ ಅವರ ಮನೆ ಬಳಿ ಜಿಲ್ಲಾ ಪಂಚಾಯತ್ ಅನುದಾನದ ಹಣದಲ್ಲಿ ಮಾಡಿದ ತಡೆಗೋಡೆಯು ಕಳಪೆಯಾಗಿದೆ.
ಈ ಅನುದಾನದಲ್ಲಿ ಕೇವಲ ಎರಡೂವರೆ ಅಡಿ ಎತ್ತರ 30 ಅಡಿ ಉದ್ದದ ಅಡಿಪಾಯ ಮಾತ್ರ ಹಾಕಲಾಗಿದೆ ಎನ್ನಲಾಗಿದೆ.
ನಾಪೋಕ್ಲು ಪಂಚಾಯತಿ ವತಿಯಿಂದ ಅಲ್ಲಿನ ಕೊಡವ ಸಮಾಜ ರುದ್ರಭೂಮಿಯಲ್ಲಿ ನಡೆದ ಕಾಮಗಾರಿಯು ಸಂಪೂರ್ಣ ಕಳಪೆಯಾಗಿದೆ.
ಇದಕ್ಕೆ ಹಣ ಮಂಜೂರು ಮಾಡಿದವರ ಮೇಲೆ ಕ್ರಮಕೈಗೊಂಡು ಅವರಿಂದಲೇ ಈ ಕಾಮಗಾರಿಯನ್ನು ಸರಿಪಡಿಸಬೇಕೆಂದು ಆಗ್ರಹಿಸಲಾಗಿದೆ.
ಸ್ಥಳೀಯ ಕೊಡವ ಸಮಾಜ ರಸ್ತೆಯಿಂದ ಕಲ್ಲುಮೊಟ್ಟೆ ವೆಂಕಟರಮಣ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಶಾಸಕರ ಅನುದಾನ 4 ಲಕ್ಷದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರನ ಬಲಗೈ ಬಂಟ ಗುತ್ತಿಗೆದಾರ ನಿರ್ವಹಿಸಿದ ಕಾಮಗಾರಿಯು ಕಳಪೆಯಾಗಿದೆ. ಈ ಬಗ್ಗೆಯೂ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

No comments
Post a Comment