ವರದಿ :ಹಾರಿಸ್ ನಾಪೋಕ್ಲು
ನಾಪೋಕ್ಲು(Times Of Coorg) : ನಾಪೋಕ್ಲು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಿಂದ ತಮ್ಮ ಶಾಲೆಗೆ ಬರುವಂತಹ ವಿದ್ಯಾರ್ಥಿಗಳಿಗೆ ನಾಪೋಕ್ಲು ಸುತ್ತಮುತ್ತಲಿನ ಎಮ್ಮೆಮಾಡು, ನೆಲಜಿ, ಎಡಪಾಲ, ಕೂರುಳಿ, ಪಡಿಯಾನಿ, ಬೇತು, ಕೊಟ್ಟಮುಡಿ, ಹೊದವಾಡ, ಮುಂತಾದ ಗ್ರಾಮಗಳಿಗೆ ತೆರಳಿ ಆಯಾ ಗ್ರಾಮದಿಂದ ಬರುವ ಮಕ್ಕಳಿಗೆ ಗ್ರಾಮದಲ್ಲಿ ಸ್ಥಳವನ್ನು ಗುರುತಿಸಿ ಅಲ್ಲಿಗೆ ವಿದ್ಯಾರ್ಥಿಗಳನ್ನು ಕರೆಸಿ ಅವರಿಗೆ ಪಾಠವನ್ನು ಹೇಳಿಕೊಡುವುದರ ಮೂಲಕ ಕೊರೋನಾ ಮಹಾಮಾರಿ ಯಿಂದ ದೇಶದಲ್ಲಿ ಶಾಲೆಗಳು ತೆರೆಯದೆ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಬೆನ್ನಲ್ಲೇ ಸೆಕ್ರೆಟ್ ಹಾರ್ಟ್ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕರು ಶ್ರಮಪಟ್ಟು ವಾರದ ಎಲ್ಲಾ ದಿನಗಳು ಒಂದೊಂದು ಗ್ರಾಮಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರೋದು ಶ್ಲಾಘನೀಯ ಎಂದು ವಿದ್ಯಾರ್ಥಿಗಳ ಪೋಷಕರು ಹೇಳಿದ್ದಾರೆ.
ಈ ದಿನ ಬೇತು ಗ್ರಾಮದದಲ್ಲಿ ಸ್ಥಳೀಯ ಮಕ್ಕಳಿಗೆ ಪಾಠ ಮಾಡುವ ಸಂದರ್ಭ ಶಾಲೆ ಮುಖ್ಯ ಶಿಕ್ಷಕಿಯಾದ ಮಮತ ರವರು ಮಾತನಾಡಿ ದೇಶದಲ್ಲಿ ಕೊರೋನಾ ಮಹಾಮಾರಿ ಯಿಂದ ಶಾಲೆಗಳು ತೆರೆಯದಂತ ಪರಿಸ್ಥಿತಿ ನಿರ್ಮಾಣವಾಗಿದ್ದು ನಮ್ಮ ಶಾಲೆಗೆ ಬರುವಂತಹ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು,
ಅಲ್ಲದೆ ಶಾಲೆ ತೆರೆಯಲು ಸರ್ಕಾರದ ಆದೇಶ ಬರುವವರೆಗೂ ನಮ್ಮ ಶಾಲೆಯ ಎಲ್ಲ ಶಿಕ್ಷಕ ವೃಂದದವರು ಇದೇ ರೀತಿ ಎಲ್ಲ ಗ್ರಾಮಗಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡಿಕೊಡುತ್ತೇವೆ ಎಂದು ಹೇಳಿದರು.
ಅಲ್ಲದೆ ಶಾಲೆ ತೆರೆಯಲು ಸರ್ಕಾರದ ಆದೇಶ ಬರುವವರೆಗೂ ನಮ್ಮ ಶಾಲೆಯ ಎಲ್ಲ ಶಿಕ್ಷಕ ವೃಂದದವರು ಇದೇ ರೀತಿ ಎಲ್ಲ ಗ್ರಾಮಗಳಿಗೆ ತೆರಳಿ ಮಕ್ಕಳಿಗೆ ಪಾಠ ಮಾಡಿಕೊಡುತ್ತೇವೆ ಎಂದು ಹೇಳಿದರು.
ಶಿಕ್ಷಕರಾದ, ಯಮುನ, ಕಿರಣ್, ದಮಯಂತಿ, ನೀಲಮ್ಮ, ಕವಿತ, ದಿವ್ಯ, ತಶ್ವಿನಿ, ಹಾಗೂ ವಿದ್ಯಾರ್ಥಿಗಳ ಪೋಷಕರು ಇದ್ದರು.



No comments
Post a Comment