ಶಾಂತಿಯುತವಾಗಿರುವ ಜಿಲ್ಲೆಗಳಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ಸಂಘಪರಿವಾರ : ಕೊಡಗು ಪಿ.ಎಫ್.ಐ ಆರೋಪ

No comments

ಮಡಿಕೇರಿ (Times Of Coorg) : ವಿಶ್ವ ಪ್ರವಾದಿ ಮೊಹಮ್ಮದ್ ಮುಸ್ತಫ (ಸ) ರನ್ನು ಅವಹೇಳಿಸಿದ ನವೀನ್ ಎಂಬ ಬಿಜೆಪಿಯ ಕಾರ್ಯಕರ್ತನ ಗಲಭೆಯ ಉದ್ದೇಶವೇ ಬೆಂಗಳೂರಿನ ಡಿ.ಜೆ ಹಳ್ಳಿಯ ವ್ಯಾಪ್ತಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಡಿ.ಜೆ ಹಳ್ಳಿಯ ಠಾಣೆಗೆ ನವೀನ್ ವಿರುದ್ಧ ಪುಕಾರು ನೀಡಲು ಹೊರಟ ಮುಜಮ್ಮಿಲ್ ಪಾಷ ಹಾಗೂ ಇನ್ನಿತರರನ್ನೂ ಗಲಭೆಯ ರೂವಾರಿ ಎಂದು ಸುಳ್ಳು ಕೇಸ್ ಹಾಕಿರುವುದು ನ್ಯಾಯ ಸಮ್ಮತವಲ್ಲ. ನವೀನ್ ಮೇಲೆ ನೀಡಿರುವ ಪುಕಾರಿನ ಮೇಲೆ ಡಿ.ಜೆ ಹಳ್ಳಿ ಪೊಲೀಸರು ಕೂಡಲೇ ಎಫ್.ಐ.ಆರ್ ದಾಖಲಿಸಿ ಬಂಧನಕ್ಕೊಳಪಡಿಸಿದ್ದರೆ ಈ ಎಲ್ಲಾ ಅನ್ಯಾಯವಾಗುವುದು ತಪ್ಪುತ್ತಿತ್ತು. ಠಾಣೆಯ ಮುಂಭಾಗ ಜಮಾವಣೆಗೊಂಡ ಜನರನ್ನು ಮುಜಮ್ಮಿಲ್ ಪಾಷ ಸಮಾಧಾನ ಪಡಿಸಿ ಶಾಂತವಾಗಿ ಮನೆಗಳಿಗೆ ತೆರಳಲು ನಿರ್ದೇಶನ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಂಪೂರ್ಣವಾಗಿ ವೈರಲ್ ಆಗಿರುತ್ತದೆ.

ತಾರೀಖು 12-8-2020 ರಂದು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗಧಳದ ನೇತೃತ್ವದಲ್ಲಿ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತ ಹಾಗೂ ನಾಪೋಕ್ಲು ಬಸ್ ನಿಲ್ದಾಣದ ಮುಂಭಾಗ ಅಕ್ರಮ ಜಮಾವಣೆಗೊಂಡು ಪಿ.ಎಫ್.ಐ ಹಾಗೂ ಎಸ್.ಡಿ.ಪಿ.ಐ ವಿರುದ್ಧ ಆಧಾರ ರಹಿತ ಆರೋಪ ಮಾಡಿರುತ್ತಾರೆ. ದೇಶಬಿಟ್ಟು ತೊಲಗುವಂತೆ ಬೆದರಿಕೆ ಹಾಕಿರುತ್ತಾರೆ. ಇಂತಹ ಬೆದರಿಕೆಗಳು ಪಿ.ಎಫ್.ಐ ಹಾಗೂ ಎಸ್.ಡಿ.ಪಿ.ಐ ಗೆ ಹೊಸತೇನಲ್ಲ. ಇಂತಹ ಸವಾಲುಗಳನ್ನು ಕಾನೂನು ಬದ್ದವಾಗಿ ಎದುರಿಸಲು ಸಿದ್ದವಿದ್ದೇವೆ. ಜಿಲ್ಲೆಯ ಜನರು ಇಂತಹ ಪ್ರಚೋದನೆಗೆ ಕಿವಿಕೊಡದೆ ಸದಾ ಶಾಂತಿಯನ್ನು ಬಯಸುತ್ತಾರೆ ಎಂಬುದನ್ನು ಸಂಘ ಪರಿವಾರ ತಿಳಿದಿಲ್ಲವೆಂದು ಅವರ ನಾಯಕರ ಭಾಷಣದಿಂದ ತಿಳಿದುಬರುತ್ತದೆ ಎಂದು ಪಿ.ಎಫ್.ಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರನ್ನು ಮುಸ್ಲಿಂ ಧಾರ್ಮಿಕ ವಿದ್ವಾಂಸರು ಭೇಟಿ ನೀಡಿ ಸಾಂತ್ವನ ತಿಳಿಸಿ ಗಲಭೆಯಿಂದ ಬೆಂಕಿಗೆ ಆಹುತಿಯಾದ ಅವರ ಮನೆಯನ್ನು ಸ್ವಂತ ಹಣದಿಂದ ನಿರ್ಮಿಸಿ ಕೊಡುವುದಾಗಿ ತಿಳಿಸಿದ ವಿಚಾರ ತುಂಬಾ ಸ್ವಾಗತಾರ್ಹ. ಇಂತಹ ಪ್ರಯತ್ನಗಳು ಸಮಾಜದಲ್ಲಿ ಒಡಕು ತರಲು ಬಯಸಿದ ಕಿಡಿಗೇಡಿಗಳಿಗೆ ನಾಚಿಸುವಂತಾಗಿದೆ.

ಶೃಂಗೇರಿ ಶಂಕರಾಚಾರ್ಯರ ಪ್ರತಿಮೆಯ ಮೇಲೆ ಎಸ್.ಡಿ.ಪಿ.ಐ ಬಾವುಟವನ್ನು ಹಾಕಿ ಅಶಾಂತಿಯನ್ನು ನಿರ್ಮಿಸಿದ್ದಾರೆ ಎಂದು ಮಾಜಿ ಶಾಸಕ ಜೀವರಾಜ್ ಹಾಗೂ ಸಂಘಪರಿವಾರ ಪೊಲೀಸರನ್ನು ನಡು ಬೀದಿಯಲ್ಲಿ ನಿಲ್ಲಿಸಿಕೊಂಡು ಎಸ್.ಡಿ.ಪಿ.ಐ ಕಾರ್ಯಕರ್ತರನ್ನು ಬಂಧಿಸುವಂತೆ ಒತ್ತಾಯಿಸಿರುತ್ತಾರೆ. ಆದರೆ ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದ ಇದರ ಹಿಂದೆ ಮಿಲಂದ್ ಎಂಬ ವ್ಯಕ್ತಿಯ ಕೈವಾಡ ಇರುವುದಾಗಿ ಬಹಿರಂಗ ಪಡಿಸಿರುತ್ತಾರೆ. ಮಿಲಂದ್ ಹಲವಾರು ಕಳ್ಳತನದ ಕೇಸ್ ನಲ್ಲಿ ಭಾಗಿಯಾಗಿದ್ದು ಹಿಂದಿನ ದಿನ ರಾತ್ರಿ ಸಂಘಪರಿವಾರದವರು ಅವನನ್ನು ಠಾಣೆಯಿಂದ ಕರೆದುಕೊಂಡು ಬಂದಿರುತ್ತಾರೆ ಎಂದು ತಿಳಿದು ಬಂದಿದೆ. ಶಾಂತಿಯುತವಾಗಿರುವ ಜಿಲ್ಲೆಗಳಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡುವ ದುರುದ್ದೇಶ ಈ ಘಟನೆಯ ಹಿಂದೆ ಅಡಗಿದೆ.
ನಾಡಿನ ಜನತೆ ಸಂಘ ಪರಿವಾರದ ದುಶ್ ಕೃತ್ಯವನ್ನು ತಿಳಿದು ಅವರ ಅಪಪ್ರಚಾರದಕ್ಕೆ ಕಿವಿಕೊಡದೆ ಶಾಂತಿಯುತ ಸಮಾಜಕ್ಕೆ ಸಾಕ್ಷಿಯಾಗಬೇಕೆಂದು ಪಿ.ಎಫ್.ಐ ಮನವಿ ಮಾಡಿದೆ.

No comments

Post a Comment