ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅರೆ ವೈದ್ಯಕೀಯ ಕೋರ್ಸ್ ಗಳ ತರಬೇತಿಗಾಗಿ ಆನ್ ಲೈನ್ ಅರ್ಜಿ ಆಹ್ವಾನ

No comments

      ಮಡಿಕೇರಿ (Times Of Coorg):-ಪ್ರಸಕ್ತ(2020-21) ಶೈಕ್ಷಣಿಕ ಸಾಲಿನಲ್ಲಿ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇಲ್ಲಿನ ಅರೆ ವೈದ್ಯಕೀಯ ಕೋರ್ಸ್‍ಗಳ ತರಬೇತಿಗಾಗಿ ಅರೆ ವೈದ್ಯಕೀಯ ಮಂಡಳಿಯು ಸರ್ಕಾರಿ ಕೋಟದ ಸೀಟುಗಳಿಗೆ ಆನ್‍ಲೈನ್ ಮೂಲಕ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

       ಎಲ್ಲಾ ಕೋರ್ಸ್‍ಗಳಿಗೆ ಪಿ.ಯು.ಸಿ ವಿಜ್ಞಾನ/ ತತ್ಸಮಾನ ಪರೀಕ್ಷೆ ಭೌತಶಾಸ್ತ್ರ, ರಸಾಯನ ಶಾಸ್ತ್ರ, ಜೀವಶಾಸ್ತ್ರ ವಿಷಯಗಳನ್ನು ತೆಗೆದುಕೊಂಡು ತೇರ್ಗಡೆ ಹೊಂದಿರಬೇಕು. ಎಸ್‍ಎಸ್‍ಎಲ್‍ಸಿ/ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಅರ್ಜಿದಾರರು 1 ರಿಂದ 10ನೇ ತರಗತಿ ಅಥವಾ ಪಿಯುಸಿಯವರೆಗೆ ಕನಿಷ್ಠ 07 ವರ್ಷಗಳೂ ಕರ್ನಾಟಕದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು. ಇದಕ್ಕೆ ಸಂಬಂಧಿಸಿದ ದೃಢಿಕರಣ ಪ್ರತಿಯನ್ನು ಅರ್ಜಿಯೊಂದಿಗೆ ಸಲ್ಲಿಸುವುದು.

      ಪಿ.ಯು.ಸಿ ಅಭ್ಯರ್ಥಿಗಳಿಗೆ 2 ವರ್ಷಗಳು ಜೊತೆಗೆ 3 ತಿಂಗಳ ಇಂಟರ್ನ್‍ಶಿಪ್ ಹಾಗೂ ಎಸ್‍ಎಸ್‍ಎಲ್.ಸಿ 3 ವರ್ಷಗಳು ಜೊತೆಗೆ 3 ತಿಂಗಳ ಇಂಟರ್‍ನ್‍ಶಿಪ್ ಇದೆ. ವಯೋಮಿತಿ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಟ 35 ವರ್ಷಗಳು, ಪ.ಜಾ/ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 40 ವರ್ಷಗಳು ಮೀರಬಾರದು. ಅರ್ಜಿ ನಮೂನೆ ಜಾಲತಾಣ http://www.pmbkarnataka.in--org-0fk0ca5g4e/ ಲಭ್ಯವಿದೆ.

     ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿಯಲ್ಲಿ ಪ್ರಸ್ತುತ ಲಭ್ಯವಿರುವ ಅರೆವೈದ್ಯಕೀಯ ಕೋರ್ಸ್‍ಗಳ ವಿವರ ಇಂತಿದೆ. ಡಿಪ್ಲೋಮಾ ಇನ್ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ (ಡಿಎಂಎಲ್‍ಟಿ),  ಡಿಪ್ಲೋಮಾ ಇನ್ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ (ಡಿಎಂಐಟಿ), ಡಿಪ್ಲೋಮಾ ಇನ್ ಹೆಲ್ತ್ ಇನ್ಸ್‍ಪೆಕ್ಟರ್ (ಡಿಹೆಚ್‍ಐ), ಡಿಪ್ಲೋಮಾ ಇನ್ ಮೆಡಿಕಲ್ ರೆಕಾಡ್ರ್ಸ್ ಟೆಕ್ನಾಲಜಿ (ಡಿಎಂಆರ್‍ಟಿ), ಡಿಪ್ಲೋಮಾ ಇನ್ ಡಯಾಲಿಸಿಸ್ ಟೆಕ್ನಾಲಜಿ (ಡಿಡಿಟಿ), ಡಿಪ್ಲೋಮಾ ಇನ್ ಆಪರೇಷನ್ ಥಿಯೇಟರ್ ಮತ್ತು ಅನಸ್ಥೆಶಿಯಾ ಟೆಕ್ನಾಲಜಿ(ಡಿಓಟಿ ಮತ್ತು ಎಟಿ), ಡಿಪ್ಲೋಮಾ ಇನ್ ಆಪ್ತಾಲ್ಮಿಕ್ ಟೆಕ್ನಾಲಜಿ (ಡಿಓಟಿ).

     ಅರ್ಜಿ ಸಲ್ಲಿಸಲು ಆಗಸ್ಟ್, 31 ಕೊನೆ ದಿನವಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.400, ಪ.ಜಾ/ ಪಂಗಡ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ.250, ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಆನ್‍ಲೈನ್ ಮೂಲಕ ಡೆಬಿಟ್/ ಕ್ರೆಡಿಟ್/ ನೆಟ್ ಬ್ಯಾಂಕಿಂಗ್ ಮೂಲಕವೇ ಪಾವತಿಸುವಂತೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಕಾರ್ಯಪ್ಪ ಅವರು ತಿಳಿಸಿದ್ದಾರೆ.

No comments

Post a Comment