ಬೆಂಗಳೂರು ಎಸ್ ಡಿ ಪಿ ಐ ಕಛೇರಿ ಮೇಲೆ ಪೋಲಿಸ್ ದಾಳಿ : ಸುಳ್ಳು ಸುದ್ದಿ ಹಬ್ಬಿಸಿದ ಮಾಧ್ಯಮಗಳು

No comments


ಬೆಂಗಳೂರು (Times Of Coorg) : ಇತ್ತೀಚಿನ ದಿನಗಳಲ್ಲಿ ನಡೆದ ಬೆಂಗಳೂರು ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಗಲಭೆ ಸಂಬಂಧ ಪೋಲಿಸರು ಎಸ್ ಡಿ ಪಿ ಐ ಹೆಗಡೆನಗರದಲ್ಲಿರುವ ಎಸ್ ಡಿ ಪಿ ಐ ಕಚೇರಿ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ರಾಜ್ಯದ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ್ದಾರೆ ಎಂದು ಎಸ್ ಡಿ ಪಿ ಐ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಾಚಾರ್ ಸ್ಪಷ್ಟಪಡಿಸಿದ್ದಾರೆ.

ಎಸ್ ಡಿ ಪಿ ಐ ಹೆಗಡೆನಗರ ಕಛೇರಿಯು ಇನ್ನೂ ಉದ್ಘಾಟನೆಗೊಂಡಿಲ್ಲ, ಕಛೇರಿ ಕಟ್ಟಡದಲ್ಲಿ ಒಳಾಂಗಣ ಕೆಲಸ ಮಾಡುತ್ತಿರುವ ಬಿಹಾರ ಮೂಲದ ವಲಸೆ ಕಾರ್ಮಿಕರು ಕಟ್ಟಡದ ಮೇಲಂತಸ್ತಿನಲ್ಲಿ ವಾಸವಿದ್ದು, ಕಾಮಗಾರಿಗೆ ಬೇಕಾದ ವಸ್ತುಗಳನ್ನು ಸಾಮಾಗ್ರಿಗಳನ್ನು ಸಂಗ್ರಹಿಸಿಟ್ಟಿದ್ದರು.ನೆನ್ನೆ ರಾತ್ರಿ ಪೋಲಿಸರು ಕಛೇರಿಗೆ ದಾಳಿ ನಡೆಸಿದ್ದು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಬಂಧಿಸಿದ್ದಾರೆ, ಅಲ್ಲದೇ ಅವರ ಸಾಮಾಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವಿಷಯವನ್ನು ತಿರುಚಿದ ಮಾಧ್ಯಮಗಳು ಎಸ್ ಡಿ ಪಿ ಐ ಕಾರ್ಯಕರ್ತರನ್ನು ಬಂಧಿಸಿದ್ದಾರೆ, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.



No comments

Post a Comment