ಸುಂಟಿಕೊಪ್ಪ : ಆಟೋ ಚಾಲಕನ ಮೇಲೆ ಕಾಡಾನೆ ದಾಳಿ

No comments

ಸುಂಟಿಕೊಪ್ಪ (Times Of Coorg) : ಸುಂಟಿಕೊಪ್ಪ ಸಮೀಪದ ಅಂದಗೊವೆ ಕಲ್ಲೂರು ಸೇರುವ ದಾರಿಯಲ್ಲಿ ಇಂದು ಬೆಳಗಿನ ಜಾವ 7 ಗಂಟೆ ಸುಮಾರಿಗೆ ಸ್ಥಳೀಯ ಆಟೋ ಚಾಲಕ ಬಾಬು ಎಂಬುವರು ಇಬ್ಬರು ಪ್ರಯಾಣಿಕರನ್ನು ಕರೆದುಕೊಂಡು ಸುಂಟಿಕೊಪ್ಪಕ್ಕೆ ಹೋಗುವಾಗ ದಾರಿ ಮಧ್ಯದಲ್ಲಿ ಕಾಡಾನೆ ಎದುರಾಗಿದೆ.  ಅದು ತನ್ನ ಪಾಡಿಗೆ ಹೋಗಲಿ ಎಂದು ಆಟೋ ನಿಲ್ಲಿಸಿದ ಸಂದರ್ಭ ಏಕಾಏಕಿ ಓಡಿ ಬಂದ ಕಾಡಾನೆ ಬಾಬು ಮೇಲೆ ದಾಳಿ ಮಾಡಿದೆ. ಸುಮಾರು 50 ಮೀಟರ್ ಅಟ್ಟಾಡಿಸಿದ ಆನೆ ದಾಳಿ ಮಾಡುವಾಗ ಆಟೋದಲ್ಲಿದ್ದ ಪ್ರಯಾಣಿಕರು ಬೊಬ್ಬೆ ಹಾಕಿದಾಗ ಇವರನ್ನು ಬಿಟ್ಟು ಕಾಲ್ಕಿತ್ತಿದೆ. ಈ ಸಂದರ್ಭ ಸಣ್ಣ ಪುಟ್ಟ ಗಾಯಗಳೊಂದಿಗೆ ಬಾಬು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವಿಷಯವರಿತ ಉಪ ಅರಣ್ಯಾಧಿಕಾರಿ ಅನಿಲ್ ರವರು ಸ್ಥಳಕ್ಕೆ ಭೇಟಿಕೊಟ್ಟು ಬಾಬುರವರನ್ನು ಸುಂಟಿಕೊಪ್ಪ ಆಸ್ಪತ್ರೆಗೆ ಕರೆದೊಯ್ದರು.

ಕೃಪೆ : Q2 COORG NEWS

No comments

Post a Comment