ನಾಪೋಕ್ಲು ಚೆರಿಯ ಪರಂಬು ಪೈಸಾರಿ ಮತ್ತೊಮ್ಮೆ ಸಂಪೂರ್ಣ ಮುಳುಗಡೆಯತ್ತ

No comments

ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg)   : ಸಮೀಪದ ಚೇರಿಯಪರಂಬು ಪೈಸಾರಿ ನಿವಾಸಿಗಳು ಪ್ರತಿ ವರ್ಷದಂತೆ ಇದೀಗ  ಈ ವರ್ಷದ   ಮಳೆಯ ಅಬ್ಬರ ದಿಂದ ಕಾವೇರಿ   ನದಿ ತುಂಬಿ ಹರಿಯುತ್ತಿದ್ದು ಬಹುತೇಕ ಇಲ್ಲಿನ ಮನೆಗಳೆಲ್ಲ ಮುಳುಗಡೆಯಾಗಿದೆ. ಕೆಲವು ಮನೆಗಳು ನೀರಿನಲ್ಲಿ ಮುಳುಗಡೆಯಾಗಿ ಕಣ್ಮರೆಯಾಗಿದೆ  ಕಳೆದ ವರ್ಷದಂತೆ ಸಂಪೂರ್ಣ ಮುಳುಗಡೆ ಭೀತಿಯಲ್ಲಿದ್ದು ಇಲ್ಲಿನ ನಿವಾಸಿಗಳು ಆತಂಕಕೊಳಗಾಗಿದ್ದಾರೆ.

ಪ್ರತಿ ವರ್ಷದ ಮಳೆಗಾಲದಲ್ಲಿ   ಪ್ರವಾಹದಿಂದ ಈ ಪ್ರದೇಶ ಬಾಗಶ  ಮುಳುಗಡೆ ಯಾಗುತ್ತಿತ್ತು ಕಳೆದ 2ವರ್ಷಗಳಿಂದ
ಪ್ರವಾಹದಿಂದ ಈ ಪೈಸಾರಿ ಸಂಪೂರ್ಣ ಮುಳುಗಡೆಯಾಗಿ ಈ ಪ್ರದೇಶದಲ್ಲಿ ಸರ್ಕಾರಿ ಪೈಸಾರಿ ಒತ್ತುವರಿ ಮಾಡಿಕೊಂಡು ಸಣ್ಣ ಸಣ್ಣ ಮನೆ ನಿರ್ಮಿಸಿಕೊಂಡು ಸುಮಾರು 70ಕ್ಕೂ ಹೆಚ್ಚು ಕುಟುಂಬಗಳು  ವಾಸಮಾಡುತ್ತಿರುವರು ಸಂಕಷ್ಟಕಕ್ಕೆ ಸಿಲಿಕಿದ್ದರು ಆ ಸಂದರ್ಭದಲ್ಲಿ ಜಿಲ್ಲಾಡಳಿತ ನಾಪೋಕ್ಲು ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆರೆದು ಸಂತ್ರಸ್ತರಿಗೆ  ನೆರವಾಗಿದ್ದರೆ ಮತ್ತೊಂದು ಕಡೆ ಸಂಘ ಸಂಸ್ಥೆಗಳು ನೆರವಿನ ಹಸ್ತ ಚಾಚುಚ್ತಿದ್ದರು .

ಆದರೆ ಈ ವರ್ಷ ಇಲ್ಲಿನ ನಿವಾಸಿಗಳಿಗೆ ಕಂದಾಯ ಇಲಾಖೆ ವತಿಯಿಂದ  ಒಂದು ತಿಂಗಳು ಮುಂಚಿತವಾಗಿ ಇದು ಅಪಾಯಕಾರಿ ಪ್ರದೇಶ ಆದರಿಂದ ಸರ್ಕಾರಿ ಪೈಸಾರಿ ಜಾಗ ಅಕ್ರಮ ಒತ್ತುವರಿವರಿ ಮಾಡಿಕೊಂಡು ಈ ಪ್ರದೇಶದಲ್ಲಿ ವಾಸಿಸುತ್ತಿರವವರು,  ಜಾಗ ಕಾಲಿ ಮಾಡಿ ಸುರಕ್ಷಿತ  ಸ್ಥಳಕ್ಕೆ ಹೋಗಬೇಕಾಗಿ ಹಾಗೂ ಕೊರೋನಾ ಮಹಾ ಮಾರಿ ಇರುವ ಕಾರಣ ಈ ಬಾರಿ ಗಂಜಿ ಕೇಂದ್ರ ಇರೋದಿಲ್ಲ ಎಂದು ಎಚ್ಚರಿಕೆ ನೋಟೀಸು ಕೂಡ ಕೊಟ್ಟಿರುತ್ತಾರೆ.
ಅದರಂತೆ ಕೆಲವರು ಇಲ್ಲಿಂದ ಜಾಗ ಖಾಲಿ ಮಾಡಿ  ತಾಕ್ತಾಲಿಕವಾಗಿ ಸುರಕ್ಷಿತ ಸ್ಥಳಕ್ಕೆ ಹೋಗಿರುತ್ತಾರೆ
ಉಳಿದ ನಿವಾಸಿಗಳು ಈ ದಿನ ಬೆಳಿಗ್ಗೆ ಸಂಪೂರ್ಣ ಸ್ವಯಂ ಸ್ಥಳಾಂತರ ಗೊಂಡಿದ್ದಾರೆ.

ಈ ಪ್ರದೇಶವು  ನದಿ ದಡದಲ್ಲಿದ್ದು ಪ್ರವಾಹದಿಂದ ಮುಳುಗಡೆ ಆಗುವ ಅಪಾಯಕಾರಿ ಸ್ಥಳವಾಗಿದ್ದು  ಈ ಸ್ಥಳದಲ್ಲಿ ಅಕ್ರಮ ಒತ್ತುವರಿ ಮಾಡಿಕೊಂಡವರಿಗೆ
ಹಲವು ಬಾರಿ  ತೆರವು ಗೊಳಿಸುವಂತೆಕಂದಾಯ ಇಲಾಖೆಯಿಂದ   ಹಲವು ಬಾರಿ ನೋಟೀಸು ನೀಡಿದ್ದರು ತೆರವುಗೊಳಿಸದ ಕಾರಣ ಸರ್ಕಾರಿ ಜಾಗ   ಅಕ್ರಮ ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿದವರ   ವಿರುದ್ಧ ಪ್ರಕರಣ ದಾಖಲಿಸಲಾಗಿದೆ  ಹಾಗೂ ಇಲ್ಲಿ ಹೆಚ್ಚಾಗಿ ಬೇರೆ ಕಡೆ ಸ್ವಂತ ಮನೆ ಇರುವವರು ಕೂಡ  ಒತ್ತುವರಿ  ಮಾಡಿಕೊಂಡಿದ್ದಾರೆ ಅನ್ನುತ್ತಾರೆ ನಾಪೋಕ್ಲು ಕಂದಾಯ ಮತ್ತು  ಪಂಚಾಯಿತಿ ಅಧಿಕಾರಿಗಳು.

 ನಮಗೆ ನಾಪೋಕ್ಲು ಪಂಚಾಯ್ತಿ ವ್ಯಾಪ್ತಿಯಲ್ಲಿ   ಸೂಕ್ತ ಬದಲಿ ವ್ಯವಸ್ಥೆ ಮಾಡಿಕೊಟ್ಟರೆ ಅಲ್ಲದೆ ಈ ಸ್ಥಳ ಬಿಟ್ಟು ಹೋಗೋದಿಲ್ಲ ಅನ್ನುತ್ತಾರೆ ಇಲ್ಲಿನ ನಿವಾಸಿಗಳು
ಈ  ಪೈಸಾರಿ ಯಲ್ಲಿ  ಸುಮಾರು 70 ಹೆಚ್ಚು ಕುಟುಂಬಗಳು ಒತ್ತುವರಿ ಮಾಡಿಕೊಂಡು ವಾಸ ಮಾಡಿಕೊಂಡಿದ್ದರು  ಅಧಿಕಾರಿಗಳು ಕೇವಲ 17 ಜನರ ವಿರುದ್ಧ ಮಾತ್ರ ನಾಮ್ಕಾವಾಸ್ತೆ ಪ್ರಕರಣ ದಾಕಲಿಸಿ ಕೈ ತೊಳೆದು ಕೊಂಡಿರುತ್ತಾರೆ ಅನ್ನುವ ಆರೋಪ ಕೂಡ ಕೇಳಿ ಬರುತ್ತಿದೆ.

ಅದಲ್ಲದೆ ನಾವು ಬಡವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸಿಕೊಂಡಿದ್ದು ನಮಗೆ ಬೇರೆ ಗತಿ ಇಲ್ಲದ ಕಾರಣ ಎಷ್ಟೇ ಸಂಕಷ್ಟ ಬಂದರೂ ಇಲ್ಲಿ ವಾಸ ಮಾಡುತ್ತಿದ್ದೇವೆ
 ಇಲ್ಲಿ ಬೇರೆಕಡೆ ಸ್ವಂತ ನಿವೇಶನ ಮನೆ ಇರುವವರು
ಕೂಡ ಇಲ್ಲಿ ಒತ್ತುವರಿ ಮಾಡಿಕೊಂಡಿರೋದರಿಂದ ನಮಗೆ
ತೊಡಕಾಗಿದೆ ಎಂದು ಇಲ್ಲಿನ ಕೆಲವು ಬಡ ನಿವಾಸಿಗಳ ಅಳಲು
ಏನೇ ಆದರೂ ಈ ಕಷ್ಟ ಪಾಡು ಅಧಿಕಾರಿಗಳ ನಿರ್ಲಕ್ಷಕ್ಕೆ ಇಡಿದ ಕೈ ಕನ್ನಡಿಯಾಗಿದೆ ಹಾಗೂ ಇಲ್ಲಿನ ನಿವಾಸಿಗಳ ಸಂಕಷ್ಟ ಹೇಳ ತೀರದು ಸಂಬಂಧ ಪಟ್ಟವರು ಅರ್ಹರನ್ನು ಗುರುತಿಸಿ, ಸೂಕ್ತ ವ್ಯವಸ್ಥೆ ಮಾಡಿ ಸ್ಥಳಾಂತರಿಸಲಿ  ಎಂಬುದೇ ಇಲ್ಲಿನ ಜನ ಸಾಮಾನ್ಯರ ಮನವಿ.

ಪೈಸಾರಿ ಅಲ್ಲದೆ  ಕಳೆದ ವರ್ಷದ ಪ್ರವಾದಲ್ಲಿ ಚೆರಿಯ ಪರಂಬು ಗ್ರಾಮದ 8 ಕುಟುಂಬಗಳು ಮನೆಗಳು ಕಳೆದು ಕೊಂಡಿದ್ದು. ಸರ್ಕಾರ ಅಂದು ಮನೆ ಕಳೆದು ಕೊಂಡವರಿಗೆ10 ತಿಂಗಳ ಬಾಡಿಗೆ   ಮತ್ತು ಮನೆ ಕಟ್ಟಲು  5 ಲಕ್ಷ ಪರಿಹಾರ ಘೋಷಣೆ ಮಾಡಿ 5 ಕಂತುಗಳಲ್ಲಿ 10ತಿಂಗಳ ಒಳಗಾಗಿ ಕೊಡುದಾಗಿ ಭರವಸೆ ಕೊಟ್ಟಿದೆ.

ಆದರೆ ವರ್ಷ ಕಳೆದರು ಕೆಲವರಿಗೆ ಬಾಡಿಗೆ ಹಣ ಬಂದಿಲ್ಲ ಸಂತ್ರಸ್ತರಿಗೆ  ಕೇವಲ ತಲಾ 2ಲಕ್ಷ  ಮಾತ್ರಇವರ  ಕೈ ಸೇರಿದ್ದು ಮನೆ ನಿರ್ಮಾಣ ಕೆಲಸ ಪೂರ್ತಿ ಗೊಳಿಸಲಾಗದೆ ಅರ್ಧದಲ್ಲೇ ನಿಲ್ಲಿಸಲಾಗಿದ್ದು,  ಇದರಿಂದ ಇವರ ಬದುಕು ಅತಂತ್ರ ವಾಗಿದೆ ನಾವು ಉಳಿದ 3ಲಕ್ಷ ಹಣಕ್ಕಾಗಿ ಕಾಯುತ್ತಿದ್ದು ಸರ್ಕಾರ ಆದಷ್ಟು ಬೇಗ ಉಳಿದ ಹಣ ಬಿಡುಗಡೆಮಾಡಬೇಕಾಗಿ ಇಲ್ಲಿನ  ಸಂತಸ್ಥರ ಮನವಿ.





No comments

Post a Comment