ನಾಪೋಕ್ಲು ನಿರಂತರ ಮಳೆಯಿಂದ ಬಿರುಕು ಬಿಟ್ಟ ಭೂಮಿ ಕುಸಿಯುವ ಆತಂಕ

No comments

> ನಾಪೋಕ್ಲು - ಮಡಿಕೇರಿ ರಸ್ತೆ ಸಂಪರ್ಕ ಕಡಿತ

   ವರದಿ: ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) :: ಬಾರಿ ಗಾಳಿ ಮಳೆಯಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಸಮೀಪದಲ್ಲಿ ಯೂನಸ್ ಎಂಬವರ ಮನೆಯ ಹಿಂಭಾಗ ಬರೆ ಕುಸಿದಿದ್ದು, ಅದೇ ರೀತಿ ಮನೆಯ ಮುಂಭಾಗ ಸುಮಾರು 30 ಅಡಿಗಳಷ್ಟು ಭೂಮಿ ಬಿರುಕು ಬಿಟ್ಟಿದ್ದು ಭಾರಿ ಕುಸಿತ ಉಂಟಾಗುವ ಆತಂಕ ಎದುರಾಗಿದೆ. ಈ ಸ್ಥಳವು ನಾಪೋಕ್ಲು ಪಟ್ಟಣದ ಹೃದಯ ಭಾಗದಲ್ಲಿದ್ದು
ಬಿರುಕು ಬಿರುಕುಬಿಟ್ಟ ಭೂಮಿ ಕುಸಿತ ಉಂಟಾದರೆ ಬಾರಿ ದೊಡ್ಡ ಅನಾಹುತವೇ ಸಂಭವಿಸಲಿದೆ.
ಇನ್ನೂ ಮಡಿಕೇರಿ - ನಾಪೋಕ್ಲು ಮುಖ್ಯರಸ್ತೆಯ ಕೊಟ್ಟಮುಡಿ ಸಮೀಪ ರಸ್ತೆಯ ಮೇಲೆ 8 ಅಡಿಗಳಷ್ಟು ಎತ್ತರದಲ್ಲಿ ನದಿ ನೀರು ಹರಿಯುತ್ತಿದ್ದು ಸಂಪರ್ಕ ಕಡಿತಗೊಂಡಿದೆ.




No comments

Post a Comment