ನಾಪೋಕ್ಲು : ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಜೆಡಿಎಸ್ ಕಾರ್ಯಕರ್ತರು

No comments


ವರದಿ : ಹಾರಿಸ್ ನಾಪೋಕ್ಲು
  ನಾಪೋಕ್ಲು (Times Of Coorg) : ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ತಯಾರಿ ಸಂಬಂಧ ಸ್ಪರ್ಧಾಕಾಂಕ್ಷಿಗಳ ಹಾಗೂ ಕಾರ್ಯಕರ್ತರ   ಸಭೆಯಲ್ಲಿ ನಾಪೋಕ್ಲುವಿನ ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ಸೈನಾಸ್ ಮಹಮ್ಮದ್ ಅಲಿ, ಮತ್ತು ಜೆಡಿಎಸ್ ಕಾರ್ಯಕರ್ತ ಪಿ. ಎಂ. ಮಹಮ್ಮದ್ ,ರವರು ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ. ಎ, ಇಸ್ಮಾಯಿಲ್ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು,

ಇದೇ ಸಂದರ್ಭದಲ್ಲಿ  ನಾಪೋಕ್ಲು ವಲಯ  ಕಾಂಗ್ರೆಸ್ ಉಪಾಧ್ಯಕ್ಷರಾಗಿ ಪಿ.ಎಂ. ಮಸೂದ್ , ರವರನ್ನು ನೇಮಕ ಮಾಡಲಾಯಿತು. 

ಕಾರ್ಯಕ್ರಮದಲ್ಲಿ ಮಾತನಾಡಿದ ವಕ್ಸ್ ಬೋರ್ಡ್ ಮಾಜಿ ಅಧ್ಯಕ್ಷರಾದ, ಎಂ.ಎಚ್ ಅಬ್ದುಲ್ ರಹ್ಮಾನ್, ಕಾಂಗ್ರೆಸ್ ಪಕ್ಷವು ಬಡವರ ಪರವಾಗಿದ್ದು  ಮುಂಬರುವ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆಕಾಂಕ್ಷಿಗಳು ಟಿಕೆಟ್ ಸಿಗದಿದ್ದಲ್ಲಿ  ಅಸಮಾಧಾನ ಗೊಳ್ಳುವುದು ಬೇಡ ಟಿಕೆಟ್ ವಂಚಿತ ಯುವಕರಿಗೆ ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಸೂಕ್ತಸ್ಥಾನಮಾನ ನೀಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ  ಮಾಜಿ ಗ್ರಾಮ ಪಂಚಾಯಿತಿ ಸದಸ್ಯ, ಕುರೇಶಿ, ಚೋಕಿರ ರೋಷನ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆ ವನಜಾಕ್ಷಿ, ಅರುಣ್ ಬೇಬ, ಪರವಂಡ ಅಪ್ಸತ್, ನಾಪೋಕ್ಲು ವಲಯ ಕಾಂಗ್ರೆಸ್ ಕಾರ್ಯದರ್ಶಿ, ಸಿ. ಎಂ. ಅಬ್ದುಲ್ ಜಬ್ಬಾರ್. ಹಾಗೂ ಕಾರ್ಯಕರ್ತರು ಇದ್ದರು.






No comments

Post a Comment