ಕೊಡಗು ಜಿಲ್ಲೆಯಲ್ಲಿ ಇಂದು 37 ಮಂದಿಗೆ ಕೊರೋನಾ ಪಾಸಿಟಿವ್ / 29 ಆಗಸ್ಟ್ 2020 ಶನಿವಾರ

No comments

     ಮಡಿಕೇರಿ ಆ.29(Times Of Coorg):-ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8 ಗಂಟೆ ವೇಳೆಗೆ 23 ಮತ್ತು ಮಧ್ಯಾಹ್ನ 2.30 ರ ವೇಳೆಗೆ 14 ಸೇರಿದಂತೆ ಒಟ್ಟು 37 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

     ಮಡಿಕೇರಿ ರಾಘವೇಂದ್ರ ದೇವಾಲಯ ಬಳಿಯ 68 ವರ್ಷದ ಪುರುಷ ಮತ್ತು 31 ವರ್ಷದ ಮಹಿಳೆ. ಸೋಮವಾರಪೇಟೆ ತಾಲೂಕಿನ ಗರಗಂದೂರು ಸೇತುವೆ ಬಳಿಯ 34 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ರಿಮಾಂಡ್ ಹೋಮ್ ಬಳಿಯ 28 ಮತ್ತು 57 ವರ್ಷದ ಪುರುಷರು. ಸೋಮವಾರಪೇಟೆ ಗರ್ವಾಲೆ ಗ್ರಾಮ ಮತ್ತು ಅಂಚೆಯ 34 ವರ್ಷದ ಪುರುಷ. ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 62 ವರ್ಷದ ಮಹಿಳೆ, 29 ಮತ್ತು 70 ವರ್ಷದ ಪುರುಷರು. ಸೋಮವಾರಪೇಟೆ ಕೊಡ್ಲಿಪೇಟೆಯ ಕಿರ್ಕೋಡ್ಲಿ ಗ್ರಾಮದ 60 ವರ್ಷದ ಪುರುಷ. ದೇಚೂರಿನ ಆಂಜನೇಯ ಕಟ್ಟೆಯ 36 ವರ್ಷದ ಪುರುಷ. ಸೋಮವಾರಪೇಟೆ ತೋಳೂರುಶೆಟ್ಟಳ್ಳಿಯ 16 ವರ್ಷದ ಬಾಲಕ. ದಕ್ಷಿಣ ಕನ್ನಡ ಸುಳ್ಯದ 33 ವರ್ಷದ ಪುರುಷ.   

   ಮೂರ್ನಾಡುವಿನ ಗಾಂಧೀನಗರದ 26 ವರ್ಷದ ಮಹಿಳೆ. ವಿರಾಜಪೇಟೆ ನೆಹರು ನಗರದ ಮಸೀದಿ ಬಳಿಯ 33 ವರ್ಷದ ಪುರುಷ, 7ಮತ್ತು 2 ವರ್ಷದ ಬಾಲಕ ಹಾಗೂ 49 ವರ್ಷದ ಮಹಿಳೆ. ಕುಶಾಲನಗರ ನಾಗೇಗೌಡ ಬಡಾವಣೆಯ ಬಲಮುರಿ ದೇವಾಲಯ ಹಿಂಭಾಗದ 42 ವರ್ಷದ ಮಹಿಳೆ. ವಿರಾಜಪೇಟೆ ವಿದ್ಯಾನಗರದ 58 ಮತ್ತು 80 ವರ್ಷದ ಮಹಿಳೆಯರು. ವಿರಾಜಪೇಟೆ ನಿಸರ್ಗ ಲೇಔಟಿನ 32 ವರ್ಷದ ಮಹಿಳೆ ಮತ್ತು 8 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ.

      ವಿರಾಜಪೇಟೆ ಮೊಗರ್ ಗಲ್ಲಿ ಮಸೀದಿ ಬಳಿಯ ಮಸೀದಿ ಬಳಿಯ 25 ವರ್ಷದ ಮಹಿಳೆ. ವಿರಾಜಪೇಟೆ ಡೆಂಟಲ್ ಕಾಲೇಜು ಬಳಿಯ 32 ವರ್ಷದ ಮಹಿಳೆ. ಸೋಮವಾರಪೇಟೆ ತಾಲೂಕಿನ ನೆಲ್ಲಿಹುದಿಕೇರಿಯ ನಲ್ವತ್ತೆಕ್ರೆಯಲ್ಲಿನ 50 ವರ್ಷದ ಪುರುಷ. ಕುಶಾಲನಗರ ಬೈಚನಹಳ್ಳಿಯ ವಿಲ್ಕೋ ಗೋಲ್ಡ್ ಬಳಿಯ 60 ವರ್ಷದ ಮಹಿಳೆ. ಕುಶಾಲನಗರದ ಗುಡ್ಡೆಹೊಸೂರುವಿನ 35 ವರ್ಷದ ಪುರುಷ. ಕುಶಾಲನಗರ ಕೂಡಿಗೆಯ ಸೈನಿಕ ಶಾಲೆಯ ವಸತಿಗೃಹದ 35 ವರ್ಷದ ಪುರುಷ. ಕುಶಾಲನಗರ ಸುಂದರನಗರ ವೃತ್ತ ಬಳಿಯ 50 ವರ್ಷದ ಪುರುಷ. ವಿರಾಜಪೇಟೆ ಹುದಿಕೇರಿಯ ಪ್ರಾಥಮಿಕ ಶಾಲೆ ಎದುರಿನ 46 ವರ್ಷದ ಪುರುಷ. ಪಿರಿಯಾಪಟ್ಟಣ ಬಾರೆಹೊಸಹಳ್ಳಿಯ ಸಮುದಾಯ ಭವನ ಸಮೀಪದ 38 ವರ್ಷದ ಮಹಿಳೆ. ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೇಚೂರಿನ ಆಂಜನೇಯ ಕಟ್ಟೆಯ 13 ವರ್ಷಸ ಬಾಲಕಿ. ದಕ್ಷಿಣ ಕನ್ನಡದ ಕಲ್ಲುಗುಂಡಿಯ 66 ವರ್ಷದ ಪುರುಷ. ಕಲ್ಕಂದೂರುವಿನ 49 ವರ್ಷದ ಮಹಿಳೆ. ಮೈಸೂರಿನ 56 ವರ್ಷದ ಪುರುಷ. ಮಡಿಕೇರಿ ಎಫ್.ಎಂ.ಸಿ ಕಾಲೇಜು ಹಿಂಭಾಗದ 63 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.

      ಜಿಲ್ಲೆಯಲ್ಲಿನ ಒಟ್ಟು ಕೋವಿಡ್-19 ಪ್ರಕರಣಗಳ ಸಂಖ್ಯೆ 1379 ಆಗಿದ್ದು, 1098 ಮಂದಿ ಗುಣಮುಖರಾಗಿದ್ದಾರೆ. 262 ಸಕ್ರಿಯ ಪ್ರಕರಣಗಳಿದ್ದು, 19 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 224 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments

Post a Comment