ನಾಪೋಕ್ಲು ಕೋಳಿ ಮಾಂಸದ ಅಂಗಡಿಯಲ್ಲಿ ಬೃಹತ್ ಗಾತ್ರದ ಎಮೋ ಕೋಳಿ
ವರದಿ : ಹಾರಿಸ್ ನಾಪೋಕ್ಲು
ನಾಪೋಕ್ಲು (Times Of Coorg) : ಈ ದಿನ ನಾಪೋಕ್ಲು ಪಟ್ಟಣದ ಹಲಾಲ್ ಕೋಳಿ ಮಾಂಸದ ಅಂಗಡಿಯಲ್ಲಿ 32 ಕೆಜಿ ತೂಕದ ಎಮೋ ಕೋಳಿ ಮಾರಾಟಕ್ಕೆ ಇಟ್ಟಿದ್ದು, ಇದನ್ನು ನೋಡಲು ಗ್ರಾಹಕ ರಿಗಿಂತ ವೀಕ್ಷಕರೇ ಹೆಚ್ಚಾಗಿ ಕುತೂಹಲದಿಂದ ಸೇರಿರುವ ದೃಶ್ಯ ಕಂಡು ಬಂತು.
ಈ ಸಂದರ್ಭ ಮಾತನಾಡಿದ ಮಾಲೀಕ ಅಬೂಬಕ್ಕರ್ ನಾನು ಕಳೆದ 20 ವರ್ಷಗಳಿಂದ ನಾಪೋಕ್ಲು ಪಟ್ಟಣದಲ್ಲಿ ಕೋಳಿ ಮಾಂಸ ವ್ಯಾಪಾರ ಮಾಡುತ್ತಿದ್ದು, ಎಮೋ ಕೋಳಿ ಕುಶಾಲನಗರದಿಂದ ಖರೀದಿಸಿ ತಂದಿದ್ದು.
ಈ ಎಮೋ ಕೋಳಿ ಮಾಂಸಕ್ಕೆ ದರ ಹೆಚ್ಚಿದ್ದು ಸಾಧಾರಣವಾಗಿ ಕೆಜಿ ಗೆ 600 ರೂಪಾಯಿ ಮಾರಾಟ ಮಾಡುತ್ತಾರೆ ಹಾಗೂ ಇದರ ಮಾಂಸ ಕೆಲವು ರೋಗಗಳಿಗೆ ರಾಮಬಾಣ ಕೂಡ ಆಗಿದೆ ಎನ್ನುತ್ತಾರೆ ಕೆಲ ಗ್ರಾಹಕರು.
ಆದರೆ ಈ ದಿನ ಕೊರೊನಾದಿಂದ ಜನರು ಸಂಕಷ್ಟದಲ್ಲಿರುವ ಕಾರಣ ಯಾವುದೇ ಲಾಭ ಪಡೆದುಕೊಳ್ಳದೆ ನಮ್ಮ ಅಂಗಡಿಯ ಗ್ರಾಹಕರಿಗೆ ಗೋಸ್ಕರ ಕೇವಲ ಕೆಜಿ ಗೆ 300 ರೂಪಾಯಿಯಂತೆ ಮಾರಾಟ ಮಾಡುತ್ತಿದ್ದೇನೆ ಎಂದು ತಿಳಿಸಿದರು.



No comments
Post a Comment