ಕೊಡಗು ಜಿಲ್ಲೆಯಲ್ಲಿ ಇಂದು 22 ಹೊಸ ಕೋವಿಡ್ ಪ್ರಕರಣಗಳು ದೃಢ
ಮಡಿಕೇರಿ (Times Of Coorg):-ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ 8 ಗಂಟೆ ವೇಳೆಗೆ 13 ಮತ್ತು ಮಧ್ಯಾಹ್ನ 1 ಗಂಟೆಗೆ 09 ಸೇರಿದಂತೆ 22 ಹೊಸ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ಮಡಿಕೇರಿಯ ಕೃಷಿ ಇಲಾಖೆ ಕಚೇರಿ ಸಮೀಪದ 21 ವರ್ಷದ ಮಹಿಳೆ. ಮಡಿಕೇರಿ ಮಹದೇವಪೇಟೆಯ 69 ವರ್ಷದ ಪುರುಷ ಮತ್ತು 24 ವರ್ಷದ ಮಹಿಳೆ. ಸೋಮವಾರಪೇಟೆ ಚೆಟ್ಟಳ್ಳಿ ಪೊನ್ನತ್ ಮೊಟ್ಟೆಯ 27 ವರ್ಷದ ಪುರುಷ. ಮಡಿಕೇರಿಯ ಆಜಾದ್ ನಗರದ 40 ಮತ್ತು 19 ವರ್ಷದ ಪುರುಷ. ಸೋಮವಾರಪೇಟೆ ಶನಿವಾರ ಸಂತೆಯ ಗುಂಡೂರಾವ್ ಬಡಾವಣೆಯ 1 ವರ್ಷದ ಗಂಡು ಮಗು. ಕುಶಾಲನಗರ ಕೂಡಿಗೆ ಸೇತುವೆ ಬಳಿಯ 64 ವರ್ಷದ ಪುರುಷ ಮತ್ತು 54 ವರ್ಷದ ಮಹಿಳೆ.
ಕುಶಾಲನಗರ ಗುಮ್ಮನಕೊಲ್ಲಿಯ ಬಸವೇಶ್ವರ ದೇವಾಲಯ ಹಿಂಭಾಗದ 47 ವರ್ಷದ ಪುರುಷ. ಸೋಮವಾರಪೇಟೆ ಕುಸುಬೂರಿನ ಬೇಲೂರು ಬಾಣೆಯ 60 ವರ್ಷದ ಮಹಿಳೆ. ಮಡಿಕೇರಿಯ ಮರೂರುವಿನ ಕಡಂಗದ 58 ವರ್ಷದ ಪುರುಷ. ಶನಿವಾರಸಂತೆಯ ವಿಘ್ನೇಶ್ವರ ಚೌಟ್ರಿ ಬಳಿಯ 39 ವರ್ಷದ ಪುರುಷ. ಶನಿವಾರಸಂತೆಯ ರಾಮಮಂದಿರ ಮುಖ್ಯರಸ್ತೆಯ 31 ವರ್ಷದ ಪುರುಷ. ಕುಶಾಲನಗರ ಬೈಚನಹಳ್ಳಿಯ ಆರ್ ಸಿ ಲೇಔಟ್ ನ 62 ವರ್ಷದ ಪುರುಷ. ಸೋಮವಾರಪೇಟೆ ಆಲೂರು ಸಿದ್ಧಾಪುರದ 60 ಮತ್ತು 79 ವರ್ಷದ ಮಹಿಳೆ. ಮಡಿಕೇರಿ ನಾಪೋಕ್ಲುವಿನ ಮುತ್ತಪ್ಪ ದೇವಾಲಯ ಬಳಿಯ 58 ವರ್ಷದ ಪುರುಷ. ಸೋಮವಾರಪೇಟೆ ಗೋಣಿಮರೂರು ಅಂಚೆಯ ಗಣಗೂರುವಿನ 42 ವರ್ಷದ ಪುರುಷ. ಮಡಿಕೇರಿ ಮಹದೇವಪೇಟೆಯ ಗಣಪತಿ ಬೀದಿಯ 5 ವರ್ಷದ ಬಾಲಕಿ.
ರ್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ಮಡಿಕೇರಿಯ ಡೈರಿ ಫಾರಂನ ಅಗ್ನಿಶಾಮಕ ಕಚೇರಿ ಸಮೀಪದ 24 ವರ್ಷದ ಪುರುಷ. ಮಡಿಕೇರಿ ಕುಂಜಿಲ ಗ್ರಾಮದ 29 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು 705 ಕೋವಿಡ್-19 ಪ್ರಕರಣಗಳು ದೃಢಪಟ್ಟಿದ್ದು, 409 ಮಂದಿ ಗುಣಮುಖರಾಗಿದ್ದಾರೆ. 285 ಸಕ್ರಿಯ ಪ್ರಕರಣಗಳಿದ್ದು, 11 ಮರಣ ಪ್ರಕರಣಗಳು ವರದಿಯಾಗಿದೆ. ಜಿಲ್ಲೆಯಲ್ಲಿನ ಕಂಟೈನ್ ಮೆಂಟ್ ವಲಯಗಳ ಸಂಖ್ಯೆ 201 ಆಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

No comments
Post a Comment