ಸೇವ್ ಇಂಡಿಯಾ ಹೋರಾಟಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ (CPI) ಕೊಡಗು ಜಿಲ್ಲಾ ಸಮಿತಿ ಬೆಂಬಲ
ಮಡಿಕೇರಿ (Times Of Coorg) ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಕಾನೂನುಗಳು ರೈತ -ಕಾರ್ಮಿಕ ವಿರೋಧಿ ಎಂದು ಆರೋಪಿಸಿ ಆಗಸ್ವ್ 10ರಂದು ಅಖಿಲ ಭಾರತ -ರೈತ-ಕಾರ್ಮಿಕ ಸಂಘಟನೆಗಳು ಸೇವ್ ಇಂಡಿಯಾ ಚಳವಳಿಗೆ ಭಾರತ ಕಮ್ಯುನಿಸ್ಟ್ ಪಕ್ಷ ಕೊಡಗು ಜಿಲ್ಲಾ ಸಮಿತಿ ಬೆಂಬಲ ವ್ಯಕ್ತಪಡಿಸಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಕಾರ್ಯದರ್ಶಿ ವಕೀಲ ಕೆ.ವಿ.ಸುನಿಲ್ ರವರು ರೈತ-ಕಾರ್ಮಿಕರ ಜನಸಾಮಾನ್ಯರ ಹಿತಾಸಕ್ತಿಯನ್ನು ನಾಶಪಡಿಸುವ ಭೂ ಸುಧಾರಣೆಮಸೂದೆ ,ವಿದ್ಯುತ್ ಮಸೂದೆ, ಎ.ಪಿ.ಎಂ.ಸಿ ಮಸೂದೆಗಳು ಹಾಗೂ ಕಾರ್ಮಿಕ ಕಾಯ್ದೆಯ ತಿದ್ದುಪಡಿಯು ಜನ ಸಾಮಾನ್ಯರಿಗೆ ಮುಂದಿನ ದಿನಗಳಲ್ಲಿ ತೀರ್ವರೀತಿಯಲ್ಲಿ ಮಾರಕವಾಗಲಿದ್ದು . ಜೀತಪದ್ದತಿಗೆ ಮರು ಜನ್ಮ ನೀಡುವಂತಾಗಿದೆ ಎಂದ ಅವರು ಕೋವಿಡ್ ಹಗರಣವನ್ನು ತನಿಖೆಗೆ ವಹಿಸಬೇಕು ಒತ್ತಾಯಿಸಿದರು.
ಜಂಟಿ ಕ್ರೀಯಾ ಸಮೀತಿಯ ನೇತೃತ್ವದಲ್ಲಿ,
ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು,ಯುವಸಂಘಟನೆಗಳು,
ವಿಧ್ಯಾರ್ಥಿ ಸಂಘಟನೆಗಳು,ವಿವಿಧ ರಾಜಕೀಯ ಪಕ್ಷಗಳು ಪಾಲ್ಗೊಂಡು ನಡೆಸುವ ಈ ಚಳುವಳಿಗೆ ಸಿಪಿಐ ಪಕ್ಷ ಬೆಂಬಲಿಸಲಿದೆ ಎಂದರು.

No comments
Post a Comment