ಕೊಡ್ಲಿಪೇಟೆ : ಸರ್ಕಾರದ ನಿಯಮಗಳನ್ನು ಪಾಲಿಸಿ ಸಾಮೂಹಿಕ ಬಕ್ರೀದ್ ಪ್ರಾರ್ಥನೆ
ಕೊಡ್ಲಿಪೇಟೆ (Times Of Coorg) : ಮಸ್ಜಿದುನ್ನೂರ್ ಹ್ಯಾಂಡ್‌ಪೋಸ್ಟ್ ನಲ್ಲಿರುವ ಮಸ್ಜಿದುನ್ನೂರ್ ನಲ್ಲಿ ತ್ಯಾಗ ಬಲಿದಾನದ ಪ್ರತಿಕವಾದ ಈದುಲ್ ಅಝ್‌ಹಾ ಪ್ರಯುಕ್ತ ಸಾಮಾಹಿಕ ಪ್ರಾರ್ಥನೆಯನ್ನು ಸರ್ಕಾರದ ನಿಯಮಗಳನ್ನು ಪಾಲಿಸಿ ಸರಳವಾಗಿ ಆಚರಿಸಲಾಯಿತು,
ಕೋವಿಡ್ 19 ರ ಕಾರಣದಿಂದಾಗಿ ಸರ್ಕಾರ ಹಾಗೂ ಜಿಲ್ಲಾಡಳಿತ ಹಲವಾರು ರೀತಿಯ ಮುಂಜಾಗೃತಾ ಕ್ರಮ ಕೈಗೊಂಡಿದ್ದು 50 ಜನರ ಮೀತಿಯನ್ನು ವಿಧಿಸಿದ ಹಿನ್ನಲೆಯಲ್ಲಿ ಕೊಡ್ಲಿಪೇಟೆ ಶಾಫಿ ಮಸೀದಿ ಗೊಳಪಡುವ ಮೊಹಲ್ಲಾ ವ್ಯಾಪ್ತಿಯಲ್ಲಿ ಹ್ಯಾಂಡ್‌ಪೋಸ್ಟ್ ನಲ್ಲಿರುವ ಕೇಂದ್ರ ಮಸ್ಜಿದ್ ಹಾಗೂ ಮಸ್ಜಿದುನ್ನೂರ್ ಅಧೀನದಲ್ಲಿರುವ ಬ್ಯಾಡಗೊಟ್ಟ ಮತ್ತು ಕಲ್ಲುಕೋರೆ ಮಸ್ಜಿದ್ ಸೇರಿದಂತೆ ಮೂರು ಕಡೆ ನಮಾಝ್ ಏರ್ಪಡಿಸಲಾಗಿತ್ತು .
ವಕ್ಪ್ ಹಾಗೂ ಅಲ್ಪಸಂಖ್ಯಾತ ಇಲಾಖೆಯ ನಿರ್ದೆಶನದಂಥೆ ಅರುವತ್ತು ವರ್ಷ ಮೆಲ್ಪಟ್ಟ ವಯಸ್ಕರಿಗೆ ಹಾಗೂ ಹನ್ನೆಡರಡು ವರ್ಷದೊಳಗಿನ ಮಕ್ಕಳಿಗೆ ಮತ್ತು ಹೊರ ಊರಿನವರಿಗೆ ಕಡ್ಡಾಯವಾಗಿ ಪ್ರವೇಶ ನಿರ್ಬಂದಿಸಲಾಗಿತ್ತು.
ಪ್ರಾರ್ಥನೆಗೆ ಬರುವವರು ಪಾಲಿಸಬೇಕಾದ ನಿಯಮಗಳಿರುವ ನಾಮ ಫಲಕವನ್ನು ಮಸೀದಿ ಮುಂಬಾಗ ಪ್ರದರ್ಶಿಸಿದ ಮಸ್ಜಿದುನ್ನೂರ್ ಆಡಳಿತ ಮಂಡಳಿಯ ಸದಸ್ಯರುಗಳು ಪ್ರವೇಶ ದ್ವಾರದಲ್ಲಿಯೇ ಥರ್ಮಲ್ ಸ್ಕ‌್ಯಾ ನರ್ ಮೂಲಕ ಎಲ್ಲರನ್ನು ಸ್ಕಿನಿಂಗ್ ಮಾಡಿ ಒಳಬಿಡುತ್ತಿದ್ದರು.
ಸಮಾಜಿಕ ಅಂಥರ ಕಾಪಾಡಿಕೊಂಡು ಮಾಸ್ಕ್ ಧರಿಸಿದವರಾಗಿ ಎಲ್ಲರು ಪಾಲ್ಗೊಂಡರು. ಬಕ್ರೀದ್ ಪ್ರಾರ್ಥನೆ ನಂತರ ಹಸ್ತಲಾಘವ ಹಾಗೂ ಆಲಿಂಗನ ಮಾಡುವುದು ವಾಡಿಕೆ.ಆದರೆ ಕೊವಿಡ್ 19 ಹಿನ್ನಲೆಯಲ್ಲಿ ಈ ಪದ್ದತಿಯನ್ನು ಯಾರು ಮಾಡದಂಥೆ ಧರ್ಮಗುರುಗಳು ಸೂಚಿಸಿದ್ದರು. ಗುರುಗಳ ಸೂಚನೆಯನ್ನು ಎಲ್ಲರೂ ಅನುಸರಿಸಿದರು.
ಮಸ್ಜಿದುನ್ನೂರ್ ಪ್ರಮುಖ ದರ್ಮ ಗುರುಗಳಾದ ಹಾರೀಸ್ ಬಾಖವಿ ರವರು ಬಕ್ರೀದ್ ಸಂದೇಶವನ್ನು ನೀಡಿ
ಕರೋನಾ ವಿಪತ್ತು ಸಂಪೂರ್ಣವಾಗಿ ಮುಕ್ತವಾಗಲೂ ಪ್ರಾರ್ಥಿಸಿದರು . ಸಹಾಯಕ ಗುರುಗಳಾಗಿ ಝಹೀರ್ ನಿಜಾಮಿ ರವರು ಕಾರ್ಯ ನಿರ್ವಹಿಸಿದರು.
ದರ್ಮಗುರುಗಳಾದ ರಶೀದ್ ಆಮೀನಿ ಹಾಗೂ ಸಮೀರ್ ಸಖಾಫಿರವರುಗಳು ಕಲ್ಲುಕೋರೆ ಮತ್ತು ಬ್ಯಾಡಗೊಟ್ಟ ಮಸ್ಜಿದ್ ನಲ್ಲಿ ಪ್ರಾಥನೆ ಗೆ ನೇತೃತ್ವ ವಹಿಸಿದರು.
ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ಯ ನಂತರ ಕಬರ್ ಸ್ಥಾನಕ್ಕೆ ಒಬ್ಬರಾಗಿ ತೆರಳಿ ಮರಣಹೊಂದಿರುವ ತಮ್ಮ ಕುಟುಂಬಸ್ಥರ ಪರಲೋಕ ಮೋಕ್ಷಕ್ಕಾಗಿ ಪ್ರಾರ್ಥಿಸಿದರು,
ಆಡಳಿತ ಸಮಿತಿ ಅದ್ಯಕ್ಷರಾದ ಸುಲ್ಯೆಮಾನ್ .ಡಿ.ಎ ,
ಪ್ರಧಾನ ಕಾರ್ಯದರ್ಶಿ ಹನೀಪ್ , ಖಜಾಂಜಿ ಇಬ್ರಾಹಿಂ ಮಲ್ಲಳ್ಳಿ , ಸಹ ಕಾರ್ಯದರ್ಶಿ ಮಹಮ್ಮದ್ ,
ಸದಸ್ಯರುಗಳಾದ ಬಾಸಿತ್ , ಸಾಬ್ ಜಾನ್ , ಸುಲ್ಯೆಮಾನ್ ಕಿರಿಕೊಡ್ಲಿ ,ರಝಾಕ್ ಆರ್ಮಿ , ರಪೀಕ್ ,
ಯೂತ್ ಸಮಿತಿಯ ಅಶ್ರಪ್ ರಹೀಂ ,ನೌಫಲ್
ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.





No comments
Post a Comment