ಸಿದ್ದಾಪುರ (Times Of Coorg) : ಕೊರೋನಾ ವೈರಸ್ ಪತ್ತೆಯಾಗಿರುವ ಹುಂಡಿ ಹಾಗೂ ಬೆಟ್ಟದಕಾಡು ಗ್ರಾಮದಲ್ಲಿ ಹಲವು ದಿನಗಳಿಂದ ಜಿಲ್ಲಾಡಳಿತ ಸೀಲ್ ಡೌನ್ ಮಾಡಲಾಗಿದೆ. ಕಾರ್ಮಿಕ ಕುಟುಂಬಗಳೇ ಅಧಿಕವಾಗಿರುವ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬಗಳು ಸಂಕಷ್ಟಕ್ಕೊಳಗಾಗಿ ರುವುದನ್ನು ಮನಗಂಡು
ಸಿದ್ದಾಪುರದ ಸಮಾಜ ಸೇವಕ ತರಕಾರಿ ವ್ಯಾಪಾರಿ ಅಶ್ರಫ್ (ಅಚ್ರು) ಸಿದ್ದಾಪುರ ಬಸ್ ನಿಲ್ದಾಣದ ಪ್ಯಾರಡೈಸ್ ಬಿಲ್ಡಿಂಗ್ ನಲ್ಲಿರುವ ಅಂಗಡಿಯಿಂದ ಎರಡು ಗ್ರಾಮದ 150ಕ್ಕೊ ಹೆಚ್ಚು ಕುಟುಂಬಗಳಿಗೆ ಕಿಟ್ ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. .
ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯ ಸಜಿ ಥೋಮಸ್ ಮಾತನಾಡಿ ಮಾತನಾಡಿ ಕೊರೊನಾ ಮಹಾಮಾರಿ ವೈರಸ್ ನಿಂದ ಸಂಕಷ್ಟಕ್ಕೊಳಗಾಗಿದ್ದು
ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೊಡಗು ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಹುಂಡಿ ಗ್ರಾಮವನ್ನು ಹಲವು ದಿನಗಳಿಂದ ಸೀಲ್ ಡೌನ್ ಮಾಡಲಾಗಿದೆ. ಗ್ರಾಮದಲ್ಲಿ ಕಾರ್ಮಿಕ ಕುಟುಂಬಗಳೇ ಅಧಿಕವಾಗಿದ್ದು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದ ಕುಟುಂಬಗಳಿಗೆ ಸರ್ಕಾರ ಆಹಾರ ಕಿಟ್ಟು ವಿತರಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ ಅವರು
ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಾನಿಗಳು ಅಗತ್ಯ ವಸ್ತುಗಳನ್ನು ನೀಡಿದ್ದಾರೆ.
ಇದರಿಂದ ಜನರ ಹಸಿವು ನೀಗಿದೆ.
ಸಿದ್ದಾಪುರ ತರಕಾರಿ ವ್ಯಾಪಾರಿ ಗ್ರಾಮಕ್ಕೆ ಬೇಕಾದ ಅಗತ್ಯ ತರಕಾರಿ ಕಿಟ್ ಗಳನ್ನು ನೀಡಿ ಮಾನವೀಯತೆ ತೋರಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸುತ್ತಿರುವುದಾಗಿ ಹೇಳಿದರು.
ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವಾರ್ಡ್ ಸದಸ್ಯ ಹನೀಫ್ ಮಾತನಾಡಿ ಸಿಲ್ಡ್ ವ್ಯಾಪ್ತಿಯ ಜನರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಕಳೆದ ಹಲವು ದಿನಗಳಿಂದ ದಾನಿಗಳು ಅಗತ್ಯ ವಸ್ತುಗಳನ್ನು ನೀಡಿದ್ದಾರೆ.
ಸಿದ್ದಾಪುರದ ತರಕಾರಿ ವ್ಯಾಪಾರಿ ನೂರಕ್ಕೂ ಹೆಚ್ಚು ಕುಟುಂಬಗಳಿಗೆ ತರಕಾರಿ ಕಿಟ್ಗಳನ್ನು ನೀಡಿ ಮಾನವೀಯತೆ ತೋರಿದ್ದಾರೆ
ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಈ ಸಂದರ್ಭ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಸದಸ್ಯ ಅಫ್ಸಲ್ ಹುಂಡಿ ಗ್ರಾಮದ ಪ್ರಮುಖರಾದ ಮನೋಹರ್, ಸಮೀರ್, ಮನ್ಸೂರ್, ರಫೀಕ್ ,ಅಲಿ ಸೇರಿದಂತೆ ಮತ್ತಿತರರು ಇದ್ದರು

No comments
Post a Comment