ಕೊಡಗು ಜಿಲ್ಲೆಯಲ್ಲಿ ಇಂದು 5 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ : ಕೋವಿಡ್ ಧೃಡಪಟ್ಟಿದ್ದ ಮಹಿಳೆ ಸಾವು

No comments


ಮಡಿಕೇರಿ (Times Of Coorg) :  ಕೊಡಗು ಜಿಲ್ಲೆಯಲ್ಲಿ ಈ ದಿನ ಹೊಸದಾಗಿ 05 ಕೋವಿಡ್ ಸೋಂಕಿತ ಪ್ರಕರಣಗಳು ಮತ್ತು 01 ಸಾವು ಸಂಭವಿಸಿದೆ. ಸೋಮವಾರಪೇಟೆ ತಾಲ್ಲೂಕು ತಲ್ತರೆಶೆಟ್ಟಳ್ಳಿ ಗ್ರಾಮದ ನಿವಾಸಿ, ಬೆಂಗಳೂರಿಂದ ಹಿಂದಿರುಗಿರುವ ಮತ್ತು ಜ್ವರ ಲಕ್ಷಣವಿದ್ದ 36 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ವಿರಾಜಪೇಟೆ ತಾಲ್ಲೂಕು ತೋರ ಗ್ರಾಮದ ಜ್ವರ ಲಕ್ಷಣವಿದ್ದ 29 ವರ್ಷದ ಪುರುಷರೊಬ್ಬರಿಗೆ ಸೋಂಕು ದೃಢಪಟ್ಟಿದೆ. ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪದ ವಿಜಯನಗರ ಬಡಾವಣೆಯ ನಿವಾಸಿ 39 ವರ್ಷದ ಮಹಿಳೆ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಮಡಿಕೇರಿಯ ಮೆಡಿಕಲ್ ಕಾಲೇಜು ಬಳಿಯ ಪರಿಷ್ ಬಾಣೆ ನಿವಾಸಿ 34 ವರ್ಷದ ಮಹಿಳೆ ಆರೊಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢಪಟ್ಟಿದೆ. ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ನಿವಾಸಿ ಶಿವರಾಮ ಕಾರಂತ ಬಡಾವಣೆಯ 55 ವರ್ಷದ ಮಹಿಳೆ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ಸೋಂಕು ದೃಢಪಟ್ಟಿದೆ. ವಿರಾಜಪೇಟೆ ತಾಲ್ಲೂಕಿನ ನಿವಾಸಿ, 86 ವರ್ಷದ ಮಹಿಳೆಯೊಬ್ಬರು ದಿ:11-07-2020 ರಂದು ರಾತ್ರಿ 10.45 ಗಂಟೆಗೆ ಮೃತಪಟ್ಟಿರುತ್ತಾರೆ.  ಇವರು ದಿನಾಂಕ:06-07-2020 ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ದಿನಾಂಕ:07-07-2020 ರಂದು ಇವರಿಗೆ ಸೋಂಕು ದೃಢಪಟ್ಟಿದ್ದು, ಇವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು.  ಇವರು ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದರು.  ಈ ದಿನ ಸರ್ಕಾರದ ಮಾರ್ಗಸೂಚಿಯಂತೆ ಮೃತರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಈ ದಿನ ಜಿಲ್ಲೆಯಲ್ಲಿ ಹೊಸದಾಗಿ 05 ನಿಯಂತ್ರಿತ ವಲಯಗಳನ್ನು ತೆರೆಯಲಾಗಿದೆ.
. ತಲ್ತರೆಶೆಟ್ಟಳ್ಳಿ, ಸೋಮವಾರಪೇಟೆ
. ತೋರ, ವಿರಾಜಪೇಟೆ
. ವಿಜಯನಗರ ಬಡಾವಣೆ, ಗೋಣಿಕೊಪ್ಪ
. ಪರಿಷ್ ಬಾಣೆ, ಮಡಿಕೇರಿ
. ಶಿವರಾಮ ಕಾರಂತ ಬಡಾವಣೆ, ಕುಶಾಲನಗರ

*ಜಿಲ್ಲೆಯಲ್ಲಿ ಈ ಹಿಂದೆ ತೆರೆಯಲಾದ ಈ ಕೆಳಕಂಡ 03 ನಿಯಂತ್ರಿತ ಪ್ರದೇಶಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.*
. ಸುಭಾಷ್ ನಗರ, ಮೂರ್ನಾಡು
. ಅಣ್ಣೇಗೌಡ ಬಡಾವಣೆ, ಕುಶಾಲನಗರ
. ಮೀನುಪೇಟೆ, ವಿರಾಜಪೇಟೆ

*ಘೋಷ್ವಾರೆ*
ಜಿಲ್ಲೆಯಲ್ಲಿ ವರದಿಯಾದ ಸೋಂಕಿತ ಪ್ರಕರಣಗಳು : 156
ಆಸ್ಪತ್ರೆಯಿಂದ ಬಿಡುಗಡೆಗೊಂಡ ಪ್ರಕರಣಗಳು: 62
ಸಕ್ರಿಯ ಪ್ರಕರಣಗಳು: 92
ಮೃತ ಪಟ್ಟ ಪ್ರಕರಣಗಳು: 02
ಒಟ್ಟು ನಿಯಂತ್ರಿತ ಪ್ರದೇಶಗಳು: 63

No comments

Post a Comment