ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ರಾಜಗೃಹದ ಮೇಲೆ ದಾಂಧಲೆ ನಡೆಸಿರುವುದು ಖಂಡನೀಯ:ಸಿಪಿಐ

No comments

ವರದಿ ಎಂ.ಎ .ಕೃಷ್ಣ ಕರಡಿಗೋಡು
ಸಿದ್ಧಾಪುರ (Times Of Coorg) : ಮುಂಬೈನ ದಾದರ್ ನಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರಮನೆ 'ರಾಜ ಗೃಹ'ದ ಮೇಲಿನದಾಳಿಯ ದುಷ್ಕ್ರತ್ಯವನ್ನು ಭಾರತ ಕಮ್ಯುನಿಸ್ಟ್ ಪಕ್ಷ ಖಂಡಿಸುತ್ತದೆ.
ಇಡೀವಿಶ್ವವೇ ಮೆಚ್ಚಿಕೊಂಡಂತಹ ಸಂವಿಧಾನ ವನ್ನು ನೀಡಿದ ಅಂಬೇಡ್ಕರ್ ರವರ ನಿವಾಸದ ಮೇಲೆ ನಡೆದಿರುವ ಇಂತಹ ಕೃತ್ಯಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವಂತದ್ದು. ಇಂತಹ ಕೃತ್ಯ ಗಳಿಗೆ ಕುಮ್ಮಕ್ಕು ನೀಡುವವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುನೀಲ್ ತಿಳಿಸಿದರು.

No comments

Post a Comment