ಬಿಜೆಪಿ ಸರ್ಕಾರ ಗೊಂದಲದ ವರ್ಷ, ಹಗರಣಗಳ ಸ್ಪರ್ಶ : ತೆನ್ನೀರಾ ಮೈನಾ

No comments

ಮಡಿಕೇರಿ (Times Of Coorg) : ರಾಜ್ಯದ ಬಿಜೆಪಿ ಸರ್ಕಾರ "ಸವಾಲುಗಳ 1 ವರ್ಷ, ಪರಿಹಾರಗಳ ಸ್ಪರ್ಶ " ಎಂಬ ಕಾರ್ಯನಿರ್ವಹಣೆ ವರದಿ ಬಿಡುಗಡೆ ಮಾಡಿದ್ದು ಇದು ಕರ್ನಾಟಕ ರಾಜ್ಯದ ಜನತೆಯ ಪಾಲಿಗೆ "ಗೊಂದಲದ 1 ವರ್ಷ,ಹಗರಣಗಳ ಸ್ಪರ್ಶವಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮೈನಾ ಅವರು
ಅನೈತಿಕವಾಗಿ ಸಂವಿಧಾನ ವಿರೋಧಿ ಯಾಗಿ  ಕುದುರೆ ವ್ಯಾಪಾರದ ಮೂಲಕ ಕಾಂಗ್ರೆಸ್, ಜೆಡಿಎಸ್ ಸ್ವಾರ್ಥಿ ಶಾಸಕರನ್ನು ಖರೀದಿಸಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ವಾಮಮಾರ್ಗದಲ್ಲಿ ಅಧಿಕಾರದ ಗದ್ದುಗೆ ಏರಿದ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದ ಜನತೆಯ ನೆಮ್ಮದಿಯನ್ನೇ ಭಂಗಗೊಳಿಸಿದೆ.

ಆರಂಭದಲ್ಲಿ ಮಂತ್ರಿಮಂಡಲದ ರಚನೆಗೆ ಸುಧೀರ್ಘ ಸಮಯ ತೆಗೆದುಕೊಂಡು ಆಡಳಿತದ ಯಂತ್ರವನ್ನು ನಿಷ್ಕ್ರಿಯಗೊಳಿಸಿ ನಂತರದಲ್ಲಿ ಅನಾವಶ್ಯಕ ಉಪಚುಣಾವಣೆಗೆ ಕಾರಣಕರ್ತರಾಗಿಖಾಲಿ ಮಾಡಿದ ಯ.ಬನ ಜನರ ತೆರಿಗೆ ಹಣವನ್ನು ಪೋಲುಗೊಳಿಸಿ ಸರ್ಕಾರದ  ಖಜಾನೆ ಖಾಲಿಮಾಡಿದರು.
ರಾಜ್ಯಾದ್ಯಂತ ಪ್ರಕೃತಿ ವಿಕೋಪದಿಂದ ಜನತೆ ತತ್ತರಿಸಿದಾಗ ಕೇಂದ್ರವನ್ನು ಹಾಡಿ ಹೊಗಳಿ ನೆರವು ಪಡೆಯುವುದನ್ನೇ ಮರೆತರು.
 ,ವರ್ಗಾವಣೆ ಧಂಧೆ ನಡೆಸುವ ಮೂಲಕ ಕುದುರೆ ವ್ಯಾಪಾರದ ನಷ್ಟ ಸರಿದೂಗಿಸಿದರು.
,ಕೊರೊನಾ ಮಾರಿ ರಾಜ್ಯದಲ್ಲಿ ಪ್ರವೇಶಿಸಿದಾಗ ತಡೆಗಟ್ಟಲು ನಿರ್ಲಕ್ಷ್ಯ ತೋರಿ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಗೊಳ್ಳುವಂತೆ ಮಾಡಿದ್ದೇ ಇವರ ಮಹಾನ್ ಸಾಧನೆಯಾಗಿದೆ.
ಹೆಣದ ಬೆಂಕಿಯ ಮುಂದೆ ಚಳಿ ಕಾಯಿಸಿಕೊಂಡರು ಎಂಬ ನಾಣ್ಣುಡಿಯಂತೆ ಕೊರೊನಾ ತಡೆ ಮುಂಜಾಗ್ರತೆ ಸಲಕರಣೆ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ ಎಂದು ತೆನ್ನೀರಾ ಮೈನಾ ಆರೋಪಿಸಿದ್ದಾರೆ.

ಕೊಡಗು ಜಿಲ್ಲೆಯ ಮಟ್ಟಿಗೆ ಈ ವರ್ಷ ಶೂನ್ಯ ಮತ್ತು ದುರಂತದ ವರ್ಷ .ಸಮ್ಮಿಶ್ರ ಸರ್ಕಾರ ನಿರ್ಮಿಸಿದ ಮನೆಗಳ ಕೀಲಿ ಕೈ ಹಸ್ತಾಂತರ ಮಾಡಿದ್ದು ಬಿಟ್ಟರೆ ಬೇರೆ ಯಾವ ಕೆಲಸ ಕೂಡ ಒಂದು ವರ್ಷದಲ್ಲಿ ಮಾಡಲಿಲ್ಲ.ಮಂಜಿನ ನಗರಿ  ಎಂದು ಪ್ರಸಿದ್ದ ಪಡೆದ ಮಡಿಕೇರಿಯ ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಈಗ ಹೊಂಡ ನಗರಿಯಾಗಿದೆ. ,ಜಿಲ್ಲೆಯಲ್ಲಿ ಮೂಲಭೂತ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದ್ದು ಜಿಲ್ಲೆಯ ಜನತೆ ಹಿಡಿಶಾಪ ಹಾಕುತ್ತಿದ್ದಾರೆ .,ಜನರ ಸಂಕಟದಲ್ಲಿ ಸದಾ ಇರುತ್ತೇನೆಂದು ವಾಗ್ದಾನ ನೀಡಿ ಎರಡು ಬಾರಿ ಸಂಸದರಾದ ಪ್ರತಾಪ ಸಿಂಹ ರವರು ಕೇವಲ ಕೆಡಿಪಿ ಸಭಗಳಿಗೆ ಮಾತ್ರ ಸೀಮಿತವಾಗಿದ್ದು  ಕೊಡಗಿಗೆ ಸಂಸದರೇ ಇಲ್ಲದಂತಾಗಿದೆ .
ಜಿಲ್ಲೆಯ ಇಬ್ಬರು ಶಾಸಕರು ,ಹಿರಿತನ,ಅನುಭವ,ಸಾಮರ್ಥ್ಯದಲ್ಲಿ ಮುಖ್ಯಮಂತ್ರಿ ಯಾಗುವ ಅರ್ಹತೆಯಿದ್ದರೂ ಸಚಿವರನ್ನಾಗಿ ಮಾಡಲಿಲ್ಲ.ನಿಗಮ ಮಂಡಳಿ ನೇಮಕದಲ್ಲೂ ಕೊಡಗು ಜಿಲ್ಲೆಯನ್ನು ಕಡೆಗಣಿಸಿ ಅಪಮಾನವೆಸಗಿದ್ದಾರೆ .
ಪ್ರಶ್ನೆ ಮಾಡಬೇಕಾದ ಜಿಲ್ಲೆಯ ಬಿಜೆಪಿ ನಾಯಕರು ಕಾರ್ಯಕರ್ತರು ಎಲ್ಲೋ ಒಬ್ಬರು ಸಾಮಾನ್ಯ ಕಾರ್ಯಕರ್ತನಿಗೆ ರಾಜ್ಯಸಭಾ ಸದಸ್ಯತ್ವ ,ವಿಧಾನ ಪರಿಷತ್ ಸದಸ್ಯತ್ವ ನೀಡಿದ್ದನ್ನು ಸಮರ್ಥಿಸಿ ಸಂಭ್ರಮಿಸುವುದರಲ್ಲಿ ತೃಪ್ತಿ ಕಾಣುತ್ತಿರುವುದು ಸೋಜಿಗವೆನಿಸುತ್ತಿದೆ .
ಜಿಲ್ಲೆಯ ಉಸ್ತುವಾರಿ ಸಚಿವರಂತೂ ಕುಶಾಲನಗರ  ಗೇಟಿನ ಬಳಿ ಜಿಲ್ಲೆ ಪ್ರವೇಶಿಸುತ್ತಿದ್ದಂತೆ ಇಬ್ಬರು ಶಾಸಕರನ್ನು ಇಂದ್ರ ,ಚಂದ್ರ ಅಂತ ಹೊಗಳಿ ತಮ್ಮ ಕರ್ತವ್ಯ ಇಷ್ಟೇ ಎಂದು ಭಾವಿಸಿದ್ದಾರೆ.ಈ ಸರ್ಕಾರದಿಂದ ಜಿಲ್ಲೆಯ ಅಭಿವೃದ್ಧಿ ಮರೀಚಿಕೆಯಾಗಿದೆ.

ಆದರೂ ಕೂಡ ಕೊಡಗು ಜಿಲ್ಲೆ ಬಿಜೆಪಿಯ ಭಧ್ರಕೋಟೆ ಎಂಬುದು ವಿಪರ್ಯಾಸವಾಗಿದೆ .ಜಾತ್ರೆ ಅದರ ಪಾಡಿಗೆ ನಡೆಯುತ್ತದೆ ,ಆದರೆ ಮರುಳಾಗುವುದು ಮಾತ್ರ ಜನರು ಎಂದು ತೆನ್ನೀರಾ ಮೈನಾ ಪತ್ರಿಕಾ ಪ್ರಕಟಣೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

No comments

Post a Comment