7ನೇ ತರಗತಿ ಪಠ್ಯದಿಂದ ಟಿಪ್ಪು ಸುಲ್ತಾನ್ ಅಧ್ಯಾಯ ಕೈಬಿಟ್ಟ ರಾಜ್ಯ ಸರ್ಕಾರದ ಕ್ರಮ ಖಂಡನೀಯ : ಎಸ್.ಕೆ.ಎಸ್.ಎಸ್.ಎಫ್‌ ,ಜಿಸಿಸಿ ಕೊಡಗು

No comments

ಮಡಿಕೇರಿ (Times Of Coorg) :ಕೋವಿಡ್ 19 ನೆಪದಲ್ಲಿ, ವಿದ್ಯಾರ್ಥಿ ಗಳಿಗೆ ಶಿಕ್ಷಣ ನಡೆಸಲು ಸಮಯದ ಅಭಾವಿರುವ  ಹಿನ್ನೆಲೆಯಲ್ಲಿ, ಸಮಯದ ದುರ್ಬಳಕೆ ಮಾಡಿಕೊಂಡು, ಪ್ರಸ್ತತ ಶೈಕ್ಷಣಿಕ ಸಾಲಿನ ಏಳನೇ ತರಗತಿಯ  ಪಠ್ಯ ಕ್ರಮದಲ್ಲಿ, ದೇಶ ಕಂಡ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಹಾಗೂ ರಾಕೆಟ್ ತಂತ್ರಜ್ಞಾನದ  ಹರಿಕಾರ, ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ವೀರ, ಟಿಪ್ಪು ಸುಲ್ತಾನ್  ಅವರ ಚರಿತ್ರೆಯನ್ನು  ತೆಗೆದು ಹಾಕಿರುವ ಕ್ರಮವನ್ನು ಎಸ್.ಕೆ.ಎಸ್.ಎಸ್.ಎಫ್ ,ಜಿಸಿಸಿ‌ ಕೊಡಗು  ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಸುಲ್ತಾನ್ ದೇಶಕಂಡ  ಅಪ್ರತಿಮ ದೇಶಪ್ರೇಮಿ. ಭಾರತ ದೇಶಕ್ಕಾಗಿ  ತನ್ನ ಮಕ್ಕಳನ್ನೇ ಬ್ರಿಟಿಷರಿಗೆ  ಒತ್ತೆ ಇಟ್ಟು ಹೋರಾಡಿದ ದೇಶ ಭಕ್ತ. ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗದ  ಇವರ ಕೊಡುಗೆಗಳು  ಇಂದಿಗೂ ಇತಿಹಾಸ ಪುಟಗಳಲ್ಲಿ ಇದೆ. ಶತ್ರುಗಳಿಂದ ಶೃಂಗೇರಿ ಮಠದ  ರಕ್ಷಣೆ  ಮಾಡಿದ್ದು ಇತಿಹಾಸಗಳಲ್ಲಿ‌ ಇಂದಿಗೂ ನಮಗೆ ಕಾಣಬಹುದಾಗಿದೆ.

 ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಈ ವಿವಾದಿತ ಆದೇಶ ಹಿಂಪಡೆದು, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಿ, ಇತಿಹಾಸ ಉಳಿಸುವ ಕಾರ್ಯದಲ್ಲಿ  ತೊಡಗಬೇಕೆಂದು SKSSF ಮುಖ್ಯಸ್ಥರಾದ  ತಮ್ಲೀಖ್ ದಾರಿಮಿ‌ ಹಾಗೂ ಹುಸೇನ್ ಫೈಜಿ  ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

No comments

Post a Comment