ಸೀಲ್ ಡೌನ್ ಪ್ರದೇಶದ ಕುಟುಂಬಗಳಿಗೆ ಜಿಲ್ಲಾ ಕಾಂಗ್ರೆಸ್ ನೆರವು

No comments

ಮಡಿಕೇರಿ (Times Of Coorg): ಮಡಿಕೇರಿಯಲ್ಲಿ ಸೀಲ್ ಡೌನ್ ಆದ ಮಹದೇವಪೇಟೆ ಮತ್ತು  ಭಗವತಿನಗರದ ಕುಟುಂಬಗಳಿಗೆ ನೆರವು ನೀಡುವ ಮೂಲಕ ಕೊಡಗು ಜಿಲ್ಲಾ ಕಾಂಗ್ರೆಸ್ ಮಾನವೀಯತೆ ಮೆರೆದಿದೆ.
ಭಗವತಿನಗರದ ಸ್ಥಳೀಯರಾದ ಸುಂದರ್ ಮತ್ತು ಶ್ರೀಧರ್ ರವರು ಅಲ್ಲಿಯ ಜನರ ಸಂಕಷ್ಟವನ್ನು ಕೊಡಗು ಜಿಲ್ಲಾ ಕಾಂಗ್ರೆಸ್  ಖಜಾಂಚಿ ಹೆಚ್.ಎಂ ನಂದಕುಮಾರ್ ರವರಿಗೆ ವಿನಂತಿಸಿದ ಮೇರೆಗೆ ನಂದಕುಮಾರ್ ಪ್ರಾಯೋಜಕತ್ವ ದಲ್ಲಿ ದಿನಸಿ ಕಿಟ್ ಅನ್ನು  ಕಾಂಗ್ರೆಸ್ ಮುಖಂಡರು ವಿತರಿಸಿದರು .

ಕಿಟ್ ವಿತರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನೀರಾ ಮೈನಾ, ಸರ್ಕಾರ ಸೀಲ್ ಡೌನ್ ಮಾಡಿ ನಿರ್ಬಂಧ  ಪಟ್ಟಿ ಕಟ್ಟಿದರೆ ಸಾಲದು, ಅಲ್ಲಿನ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸ ಮಾಡಬೇಕು. ಜನಪ್ರತಿನಿಧಿಗಳು ಇವರ ಸಮಸ್ಯೆ ಆಲಿಸದಿರುವುದು ದುರಂತ ಎಂದು ಮೈನಾ  ಅಭಿಪ್ರಾಯಪಟ್ಟರು. ಭಗವತಿ ನಗರದ ಆಟೋ ಸುಂದರ್ ರವರ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯ  ಚಾನೆಲ್ ಒಂದರ  ವರದಿಗಾರರು ನೀರು ಕೊಲ್ಲಿಯ ಕೆಲವು ಸಂಕಷ್ಟಕ್ಕೆ ಒಳಗಾದ ಕುಟುಂಬಗಳಿಗೆ  ನೆರವು ನೀಡಲು ವಿನಂತಿಸಿದ ಮೇರೆಗೆ ಅಲ್ಲಿಗೂ ಕೂಡ ನಂದಕುಮಾರ್ ಆಹಾರದ ಕಿಟ್ ವಿತರಿಸಿದ್ದಾರೆ. ಜನರ ಸಮಸ್ಯೆ ಆಲಿಸಿ ಬಗೆಹರಿಸುವುದೇ  ಈ ಸಮಯದಲ್ಲಿ  ಕಾಂಗ್ರೆಸ್ ಅಜೆಂಡಾ ಎಂದು ಎಂದು ತೆನ್ನೀರಾ ಮೈನಾ ಹೇಳಿದರು.

ಈ ಸಂಧರ್ಭದಲ್ಲಿ ನಗರ ಸಭಾ ಮಾಜಿ ಸದಸ್ಯರಾದ ಪ್ರಕಾಶ್ ಆಚಾರ್ಯ ,ಸೇವಾದಳದ ಅಧ್ಯಕ್ಷರಾದ ಕಾನೆಹಿತ್ಲು ಮೊಣ್ಣಪ್ಪ ,ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಭುರೈ ಇದ್ದರು.

No comments

Post a Comment