ಕೊಡವ ಜನಾಂಗದ ಬುಡಕಟ್ಟು ಸ್ಥಾನಮಾನಕ್ಕೆ ಅಪಸ್ವರ, ಖಂಡನೀಯ : ತೆನ್ನೀರಾ ಮೈನಾ

No comments

ಮಡಿಕೇರಿ (Times Of Coorg) :ವಿಶ್ವದಲ್ಲಿಯೇ ಅಪರೂಪದ ,ವಿಶಿಷ್ಟ ಸಂಪ್ರದಾಯ ,ಜೀವನ ಕ್ರಮ ಅಳವಡಿಸಿಕೊಂಡು ಬಂದಿರುವ ಕೊಡವ ಜನಾಂಗದ ಸಂವಿಧಾನ ಬದ್ದ ಬುಡಕಟ್ಟು ಸ್ಥಾನಮಾನದ ಬೇಡಿಕೆಗೆ ಕೊಡವ ವಿರೋಧಿಗಳ ಕಮಿಷನ್ ಏಜೆಂಟರ ಅಪಸ್ವರ ಖಂಡನೀಯವೆಂದು ಜಿಲ್ಲಾ ಕಾಂಗ್ರೆಸ್  ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ‌ಮೈನಾ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಮೈನಾ ಅವರು, ಬುಡಕಟ್ಟು ಎಂದರೆ ನಿರ್ದಿಷ್ಟ ಪ್ರದೇಶದಲ್ಲಿ ನೆಲೆಸಿರುವ ,ನಿರ್ದಿಷ್ಟ ಭಾಷೆ ಮಾತನಾಡುವ ಒಬ್ಬ ಮೂಲಪುರುಷ ನನ್ನು ಆರಾಧಿಸುವ ಸರ್ವಾನುಮತದ ಮುಖ್ಯಸ್ಥನನ್ನು ಹೊಂದಿರುವ ,ಏಕ ಪ್ರಕಾರದ ನೈಸರ್ಗಿಕ ಕಾಯ್ದೆ .ಕಟ್ಟಳೆ ಅನುಸರಿಸುವ ಮತ್ತು ಸಮಾನ ಸಂಸ್ಕೃತಿ ಸುಸಂಘಟಿತ ಸಮಾಜ ವ್ಯವಸ್ಥೆ ಹೊಂದಿರುವ ಸಾಮಾಜಿಕ ಗುಂಪು.ಅಂದರೆ ಒಂದು ಸಣ್ಣ ಸ್ವತಂತ್ರ ಮತ್ತು ಅನೋನ್ಯವಾಗಿ ಒಂದುಗೂಡುವ ಸಮೂಹವಾಗಿದೆ.
ರಕ್ತ ಸಂಭಂದ ಎಳೆಯ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಂಶಗಳಿಂದ ಬಂಧಿತವಾಗಿರುವ ಜನಾಂಗವಾಗಿದೆ.

ಕೊಡಗು ಗುಡ್ಡಗಾಡಿನ ಪ್ರದೇಶವಾಗಿದ್ದು ಕೊಡವರ ಮೂಲ ಪ್ರದೇಶ.ಗುರುಕಾರೋಣ ಎಂಬ ಮೂಲ ಪುರುಷನನ್ನು ಆರಾಧಿಸುವ ಪಟ್ಟೆದಾರ ಎಂಬ ಸರ್ವಾನುಮತದ ಹಿರಿಯ ನಾಯಕನ ಮಾರ್ಗದರ್ಶನದಲ್ಲಿ ನಡೆಯುವ ಜನಾಂಗ ,ತಮ್ಮದೇ ಆದ ಆಚಾರ ವಿಚಾರ ಸಂಸ್ಕೃತಿ ,ಪರಂಪರೆ ,ಭಾಷೆಯನ್ನು ಹೊಂದಿರುವ ಚಿಕ್ಕ ಸಮೂಹ ಗುಂಪು,ಮಂದ್ ಮಾನಿ ,ಗುರುಮನೆ ,ಕೈಮಡ ,
ಕ್ಯಾಕೊಳ ಅಂತ ವಿಶಿಷ್ಟ ಧಾರ್ಮಿಕ ಸಂಕೇತಗಳನ್ನು ಆರಾಧಿಸಿ ಗೌರವಿಸುವ ಪಂಗಡ.
ಇವುಗಳೆಲ್ಲವೂ ಬಾಬಾ ಸಾಹೇಬರು ರಚಿಸಿದ  ಭಾರತದ ಸಂವಿಧಾನದ 342 ನೇ ವಿಧಿಯಲ್ಲಿ ಬುಡಕಟ್ಟು ಜನಾಂಗದ ಪರಿಗಣನೆಗೆ ಪೂರಕವಾಗಿರುವ ಅಂಶಗಳು
ಇವುಗಳನ್ನು ಪೂರ್ಣ ಪ್ರಮಾಣದಲ್ಲಿ ಅಧ್ಯಯನ ನಡೆಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ನ ಅಧ್ಯಕ್ಷರಾದ ನಂದಿನೆರವಂಡ ನಾಚಪ್ಪನವರು ಅನೇಕ ವರ್ಷಗಳ ಹೋರಾಟ ನಡೆಸಿ ಈಗ ಫಲಪ್ರದ ಕಾಣುತ್ತಿದೆ.ಇದನ್ನು ಸಹಿಸದ ಕೆಲವು ಪಟ್ಟ ಭದ್ರ ಹಿತಾಶಕ್ತಿಗಳು ಕಮಿಷನ್ ಏಜಂಟರ ಮೂಲಕ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ತೆನ್ನೀರಾ ಮೈನಾ ಆರೋಪಿಸಿದ್ದಾರೆ.

ಕೊಡವರು ಸಂವಿಧಾನ ಬದ್ಧವಾಗಿ ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ, ಹೊರತು ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲ .ಕೊಡವರು ಭಾರತೀಯರಲ್ಲವೇ ? ಕೊಡವರ ನ್ಯಾಯಯುತ ಹೋರಾಟಕ್ಕೆ ವಿರೋಧ ಯಾಕೆ ?  ಕೊಡವ ಜನಾಂಗದ ಜನಸಂಖ್ಯೆ ಅತೀ ಕಡಿಮೆ ಇದ್ದು ಅದರಲ್ಲಿ ಶೇ 95 ರಷ್ಟು ಜನ ಬಡತನದಲ್ಲಿರುವವರು .ಅವರ ಆರ್ಥಿಕ ,ಶೈಕ್ಷಣಿಕ ಪರಿ ಸ್ಥಿತಿ ಸುಧಾರಿಸಲು ಕೊಡವರ  ಧಾರ್ಮಿಕ ,ಮತ್ತು ಸಾಮಾಜಿಕ ಪರಂಪರೆಯ ಉಳಿವಿನ ದೃಷ್ಟಿಯಿಂದ ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನ ಮಾನ ಸಿಗಲೇ ಬೇಕು ಎಂದು ಮೈನಾ ಒತ್ತಾಯಿಸಿದ್ದಾರೆ.
ಕೊಡವರಿಗೆ  ಸ್ಥಾನ ಮಾನ ದೊರೆಯುವುದು ಕುಲ ಶಾಸ್ತ್ರ ಅಧ್ಯಯನದ ಮಾನದಂಡದಿಂದಲೇ ಹೊರತು  ಯಾರೋ ಒಬ್ಬರ ಕೃಪಾಕಟಾಕ್ಷದಿಂದಿಲ್ಲ.
,ಈ ನಿಟ್ಟಿನಲ್ಲಿ ನಾಚಪ್ಪನವರ ಸುಧೀರ್ಘ ಅವಧಿಯ ಪ್ರಯತ್ನದಿಂದ ಪಾರದರ್ಶಕ ಅಧ್ಯಯನ ನಡೆದಿದ್ದು ಪ್ರಾಮಾಣಿಕ ಗೆಲುವು ಸಧ್ಯದಲ್ಲೇ ದೊರೆಯಲಿದೆ ಈ ಪ್ರಯತ್ನಕ್ಕೆ ಕೊಡಗಿನ ಇತರ ಜನಾಂಗದ ಬಂಧುಗಳು ಪ್ರೋತ್ಸಾಹ ನೀಡಿ ಸಾಮರಸ್ಯವನ್ನು ಕಾಪಾಡಬೇಕೆಂದು‌ ಕೊಡಗು ಜಿಲ್ಲಾ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ಮನವಿ ಮಾಡಿದ್ದಾರೆ.

No comments

Post a Comment