ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ನಿವಾಸ ವನ್ನು ಧ್ವಂಸ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ

No comments

ದಲಿತ ಸಂಘಟನೆಗಳ ಒಕ್ಕೂಟದಿಂದ ಕೊಡ್ಲಿಪೇಟೆಯಲ್ಲಿ ಪ್ರತಿಭಟನೆ

ವರದಿ : ಹನೀಫ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg) : ಡಾ‌.| ಬಾಬಾ ಸಾಹೇಬ್ ಬಿ.ಆರ್.ಅಂಬೇಡ್ಕರ್ ರವರ ರಾಜಗ್ರಹವನ್ನು ಧ್ವಂಸ ಮಾಡಿರುವುದನ್ನು ಖಂಡಿಸಿ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಕೊಡ್ಲಿಪೇಟೆ ಯಲ್ಲಿ  ಪ್ರತಿಭಟನೆ ನಡೆಸಿದರು. ಕೊಡ್ಲಿಪೇಟೆಯ ಅಂಬೇಡ್ಕರ್ ಭವನದ ಮುಂಭಾಗ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರ ಪೋಟೋವನ್ನು ಇಟ್ಟು ಪ್ರತಿಭಟನೆ ಸಭೆ ನಡೆಸಿದರು.

ಬಿ.ವಿ.ಎಸ್ .ಜಿಲ್ಲಾ ಮುಖಂಡರಾದ ಮೋಹನ್ ಮೌರ್ಯ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ನಿರ್ವಾಣಪ್ಪ , ಮುಖಂಡರಾದ ಕೆಂಚೆಶ್ವರ್, ದಲಿತ ಯುವ ಮುಖಂಡರಾದ ವಸಂತ್ .ಡಿ.ಎನ್ , ರವರು ಮಾತಾನಾಡಿ ಮಾಹರಾಷ್ಟ್ರದ ಮುಂಬೈನ ದಾದರ್ ನಲ್ಲಿರುವ ಅಂಬೇಡ್ಕರ್ ರವರು ವಾಸ ಮಾಡಿರುವ ಮನೆಗೆ ಮಂಗಳವಾರದಂದು ಕಿಡಿಗೇಡಿಗಳು ನುಗ್ಗಿ ಮನೆಯ ವಸ್ತುಗಳನ್ನು ಧ್ವಂಸ ಮಾಡಿ ಹಾನಿಗೊಳಿಸಿರುವುದನ್ನು ಖಂಡಿಸಿದರು.

ಈ ಘಟನೆಯಿಂದ ಇವತ್ತು ದೇಶಾದ್ಯಂತ ದಲಿತರಿಗೆ ಹಾಗೂ ಅಂಬೇಡ್ಕರ್ ಆಭಿಮಾನಿಗಳಿಗೆ  ಅತೀವ ನೋವು ಉಂಟುಮಾಡಿದೆ. ಪ್ರಪಂಚದಲ್ಲೆ ಶ್ರೇಷ್ಠ ಸಂವಿಧಾನ ವನ್ನು ಬರೆದಂಣಹ ಸಂವಿಧಾನ ಶಿಲ್ಪಿಯ ಮನೆಗೆ ರಕ್ಷಣೆ ಇಲ್ಲಂದಂತಾಗಿರುವುದು ವಿಷಾದನೀಯ ವೆಂದರು.
ಬಾಬಾ ಸಾಹೇಬರು ರಚಿಸಿದ ಸಂವಿಧಾನದ ಕಾನೂನಿನಲ್ಲಿ ಅವರ ಕುಟುಂಬದವರಿಗೆ ಅವರ ಮನೆಗಳಿಗೆ ಭದ್ರತೆ ಇಲ್ಲ ದಿರುವುದು ದುರಂತ .

ಸಂವಿಧಾನ ವನ್ನು ಅವಹೇಳನ ಮಾಡುವುದು ಸಂವಿಧಾನದ ಪ್ರತಿಗಳನ್ನು ಸುಡುವುದು, ನಿಂದನೆ, ಅವಮಾನಗಳು,
ವಿಕೃತ ಮನಸ್ಥಿತಿಯ ವ್ಯಕ್ತಿಗಳಿಂದ ನಿರಂತರವಾಗಿ ಯಾಗುತ್ತಿರುವುದನ್ನು ದಲಿತ ಸಂಘಟನೆ ಗಳ ಓಕ್ಕೂಟ ಸಹಿಸುವುದಿಲ್ಲವೆಂದರು.

ನಂತರ ಮೆರವಣಿಗೆಯಲ್ಲಿ ತೆರಳಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ ಕಿಡಿಗೇಡಿಗಳ ವಿರುದ್ದ ದಿಕ್ಕಾರ ಕೂಗಿ ಬಂಧಿಸುವಂತೆ ಆಗ್ರಹಿಸಿದರು.

ಅಂಬೇಡ್ಕರ್ ರವರ ಮನೆ ಇನ್ನಿತರ ಆಸ್ತಿಗಳನ್ನು ಸಂರಕ್ಷಿಸಬೇಕು. ಮನೆ ದ್ವಂಸ ಮಾಡಿದ ವಿಕೃತ ಮನಸ್ಸಿನ ಕಿಡಿಗಳನ್ನು ಬಂಧಿಸಿ, ದೇಶದಿಂದಲೇ ಆಮಾನತ್ತು ಮಾಡಬೇಕೆಂದು ರಾಜ್ಯಪಾಲರ ಮೂಲಕ ಕೆಂದ್ರ ಸರ್ಕಾರಕ್ಕೆ ಒತ್ತಾಯಿಸುವ ಮನವಿ ಪತ್ರವನ್ನು ನಾಡ ಕಚೇರಿಗೆ ತೆರಳಿ ಕೊಡ್ಲಿಪೇಟೆ ಉಪ ತಹಶಿಲ್ದಾರ್  ಪುರುಷೊತ್ತಮ ರವರಿಗೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರುಗಳಾದ
ಜೆ.ಎಲ್‌.ಜನಾರ್ಧನ್ , ಸೋಮಣ್ಣ, ಜಗದೀಶ್,
ವೀರಭದ್ರ‌, ವಸಂತ್ , ಜೈರಾಜ್, ವೇದ್ ಕುಮಾರ್ ,
ಪ್ರಸನ್ನ ,ಸತ್ಯಪ್ರಕಾಶ್ , ಸರ್ರು , ದೇವರಾಜ್ ,ಪುನಿತ್ ,ನಿಖಿಲ್ ,ಕಾರ್ತಿಕ್ ಸೇರಿದಂತೆ ಕಾರ್ಯಕರ್ತರುಗಳು ಭಾಗವಹಿಸಿದರು‌.




No comments

Post a Comment