ಕೊಡ್ಲಿಪೇಟೆ ಹೋಬಳಿ ಕಾಂಗ್ರೆಸ್ ಮುಖಂಡರುಗಳಿಂದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನಡೆಯ ಬಗ್ಗೆ ಅಸಮಧಾನ

No comments

ವರದಿ : ಹನೀಫ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg) : ಕೊಡಗು ಜಿಲ್ಲಾ ಕಾಂಗ್ರೆಸ್ ನಲ್ಲಿ ಉದ್ಬವಿಸಿರುವ ಭಿನ್ನಮತಕ್ಕೆ ಸಂಬಂಧಪಟ್ಟಂತೆ ಕೊಡ್ಲಿಪೇಟೆ ಯ ಪಕ್ಷದ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಟಿಯಲ್ಲಿ ಹೋಬಳಿ ಕಾಂಗ್ರೆಸ್ ಅದ್ಯಕ್ಷರಾದ ಔರಂಗಜೇಬ್ ರವರು ಮಾತನಾಡಿ
ಪಕ್ಷದ ಇತ್ತಿಚಿನ ಗೊಂದಲಮಯ ಬೆಳವಣಿಗೆಗೆ ಮೂಲ ಕಾರಣ ಕರ್ತರಾದದವರು ಜಿಲ್ಲಾದ್ಯಕ್ಷರಾದ ಮಂಜುನಾಥ್ ಕುಮಾರ್ ರವರು, ಜಿಲ್ಲಾ ನಾಯಕರಲ್ಲಿ ಮೂಡಿರುವ ಭಿನ್ನಮತವು ಪಕ್ಷದ ಅಂತರಿಕ ವಿಷಯವಾಗರುವುದರಿಂದ
ಜಿಲ್ಲಾ ಕಚೇರಿಯಲ್ಲಿ ಕುಳಿತು ಹಿರಿಯ ನಾಯಕರುಗಳ ಸಮ್ಮುಖದಲ್ಲಿ  ಶಮನಗೊಳಿಸಬೇಕಿತ್ತು .
ಇದನ್ನು ಬಿಟ್ಟು ಪತ್ರಿಕಾ ಹೇಳಿಕೆಯ ಮೂಲಕ ಬಹಿರಂಗಪಡಿಸಿ ಇದರ ವಿರುದ್ದ ಮಾತನಾಡಿದವರ ಮೇಲೆ ಶಿಸ್ತು ಕ್ರಮ ಕ್ಯೆಗೊಳ್ಳುತ್ತೆನೆಂದು ಹೇಳಿಕೆ ನೀಡಿ ಊರಿಯುವ ಬೆಂಕಿಗೆ ತುಪ್ಪ ಸುರಿಯುವ ಪ್ರಯತ್ನದ ಬಗ್ಗೆ ಆಸಮಾಧನ ವ್ಯಕ್ತಪಡಿಸಿದರು.

ಡಿ.ಕೆ.ಶಿವಕುಮಾರ್ ರವರು ಪಕ್ಷದ ಸಾರಥ್ಯವನ್ನು ವಹಿಸಿಕೊಂಡಿರುವುದು ಎಲ್ಲಾ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ ಮುಂದಿನ ದಿನಗಳಲ್ಲಿ  ಕೊಡಗಿನಲ್ಲೂ ಸಹ ಪಕ್ಷ ಆದಿಕಾರಕ್ಕೆ ತರುವುದರಲ್ಲಿ ಸಂಶಯವಿಲ್ಲ
ಆದರೆ ಈ ಗೊಂದಲಗಳು ಕಾರ್ಯಕರ್ತರಲ್ಲಿ ನಿರುತ್ಸಾಹ ಮೂಡಿಸಿದೆ.

ಪಕ್ಷದ ಹಿತದೃಷ್ಟಿಯಿಂದ ಪಕ್ಷದ ವರಿಷ್ಠರು ವಿ.ಪಿ.ಶಶಿಧರ್ ರವರ ವಿಚಾರ ವಿರಬಹುದು .ಕೆ.ಪಿ.ಚಂದ್ರಕಲಾ ರವರ ಹೇಳಿಕೆಯ ಬಗ್ಗೆ ಯಿರುವ ಗೊಂದಲವಿರಬಹುದು. ಅಸಮದಾನಗೊಂಡಿರುವ ಎಲ್ಲಾ ಮುಖಂಡರುಗಳನ್ನು
ಪಕ್ಷವನ್ನು ಉತ್ತಮವಾಗಿ ಮುನ್ನಡುಸುತ್ತಿದ್ದಂತಹ ಶಿವು ಮಾದಪ್ಪ  ಹಾಗೂ ಸೋಮವಾರಪೇಟೆ ಭಾಗದಲ್ಲಿ  ಮಾಜಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಕೆ.ಎಂ.ಲೋಕೇಶ್ ರವರನ್ನೆಲ್ಲ ಕರೆದು ಒಂದು ಕಡೆ ಕುಳಿತುಕೊಂಡು ಏನು ಅಸಮಾಧನವಿದೆ ಅದನ್ನು ಶಮನಗೊಳಿಸಿ ಪಕ್ಷವನ್ನು ಜಿಲ್ಲೆಯಲ್ಲಿ ಅದಧಿಕಾರಕ್ಕೆ ತರಬೇಕಾಗಿ ಕೇಳಿಕೊಂಡರು.

ವಿ.ಪಿ.ಶಶಿಧರ್ ರವರು ಕುಶಾಲನಗರದ ಪ್ರತಿಭಟನೆಯಲ್ಲಿ ಮಾತನಾಡಿದ ವಿಡೊಯೋ ವನ್ನು ಎಡಿಟ್ ಮಾಡಿ ವಿವಾದ ಸ್ರಷ್ಟಿಸಿ ಕ್ಷುಲ್ಲಕ ವಿಚಾರವನ್ನು ಮುಂದಿಟ್ಟುಕೊಂಡುಇಂ ಇಂಥಹ ಸಂದ್ವಿಗ್ನ ಪರಿಸ್ಥಿತಿಯಲ್ಲೂ ಬಿಜೆಪಿ ಯವರು ಪ್ರತಿಭಟನೆ ನಡೆಸಿದ್ದನ್ನು ಖಂಡಿಸುತ್ತೆವೆ ಎಂದರು.

ಕೊಡ್ಲಿಪೇಟೆ ಹೋಬಳಿಯ ಕೊಡ್ಲಿಪೇಟೆ,ಬ್ಯಾಡಗೊಟ್ಟ , ಬೆಸೂರು ವಲಯಗಳು ಕುಶಾಲನಗರ ಬ್ಲಾಕಿಗೆ ಸೇರ್ಪಡೆಯಾಗಿದ್ದು. ಕಾರ್ಯಕ್ರಮ ಗಳಿಗೆ ಇನ್ನಿತರ ಸಭೆಗಳಿಗೆ ಕುಶಾಲನಗರ ಕ್ಕೆ ಹೋಗಲು ಅನಾನುಕೂಲವಿರುವುದರಿಂದ ನಮ್ಮ ಎಲ್ಲಾ ಕಚೇರಿ ಕೆಲಸ ಇನ್ನಿತರ ವಿಷಯಗಳಿಗೆ ಸೋಮವಾರಪೇಟೆಯನ್ನು ಅವಲಂಬಿಸಿದ್ದು, ಕುಶಾಲನಗರಕ್ಕಿಂತ ಸೋಮವಾರಪೇಟೆ  ಹತ್ತಿರವಾಗುವುದರಿಂದ ಸೋಮವಾರಪೇಟೆ ಬ್ಲಾಕಿಗೆ ಸೇರಿಸಬೇಕಾಗಿ ಹೋಬಳಿ ಕಾಂಗ್ರೆಸ್ ಪರವಾಗಿ ರಾಜ್ಯ ನಾಯಕರುಗಳನ್ನು ವಿನಂತಿಸಿದರು.

ಡಿ.ಕೆ‌.ಶಿವಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಅದ್ಯಕ್ಷರಾದ ಜೆ‌.ಕೆ‌.ತೇಜ್ ಕುಮಾರ್ ರವರು ಮಾತನಾಡಿ ಪಕ್ಷದಲ್ಲಿ ಉದ್ಬವಿಸಿರುವ ಬಿನ್ನಮತಕ್ಕೆ ಕಾರಣ ಕರ್ತರಾದ  ಜಿಲ್ಲಾದ್ಯಕ್ಷರ ವಿರುದ್ದ ಶಿಸ್ರು ಕ್ರಮ ಕ್ಯೆಗೊಂಡು ಇವರನ್ನು ಬದಲಾಯಿಸಿ ಸಮರ್ಥ ವ್ಯಕ್ತಿಯನ್ನು ಜಿಲ್ಲಾದ್ಯಕ್ಷರಾಗಿ ನೇಮಿಸಬೇಕು. ವಿ.ಪಿ‌.ಶಶಿಧರ್ ರವರು  ಪಕ್ಷದ ನಾಯಕಿಯಾದಂತಹ ಶ್ರಿಮತಿ ಸೊನಿಯಾ ಗಾಂಧಿಯವರ ಪರವಾಗಿ ಪ್ರತಿಭಟಿಸಿದ್ದನ್ನು ಸಹಿಸಿಕೊಳ್ಳದವರು ಹಾಗೂ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿಯಾದಂಥಹ ಶ್ತಿಮತಿ ಕೆ‌.ಪಿ.ಚಂದ್ರಕಲಾ ರವರ ವಿರುದ್ದ ಬಹಿರಂಗವಾಗಿ ಹೇಳಿಕೆ ಕೊಡುವವರು ಜಿಲ್ಲಾದ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ನ್ಯೆತಿಕತೆ ಕಳೆದುಕೊಂಡಿದ್ದಾರೆ.

 ಬೆಲೆ ಎರಿಕೆ ಸೆರಿದಂತೆ ಇನ್ನಿತರ ಜನರ ಸಮಸ್ಯೆಗಳ ಬಗ್ಗೆ ದ್ವನಿ ಎತ್ತಬೇಕಾದ ಬಿಜೆಪಿ ಯವರು ವಿ.ಪಿ‌.ಶಶಿಧರ್ ರವರ ವಿರುದ್ದ ಪ್ರತಿಭಟನೆ ನಡೆಸಿದ್ದು ಸರಿಯಲ್ಲ.ಅವರ ವಿರುದ್ದ ದಾಖಲಾಗಿರುವ ಕೇಸನ್ನು ಹಿಂಪಡೆಯಬೇಕು. ವಿಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಇಷ್ಟೆಲ್ಲಾ ಗೊಂದಲಗಳಿಗೆ ಕಾರಣರಾದವರ ವಿರುದ್ದ ಸುಮೋಟೋ ಕೇಸು ದಾಖಲಿಸಬೇಕೆಂದು ಓತ್ತಾಯಿಸಿಸರು.

ಕೆ.ಪಿ.ಚಂದ್ರಕಲಾ ರವರು ಶಶಿಧರ್ ರವರಿಗೆ ಬೆಂಬಲ ವ್ಯಕ್ತಪಡಿಸುವ ಉದ್ದೇಶ ದಿಂದ ಪತ್ರಿಕೆ ಹೇಳಿಕೆ ನೀಡುವಾಗ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ
ಮೋದಿಯವರ ಶಕ್ತಿಯಿಂದ ಗೆದ್ದು ಬಂದಥಹ ಪ್ರತಾಪ್ ಸಿಂಹ ಹಾಗೂ ತೇಜಸ್ವಿ ಸೂರ್ಯ ನಂತವರು ಏನು ಕೆಲಸ ಮಾಡಿಲ್ಲವೆಂದು ಹೇಳಿದ್ದೆ ವಿನಃ ಮೋದಿ ದೊಡ್ಡ ಶಕ್ತಿ ಎಂದು ಹೇಳಿಲ್ಲ‌. ಇವರ ಹೇಳಿಕೆಯಲ್ಲಿ ಗೊಂದಲವಿದ್ದರೆ ಪಕ್ಷದ ಸಭೆಯಲ್ಲಿ ಪ್ರಶ್ನಿಸಬೇಕಿತ್ತು ಅದು ಬಿಟ್ಟು ಬಹಿರಂಗವಾಗಿ ವಿರೋಧ ಪಕ್ತಪಡಿಸಿದ್ದು ವಿಷಾದನೀಯ.
ಈ ವಿಷಯವಾಗಿ ವಕ್ತಾರರೊಬ್ಬರು ಚಂದ್ರಕಲಾ ರವರ ವಿರುದ್ದ ಕ್ರಮ ಕ್ಯೆಗೊಳ್ಳುವ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ ವಾಗಿದೆ. ಈ ವಕ್ತಾರರು ಪಕ್ಷದ ಆದಿ ನಾಯಕಿಯಾದ ಶ್ರಿಮತಿ ಸೋನಿಯಾ ಗಾಂಧಿಯರವರನ್ನು ಸಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದಾಗ ಯಾಕೆ ಖಂಡಿಸಲಿಲ್ಲ ವೆಂದರು

ಈ ವಿಷಯದಲ್ಲಿ ವಿ.ಪಿ.ಶಶಿಧರ್ ಹಾಗೂ ಕೆ.ಪಿ‌.ಚಂದ್ರಕಲಾ ರವರ ಬೆಂಬಲಕ್ಕೆ ನಾವುಗಳು ನಿಲ್ಲುವುದಾಗಿ ತಿಳಿಸಿದರು.
ಪ್ರಸನ್ನ‌. ಅದ್ಯಕ್ಷರು ಹೋಬಳಿ ಯುವ ಕಾಂಗ್ರೆಸ್ , ಸಾಬ್ ಜಾನ್. ಡಿ.ಕೆ.ಶಿ .ಆಭಿಮಾನಿಗಳ ಸಂಘದ ಜಿಲ್ಲಾ ಸದಸ್ಯರು , ಬಿ.ಪಿ.ಆಶೋಕ್. ಅದ್ಯಕ್ಷರು ಬೆಂಬಳೂರು ಭೂತ್ , ಮೋಹನ್ ದಾಸ್ . ಅದ್ಯಕ್ಷರು ದೊಡ್ಡಕೊಡ್ಲಿ ಬೂತ್, ವಹಾಬ್ .ಕೆ.ಎಂ. ಅದ್ಯಕ್ಷರು ಕೊಡ್ಲಿಪೇಟೆ 1ನೇ ಬೂತ್ .
ಉಪಸ್ಥಿತರಿದ್ದರು

No comments

Post a Comment