ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ) ಸೋಮವಾರಪೇಟೆ ತಾಲೂಕು ಕ್ರಷಿ ಯಂತ್ರಧಾರೆ ವತಿಯಿಂದ ಯಂತ್ರ ಚಾಲಕರಿಗೆ ತರಬೇತಿ ಕಾರ್ಯಗಾರ ಹಾಗೂ ಯಾಂತ್ರಿಕ್ರತ ಭತ್ತದ ನಾಟಿ ಪ್ರತ್ಯಕ್ಷಿಕೆ
ವರದಿ : ಹನೀಫ್ ಕೊಡ್ಲಿಪೇಟೆ
ಕೊಡ್ಲಿಪೇಟೆ (Times Of Coorg) : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ (ರಿ)
ಸೋಮವಾರಪೇಟೆ ತಾಲೂಕು ಕ್ರಷಿ ಯಂತ್ರಧಾರೆ ವತಿಯಿಂದ ಕ್ರಷಿಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರದ ಯಂತ್ರ ಚಾಲಕರಿಗೆ ತರಬೇತಿ ಕಾರ್ಯಗಾರ ಹಾಗೂ ಯಾಂತ್ರಿಕ್ರತ ಭತ್ತದ ನಾಟಿ ಪ್ರತ್ಯಕ್ಷಿಕೆ ಏರ್ಪಡಿಸಲಾಗಿತ್ತು.
ಕೊಡ್ಲಿಪೇಟೆ ಮಹಿಳಾ ಸಮಾಜದಲ್ಲಿ ನಡೆದಂಥಹ ತರಬೇತಿ ಕಾರ್ಯಗಾರವನ್ನು ಧ.ಗ್ರಾ.ಯೋ ಜಿಲ್ಲಾ ನಿರ್ದೆಶಕರಾದ ಡಾ.ಯೋಗೇಶ್ ರವರು ಉದ್ಬಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾದ ತಾಲೂಕು ಕ್ರಷಿ ಇಲಾಖೆಯ ಸಹಾಯಕ ನಿರ್ದೆಶಕರಾದ ರಾಜಶೇಖರ್ ರವರು
ಸಭೆಯ ಅದ್ಯಕ್ಷತೆ ವಹಿಸಿದ್ದಂತಹ ಕೊಡ್ಲಿಪೇಟೆ ಗ್ರಾ.ಪಂ.ಮಾಜಿ ಅದ್ಯಕ್ಷರಾದ ರೋಹಿಣಿ ಸುಬ್ರಮಣ್ಯ .
ಸ್ಥಳಿಯ ಕ್ತಷಿಕರಾದ ಭಗವಾನ್ ಗೌಢ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕ್ರಷಿ ಯಂತ್ರದಾರೆಯ ಪ್ರಾದೇಶಿಕ ಸಮನ್ವಯ ಅಧಿಕಾರಿಗಳಾದ ಉಮೇಶ್ ಪೂಜಾರಿ .
ಕೊಡ್ಲಿಪೇಟೆ ಸೇವಾ ಕೇಂದ್ರದ ಪ್ರಬಂದಕರಾದ ಅಭಿಷೇಕ್
ಸಮಾಜ ಸೇವಕರಾದ ಇಂದ್ರೋಜಿ ರಾವ್ ಹಾಜರಿದ್ದರು.
ಸೋಮವಾರಪೇಟೆ ಯೋಜನಾಧಿಕಾರಿಗಳಾದ ಪ್ರಕಾಶ್ ರವರು ಸ್ವಾಗತಿಸಿದರು. ಧ.ಗ್ರಾ.ಯೋ ವಿರಾಜಪೇಟೆ ಕ್ರಷಿ ಆದಿಕಾರಿ ಚೇತನ್ ನಿರೂಪಿಸಿ, ಸೋಮವಾರಪೇಟೆ ಕ್ರಷಿ ಅಧಿಕಾರಿ ಗೀತಾರವರು ವಂದಿಸಿದರು. ನಂತರ ಸಮೀಪದ ಮಳ್ಳಲ್ಲಿ ಗ್ರಾಮದಲ್ಲಿರುವ ಪ್ರವೀಣ್ (ಆಶಾ ಹೋಟೆಲ್ ) ರವರ ಗದ್ದೆಯಲ್ಲಿ ಯಾಂತ್ರಿಕ್ರತ ಭತ್ತದ ನಾಟಿ ಯ ಪ್ರತ್ಯಕ್ಷಿಕೆಯನ್ನು ನೀಡಲಾಯಿತು. ಕ್ಯೂಬೋಟೋ ಕಂಪನೀಯ ಹಾಸನ ಶಾಖೆ ಸಿಬ್ನಂದಿ ಸತೀಶ್ ರವರು ಯಂತ್ರದಲ್ಲಿ ಭತ್ತ ನಾಟಿ ಮಾಡುವ ಬಗ್ಗೆ ಮಾಹಿತಿ ನೀಡಿದರು.
ಈ ತರಬೇತಿ ಕಾರ್ಯಾಗಾರದಲ್ಲಿ ಸ್ಥಳಿಯ ರ್ಯೆತರು
ಸೋಮವಾರಪೇಟೆ .ಮಡಿಕೇರಿ. ವಿರಾಜಪೇಟೆ .ಪಿರಿಯಾಪಟ್ಟಣ. ಆರಕಲಗೋಡು ತಾಲೂಕಿನ ಸೇವಾ ಕೇಂದ್ರದ 40 ಯಂತ್ರ ಚಾಲಕರು ಭಾಗವಹಿಸಿದ್ದರು.




No comments
Post a Comment