ಮಡಿಕೇರಿ ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಕೋವಿಡೇತರ ಸೇವೆಗಳಿಗೆ‌ ಅವಕಾಶ

No comments

ಮಡಿಕೇರಿ (Times Of Coorg) : ದಿನಾಂಕ:25-06-2020 ರಿಂದ ಕೋವಿಡೇತರ ಸೇವೆಗಳನ್ನು ನೀಡುತ್ತಿರುವ ಮಡಿಕೇರಿ ನಗರದ ಅಶ್ವಿನಿ ಆಸ್ಪತ್ರೆಯನ್ನು (ಜಿಲ್ಲಾ ಆಸ್ಪತ್ರೆ) ಸೋಂಕು ನಿವಾರಣೆಗೊಳಿಸುವ ಕಾರ್ಯದ ನಿಮಿತ್ತ ಸದರಿ ಆಸ್ಪತ್ರೆಯಲ್ಲಿ ತುರ್ತು ಮತ್ತು ಆಕಸ್ಮಿಕ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳನ್ನು ನಿಲ್ಲಿಸಲಾಗಿತ್ತು. 

 ಪ್ರಸ್ತುತ ಅಶ್ವಿನಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸೋಂಕು ನಿವಾರಣೆಗೊಳಿಸಲಾಗಿದೆ  ಮತ್ತು ಸದರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಪೈಕಿ ಒಟ್ಟು 28 ವೈದ್ಯರು, 49 ದಾದಿಯರು ಹಾಗೂ 16 ಗ್ರೂಪ್ ಡಿ ವೃಂದದ ನೌಕರರು ಮತ್ತು ಇತರೆ ಆಸ್ಪತ್ರೆಯ 12 ಜನ ಸಿಬ್ಬಂದಿಗಳಿಗೆ ಕೋವಿಡ್ ಪರೀಕ್ಷಾ ವರದಿಯು ನೆಗೆಟಿವ್ ಬಂದಿರುವುದರಿಂದ ದಿನಾಂಕ:07-07-2020 ರಿಂದ ಅಶ್ವಿನಿ ಆಸ್ಪತ್ರೆ (ಜಿಲ್ಲಾ ಆಸ್ಪತ್ರೆ) ಯಲ್ಲಿ ಎಲ್ಲಾ ಕೋವಿಡೇತರ ಸೇವೆಗಳನ್ನು ನೀಡಲಾಗುವುದು ಎಂದು ಈ ಮೂಲಕ ತಿಳಿಯಪಡಿಸಿದೆ.  ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಜಿಲ್ಲಾಡಳಿತ ಕೋರಿದೆ.

No comments

Post a Comment