ಬದ್ರಿಯಾ ಗಲ್ಫ್ ಅಸೋಸಿಯೇಷನ್ ವತಿಯಿಂದ ಶನಿವಾರಸಂತೆಯ ಗೋಪಾಲಪುರ ಸೀಲ್ ಡೌನ್ ಪ್ರದೇಶದ ಜನರಿಗೆ ಆಹಾರ ಕಿಟ್ ವಿತರಣೆ
ಶನಿವಾರಸಂತೆ (Times Of Coorg): ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾದ ಶನಿವಾರಸಂತೆಯ ಗೋಪಾಲಪುರ ಭಾಗದ ನಿರ್ಬಂಧಿತ ಪ್ರದೇಶದ ಜನರಿಗೆ
ಬದ್ರಿಯಾ ಗಲ್ಫ್ ಅಸೋಸಿಯೇಷನ್ ವತಿಯಿಂದ ಆಹಾರ ಕಿಟ್ ವಿತರಿಸಿದರು.
ಸೀಲ್ ಡೌನ್ ಹಿನ್ನೆಲೆಯಲ್ಲಿ ಗ್ರಾಮದ ಜನರು ಸಂಕಷ್ಟದಲ್ಲಿರುವುದನ್ನು ಮನಗಂಡ ಅನಿವಾಸಿ ಭಾರತೀಯ ಯುವಕರ ತಂಡವಾದ ಬದ್ರಿಯಾ ಗಲ್ಫ್ ಅಸೋಸಿಯೇಷನ್ ಸಂಘಟನೆಯವರು ಹಣವನ್ನು ಸಂಗ್ರಹಿಸಿ ಗ್ರಾಮದ ಹಿರಿಯರ ಮೂಲಕ ಆಹಾರ ಕಿಟ್ ವಿತರಿಸಿದರು. ಗ್ರಾಮದ ಹಿರಿಯ ಮುಖಂಡರಾದ ಶೇಕಬ್ಬಾ ಹಾಜಿ ಹಾಗೂ ಹಸೈನಾರ್ ಉಸ್ತಾದ್ ನೇತೃತ್ವದಲ್ಲಿ ಕಿಟ್ ವಿತರಣೆ ಮಾಡಲಾಯಿತು.


No comments
Post a Comment