ಕೊಡಗು ಜಿಲ್ಲೆಯಲ್ಲಿ ಶನಿವಾರ ಪೂರ್ಣ ದಿನ ಲಾಕ್ ಡೌನ್ ಇರುವುದಿಲ್ಲ : ಭಾನುವಾರ ಪೂರ್ಣದಿನ ಲಾಕ್ ಡೌನ್
ಮಡಿಕೇರಿ (Times Of Coorg) :ಸರ್ಕಾರದ ಇತ್ತೀಚಿನ ಆದೇಶದಂತೆ ಹಾಲಿ ಕೊಡಗು ಜಿಲ್ಲೆಯಲ್ಲಿ ದಿನಾಂಕ 15-07-2020 ರಿಂದ 31-07-2020ರ ವರೆಗೆ ಜಾರಿಯಲ್ಲಿರುವಂತೆ ಹೊರಡಿಸಲಾಗಿದ್ದ ನಿರ್ಬಂಧಕಾ ಮಾರ್ಪಡಿಸಿದ್ದು, ದಿನಾಂಕ 25.07.2020ರ ಶನಿವಾರದಂದು ಪೂರ್ಣದಿನದ ಲಾಕ್ ಡೌನ್ ಇರುವುದಿಲ್ಲ. ದಿನಾಂಕ 26.07.2020ರ ಭಾನುವಾರದಂದು ಪೂರ್ಣದಿನದ ಲಾಕ್ ಡೌನ್ ಇರುತ್ತದೆ. ವಾರದ ಎಲ್ಲಾ ದಿನಗಳಲ್ಲಿ ರಾತ್ರಿ 9:00 ಗಂಟೆಯಿಂದ ಬೆಳಗ್ಗೆ 5:00ಗಂಟೆಯ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.
ಬೆಳಗ್ಗೆ 6:00 ರಿಂದ 8:00 ಮತ್ತು ಸಂಜೆ 5:00 ರಿಂದ 7:00 ಗಂಟೆಯವರೆಗೆ ಮಾತ್ರ ಉದ್ಯಾನವನಗಳಲ್ಲಿ ಸ್ಥಳೀಯರ ವಾಯು ವಿಹಾರಕ್ಕಾಗಿ ಈ ಹಿಂದೆ ಸಮಯ ನಿಗಧಿಪಡಿಸಲಾಗಿತ್ತು. ಆದರೆ, ಈ ಉದ್ಯಾನವನಗಳಲ್ಲಿ ಕುಳಿತುಕೊಳ್ಳುವ ಬೆಂಚ್ ಗಳ ಬಳಕೆ ಮಾಡತಕ್ಕದ್ದಲ್ಲ ಎಂದು ಜಿಲ್ಲಾಧಿಕಾರಿ ಅನ್ನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

No comments
Post a Comment