ಕೊಡಗಿನಲ್ಲಿ ಕೊರೊನಾಗೆ ಮತ್ತೊಂದು ಬಲಿ: ಸೋಂಕಿತರ ಸಂಖ್ಯೆ 264ಕ್ಕೆ ಏರಿಕೆ

No comments

ಮಡಿಕೇರಿ (Times Of Coorg) : ಕೊಡಗು ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು‌ ಸಾವಾಗಿದ್ದು,ಜಿಲ್ಲೆಯಲ್ಲಿ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.

 ಹೃದಯ ಸಂಬಂಧಿತ ಸಮಸ್ಯೆಯಿಂದ ವಿರಾಜಪೇಟೆ ಖಾಸಗಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದ, ವಿರಾಜಪೇಟೆ ತಾಲ್ಲೂಕಿನ ಹುದಿಕೇರಿ ಸಮೀಪದ ಹೈಸೊಡ್ಲೂರುವಿನ 58 ವರ್ಷ ಪ್ರಾಯದ ವ್ಯಕ್ತಿ ಜುಲೈ14 ಮೃತಪಟ್ಟಿದ್ದರು.
ಮೃತರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿತ್ತು.
ಶನಿವಾರ ಅವರಿಗೆ ಸೋಂಕು ತಗುಲಿರುವುದು ಧೃಡಪಟ್ಟಿದೆ.

ಹೊಸದಾಗಿ 09 ಮಂದಿಗೆ ಪಾಸಿಟಿವ್

ಜಿಲ್ಲೆಯಲ್ಲಿ ಶನಿವಾರ ದಿನ ಹೊಸದಾಗಿ 09 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಧೃಡಪಟ್ಟಿದೆ.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 264ಕ್ಕೆ ಏರಿಕೆಯಾಗಿದೆ.
ಇದುವರೆಗೆ ಸೋಂಕಿನಿಂದ ಐವರು ಮೃತಪಟ್ಟಿದ್ದಾರೆ.
174 ಮಂದಿ ಗುಣಮುಖರಾಗಿದ್ದು, 85 ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಸಕ್ರಿಯವಾಗಿದೆ.
ಕಂಟೈನ್ಮೆಂಟ್ ಝೋನ್ ಗಳ‌ ಸಂಖ್ಯೆ 110ಕ್ಕೆ ಏರಿಕೆಯಾಗಿದೆ.

No comments

Post a Comment