ಕೋವಿಡ್-19 : ಸಂಕಷ್ಟದಲ್ಲಿರುವವರಿಗೆ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ರಾಷ್ಟ್ರೀಯ ಸಮಿತಿ ವತಿಯಿಂದ ಆಹಾರ ಸಾಮಗ್ರಿಗಳ ವಿತರಣೆ

No comments

ಮಡಿಕೇರಿ (Times Of Coorg) : ಸುನ್ನಿ ಯುವಜನ ಸಂಘ (ಎಸ್ ವೈ ಎಸ್) ಕೊಡಗು ಜಿಲ್ಲಾ ಸಮಿತಿಯೊಂದಿಗೆ ಕೈಜೋಡಿಸಿ ಜಿಲ್ಲೆಯ ಸಾಂತ್ವನ ಕಾರ್ಯಕ್ರಮಗಳೊಂದಿಗೆ ಕೈಜೋಡಿಸುತ್ತಿರುವ ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಸಿಯೇಷನ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ವತಿಯಿಂದ  ಮಡಿಕೇರಿ ಕ್ವಾರಂಟೈನಿನಲ್ಲಿರುವರಿಗೆ ಆಹಾರ ಸಾಮಗ್ರಿಗಳ ವಿತರಣೆ ಬುಧವಾರ ಮರ್ಕಝುಲ್ ಹಿದಾಯ ಕೊಟ್ಟಮುಡಿಯಲ್ಲಿ ನಡೆಯಲಾಯಿತು.

 ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಸುನ್ನಿ ಸಂಘ ಕುಟುಂಬಗಳ ನೇತಾರರೂ ಭಾಗವಹಿಸಿದ್ದರು, ಸಯ್ಯದ್ ಇಲ್ಲಾಸ್ ಸಖಾಫಿ ತಂಙಳ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅದವಯಲ್ ಮುಹಮ್ಮದ್ ಹಾಜಿ  ಉದ್ಘಾಟಿಸಿದರು, ಪ್ರಸ್ತುತ ಕಾರ್ಯಕ್ರಮದ ಮುನ್ನುಡಿ ಭಾಷಣವನ್ನು KSWA KSA ಕೋಡಿನೇಟರ್ ಹಫೀಳ್ ಸಅದಿ ಮಾತನಾಡಿ ಕೊಡಗು ಸುನ್ನಿ ವೆಲ್ಫೇರ್ ಅಸ್ಸೋಸಿಯೇಷನ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿ ಇದುವರೆಗೆ ಕೊಡಗಿನಲ್ಲಿ ನಡೆಸಿದ್ದ ಸ್ವಾಂತನ ಕಾರ್ಯಾಚರಣೆಯನ್ನು ವಿವರಿಸಿದರು KSWA KSA ನೇತಾರರಾದ ಅಬ್ದುಲ್ ಖಾದರ್ ಎರುಮಾಡ್, ರಫೀಕ್ ನೆಲ್ಲಿ ಹುದಿಕೇರಿ, ಮತ್ತು KSWA ದ  ಹಲವಾರು ಸದಸ್ಯರು ಭಾಗವಹಿಸಿದ್ದರು ಖಾಸಿಂ ಸಖಾಫಿ ಕೊಂಡಂಗೇರಿ ಸ್ವಾಗತಿಸಿ ವಂದಿಸಿದರು.




No comments

Post a Comment