ಚೀನಾ ಸೈನಿಕರ ಕುತಂತ್ರಿ ಬುದ್ಧಿಯನ್ನು ಖಂಡಿಸಿ ಕುಶಾಲನಗರದಲ್ಲಿ ಯೂತ್ ಕಾಂಗ್ರೆಸ್ ಪ್ರತಿಭಟನೆ

No comments

ಕುಶಾಲನಗರ (Times Of Coorg) : ಭಾರತದ ಯೋಧರ ವಿರುದ್ದ ನಡೆದ ಚೀನಾ ಸೈನಿಕರ ಉದ್ದಟತನವನ್ನು ಖಂಡಿಸಿ ಯೂತ್ ಕಾಂಗ್ರೆಸ್ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿತು. ಐ.ಬಿ ರಸ್ತೆಯಿಂದ ಮೆರವಣೆ ಬಂದ ಕಾಂಗ್ರೆಸ್ ಕಾರ್ಯಕರ್ತರು, ಕಾರ್ಯಪ್ಪ ವೃತ್ತದಲ್ಲಿ ನೆರೆದು ಪ್ರತಿಭಟನೆ ನಡೆಸಿದರು. ಚೀನಾದ ವಿರುದ್ದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು. ಅಲ್ಲದೇ ಕುತಂತ್ರಿ ಚೀನಾಕ್ಕೆ ತಕ್ಕಪಾಠ ಕಲಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ, ಕಾಂಗ್ರೆಸ್ ಮುಖಂಡ ವಿ.ಪಿ ಶಶಿಧರ್, ಭಾರತ ಮತ್ತು ಚೀನಾದ ಗಡಿಯಲ್ಲಿ ಒಂದು ತಿಂಗಳಿನಿಂದಲೂ ಉದ್ನಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಕೊರೆಯುವ ಚಳಿಯಲ್ಲಿಯೂ ದೇಶದ ರಕ್ಷಣೆ ಮಾಡುತ್ತಿದ್ದ, ಭಾರತೀಯ ವೀರಯೋಧರ ಮೇಲೆ, ಕುತಂತ್ರಿ ಬುದ್ದಿ ಮೆರೆಯುವ ಮೂಲಕ, 20 ಯೋಧರ ಅಮೂಲ್ಯ ಜೀವವನ್ನು ತೆಗೆದಿದೆ. ಇದು ಅಕ್ಷಮ್ಯ ಅಪರಾಧ ನಮ್ಮ ಯೋಧರ ಪ್ರಾಣ ಕಳೆದ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು. ಉದ್ವಿಗ್ನ ಸ್ಥಿತಿ ಶಮನ ಮಾಡುವ ನಿಟ್ಟಿನಲ್ಲಿ ರಾಜತಾಂತ್ರಿಕ ಮಾತುಕತೆ ನಡೆದಿದ್ದರೆ , ಯೋಧರ ಪ್ರಾಣ ರಕ್ಷಣೆ ಮಾಡಬಹುದಿತ್ತು ಎಂದರು.

ನಂತರ ಮಾತನಾಡಿದ ಮಡಿಕೇರಿ ಕ್ಷೇತ್ರದ ಯೂತ್‍ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಗೌಡ ಹಾನಗಲ್ ನಮ್ಮ ವೀರಯೋಧರ ಪ್ರಾಣಕ್ಕೆ ಕುತ್ತಾದ ಚೀನಾಕ್ಕೆ ತಕ್ಕ ಪಾಠ ಕಲಿಸಬೇಕು. ಅದಕ್ಕಾಗಿ ಚೀನಾದ ಎಲ್ಲಾ ಸರಕುಗಳಿಗೂ ನಿರ್ಭಂದ ಹೇರಬೇಕು ಎಂದರು.

ಈ ಸಂದರ್ಭ ಕಾಂಗ್ರೆಸ್ ಪ್ರಮುಖ ರಾದ ಕೆ.ಪಿ.ಚಂದ್ರಕಲಾ, ಶಿವಶಂಕರ್, ಪುನೀತ್, ಪ್ರಮೋದ್ ಮುತ್ತಪ್ಪ, ಖಲೀಮುಲ್ಲಾ, ಜೋಸೇಫ್ ವಿಕ್ಟರ್ ಸೋನ್ಸ್, ಜಯಪ್ರಕಾಶ್, ಮಹದೇವ್, ಮತ್ತಿತರರು ಹಾಜರಿದ್ದರು.

No comments

Post a Comment