ಕಲ್ಲುಬಾಣೆ ರಸ್ತೆ ಅವ್ಯವಸ್ಥೆ ಗುಂಡಿ ಮುಚ್ಚಿದ ಎಸ್ ಕೆ ಎಸ್ ಎಸ್ ಎಪ್ ವಿಕಾಯ ತಂಡ

No comments
ವಿರಾಜಪೇಟೆ ; ಕಳೆದ ಹಲವು ವರ್ಷಗಳಿಂದ ದುರಸ್ತಿ ಕಾಣದೆ ಗುಂಡಿಮಯವಾಗಿದ್ದ ಕಲ್ಲುಬಾಣೆ- ಪಂಜರಪೇಟೆ  ಸಂಪರ್ಕದ  ರಸ್ತೆಗೆ  ಎಸ್ ಕೆ ಎಸ್ಎಸ್ಎಫ್ ಸಂಘಟನೆಯ ವಿಕಾಯ ತಂಡದ ಸದಸ್ಯರು ಗುಂಡಿ ಮುಚ್ಚಿ ಶ್ರಮಧಾನ ಮಾಡಿ ಮಾದರಿಯಾಗಿದ್ದಾರೆ.
ವಿರಾಜಪೇಟೆ ಸಮೀಪ  ಪಂಜರ ಪೇಟೆಯಿಂದ ಕಲ್ಲುಬಾಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎರಡು ಕಿಲೋಮೀಟರ್ ರಸ್ತೆ  ಅಭಿವೃದ್ಧಿ ಕಾಣದೇ ಅವ್ಯವಸ್ಥೆಯಿಂದ ಕೂಡಿದ್ದು ಗುಂಡಿ ಬಿದ್ದ  ರಸ್ತೆಯಲ್ಲಿ ವಾಹನ ಸವಾರರು ಸಾರ್ವಜನಿಕರು ವಿದ್ಯಾರ್ಥಿಗಳು ಹಾಗೂ ಕಾರ್ಮಿಕರು ನಡೆದಾಡಲೂ ಸಾಧ್ಯವಾಗದಂಥ  ಪರಿಸ್ಥಿತಿ ನಿರ್ಮಾಣವಾಗಿತ್ತು 
ಕಲ್ಲುಬಾಣೆಯ ಎಸ್ ಕೆಎಸ್ಎಸ್ಎಫ್ ಸಂಘಟನೆಯ ವಿಕಾಯ ತಂಡದ 20ಕ್ಕೂ ಹೆಚ್ಚು ಸದಸ್ಯರುಗಳು ವಾಹನವೊಂದರಲ್ಲಿ   ಕಲ್ಲು ಮಣ್ಣುಗಳನ್ನು ತಂದು ರಸ್ತೆಯುದ್ದಕ್ಕೂ ಗುಂಡಿ ಮುಚ್ಚುವ ಮೂಲಕ ಶ್ರಮದಾನ ಮಾಡಿ ಮಾದರಿಯಾಗಿದ್ದಾರೆ.
ಯುವಕರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭ
ಜಮಾಆತ್  ಅಧ್ಯಕ್ಷ ಅಫ್ಸಲ್ , ಕಾರ್ಯದರ್ಶಿ ನೌಷದ್ ,ಎಸ್ ಕೆ ಎಸ್ಎಸ್ಎಫ್ ಅಧ್ಯಕ್ಷ  ಯೂಸುಫ್ ,ಕಾರ್ಯದರ್ಶಿ ಸಾಹುದಲಿ ,ವಿಕಾಯ ತಂಡದ ಪ್ರಮುಖರಾದ ಸಹದೀರ್,
 ಸಿಹಾಬ್, ಜೆಮ್ಸಿ, ರಸೀದ್, ಅನಾಸ್, ಸಫೀಕ್, ಅಫ್ಜಲ್, ಅಜ್ಮಲ್ ,ಸಫೀರ್, ಸಫ್ವಾನ್, ಅನೀಸ್, ಸಾಫಿ, ಸುಹೇಬ್,   ಆಸೀಸ್, ನಿಜಾಮ್, ಶಂಶೀರ್, ಮುಬಶೀರ್ ಸೇರಿದಂತೆ ಮತ್ತಿತರರು ಇದ್ದರು

No comments

Post a Comment