ಎಸ್.ಡಿ.ಪಿ.ಐ ಕುಶಾಲನಗರ ಘಟಕದ ವತಿಯಿಂದ ಪಕ್ಷದ 11ನೇ ಸಂಸ್ಥಾಪನಾ ದಿನಾಚರಣೆ
ಕುಶಾಲನಗರ (Times Of Coorg) : ಎಸ್.ಡಿ.ಪಿ.ಐ ಕುಶಾಲನಗರ ಘಟಕದ ವತಿಯಿಂದ ಎಸ್.ಡಿ.ಪಿ.ಐ ಪಕ್ಷದ 11 ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ "ದ್ವಜಾರೋಹಣ ಕಾರ್ಯಕ್ರಮ"ನ ಪಕ್ಷದ ಕರ್ನಾಟಕ ರಾಜ್ಯ ಕಾರ್ಯದರ್ಶಿ ಆಫ್ಸರ್ ಕೊಡ್ಲಿಪೇಟೆ ಹಾಗೂ ಕುಶಾಲನಗರ ನಗರಾಧ್ಯಕ್ಷರಾದ ಬಾಷಾ ದ್ವಜಾರೋಹಣ ನೆರವೇರಿಸಿದರು.
ಕೋವಿಡ್ 19 ರ ಮುಂಜಾಗ್ರತಾ ಕ್ರಮವಾಗಿ ಸರಕಾರ ನೀಡಿರುವ ಎಲ್ಲಾ ಸೂಚನೆಯನ್ನು ಅನುಸರಿಸಿ ಬಹಳ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಭಾರತ -ಚೀನಾದ ಗಡಿಯಲ್ಲಿ ಹುತಾತ್ಮರಾದ ವೀರ ಯೋದರಿಗೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಲಾಯಿತು.
ಸಂಸ್ಥಾಪನಾ ದಿನವನ್ನು ಉದ್ದೇಶಿಸಿ ರಾಜ್ಯ ನಗರಾಧ್ಯಕ್ಷರಾದ ಬಾಷಾ ,ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಮಿಪೇಟೆ ಹಾಗೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳಾದ ತಾಲ್ಲೂ ಮುಸ್ಲಿ ಒಕ್ಕೂಟ,ಕುಶಾಲನಗರ ಇದರ ಅಧ್ಯಕ್ಷರಾದ ಹನೀಫ್ ಮಾತನಾಡಿದರು.
ಕೋವಿಡ್ 19 ಬಗ್ಗೆ ಜನಜಾಗೃತಿ:-
ಸಂಸ್ಥಾಪನಾ ದಿನಾಚರಣೆ ಭಾಗವಾಗಿ ಕೊರೋನ ವೈರಸ್ ಮಹಾ ಮಾರಿಯ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತಿ ಇದರ ಅಂಗವಾಗಿ ಕುಶಾಲನಗರ ನಗರದ ಕಾರ್ಯನಿರತ ಟ್ರಾಫಿಕ್ ಪೋಲಿಸ್ ಸಿಬ್ಬಂದಿಗಳಿಗೆ,ಬೀದಿ ಬದಿ ವ್ಯಾಪಾರಿಗಳಿಗೆ ,ಗೃಹ ರಕ್ಷಣಾ ಸಿಬ್ಬಂದಿಗಳಿಗೆ, ಕೊಪ್ಪ ಚೆಕ್ಪೋಸ್ಟ್ ನ ಪೋಲಿಸ್ ಸಿಬ್ಬಂದಿ ಗಳಿಗೆ ಮಾಸ್ಕ್,ಹಾಗೂ ಸ್ಯಾನಿಟೈಸರ್ ವಿತರಿಸಲಾಯಿತು.
ಎಸ್.ಡಿ.ಪಿ.ಐ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ, ಕುಶಾಲನಗರ ನಗರಾಧ್ಯಕ್ಷರಾದ ಬಾಷಾ,ಉಪಾಧ್ಯಕ್ಷರಾದ ಮಂಸೂರ್,ತಾಲ್ಲೂಕು ಮುಸ್ಲಿಂ ಒಕ್ಕೂಟ,ಕುಶಾಲನಗರ ಇದರ ಅಧ್ಯಕ್ಷರಾದ ಹನೀಫ್,ಹಾಗೂ ಕಾರ್ಯಕರ್ತರು,ಸಾರ್ವಜನಿಕರು ಉಪಸ್ಥಿತರಿದ್ದರು.







No comments
Post a Comment