TOC ಸೋಮವಾರಪೇಟೆ:ಕಾವೇರಿ ಕಾಲೇಜು ಗೋಣಿಕೊಪ್ಪಲು ಎನ್.ಎಸ್.ಎಸ್ ವಿದ್ಯಾರ್ಥಿಗಳು ಪ್ರತಿವರ್ಷದಂತೆ ಈ ಬಾರಿಯೂ ಪಾಲಿಬೆಟ್ಟದ ಅಂಗವಿಕಲ ಶಾಲೆ ಚೇಷಯ ಹೊಂನಲ್ಲಿ ಹೊಸ ವರ್ಷದ ಆಚರಣೆ ಮಾಡಲಾಯಿತು. ಎನ್.ಎಸ್ ಎಸ್ ಅಧಿಕಾರಿಯವರ ಮಾರ್ಗದರ್ಶನಲ್ಲಿ ವಿದ್ಯಾರ್ಥಿಗಳು ಕೇಕ್ ಕತ್ತರಿಸಿ ವಿಕಲಚೇತನ ವಿದ್ಯಾರ್ಥಿಗಳಿಗೆ ತಿನ್ನಿಸಿದರು.ಅಲ್ಲದೇ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಆನಂದಿಸಿದರು. ಹಾಡಿ ಮನೋರಂಜನೆಯನ್ನು ನೀಡಿದರು. ಅಧುನಿಕ ಕಾಲದಲ್ಲಿ ಹೊಸ ವರ್ಷ ಆಚರಣೆ ಎಂಬ ಹೆಸರಿನಲ್ಲಿ ರಾತ್ರಿ ಪೂರ್ತಿ ಕುಡಿದು ಮೊದಲ ದಿನವೇ ಕುಡಿದ ಗುಂಗಿನಲ್ಲಿ ಮಲಗುವ ಯುವಜನರಿರುವ ಈ ಕಾಲದಲ್ಲಿ ವಿದ್ಯಾರ್ಥಿಗಳು ಈ ರೀತಿ ವರ್ಷ ಆಚರಣೆ ಮಾಡುವುದು ಆರ್ಥ ಪೂರ್ಣವಾಗಿದೆ. ಈ ಸಂದರ್ಭದಲ್ಲಿ ಕಾವೇರಿ ಕಾಲೇಜಿನ ಎನ್.ಎಸ್.ಎಸ್.ಅಧಿಕಾರಿ ಎನ್.ಪಿ.ರೀತಾ,ಶಾಲೆಯ ಮುಖ್ಯೋಪಾಧಾಯ್ಯರಾದ ಶಿವರಾಜ್ , ಶಾಲೆ ಶಿಕ್ಷಕರು,ಆಡಳಿತ ವರ್ಗದವರು,ಎನ್.ಎಸ್.ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ವಿಕಲಚೇತನ ವಿದ್ಯಾರ್ಥಿಗಳು ಸಂಭ್ರಮಿಸಿದರು.



No comments
Post a Comment