TOC ಅಮ್ಮತ್ತಿ :- ಹೊಸ ವರ್ಷಾಚರಣೆಯ ಪ್ರಯುಕ್ತ ಅಮ್ಮತ್ತಿಯ ಪ್ರತಿಶ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದಾದ ನೇತಾಜಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರೇರಣಾ ತರಬೇತಿಯನ್ನು ಆಯೋಜಿಸಲಾಯಿತು.
ತೌಸೀಫ್ ಅಹ್ಮದ್ ವಿದ್ಯಾರ್ಥಿಗಳಿಗೆ ಹೊಸ ವರ್ಷ ಮತ್ತು ನಾಯಕತ್ವ ಎಂಬ ವಿಷಯದಲ್ಲಿ ತರಗತಿ ನಡೆಸಿಕೊಟ್ಟರು.
ತರಗತಿಯಲ್ಲಿ ಮಾತನಾಡಿದ ಅವರು ಹೊಸ ವರ್ಷದ ಆರಂಭದಲ್ಲೇ ನಯಕರಾಗುವ ಛಲವನ್ನು ಇಟ್ಟುಕೊಳ್ಳಿ , ನಿಮ್ಮ ಹಿಂದೆ ಇರುವವರನ್ನು ಬರೀ ಅನುಯಾಯಿಗಳನ್ನಾಗಿಸದೆ ಪ್ರತಿಯೊಬ್ಬರನ್ನು ನಾಯಕನಾಗಿಸಿ ಎಂದರು.
ತರಬೇತಿಯಲ್ಲಿ ಹಲವಾರು ವಿಭಿನ್ನವಾದ ಚಟುವಟಿಕೆಗಳನ್ನು ಮಾಡಿಸಲಾಯಿತು.
ಈ ಸಂದರ್ಭ ನೇತಾಜಿ ಶಾಲೆಯ ಮುಖ್ಯೋಪಾಧ್ಯಾಯರಾದ ಝರೀನ ಖಾನಂ ಹಾಗು ಶಿಕ್ಷಕ ವೃಂದದವರು ಹಾಜರಿದ್ದರು.




No comments
Post a Comment